For Quick Alerts
ALLOW NOTIFICATIONS  
For Daily Alerts

ಆಂಧ್ರ ಶೈಲಿಯಲ್ಲಿ ಮೊಟ್ಟೆ ಗ್ರೇವಿ ಮಾಡಿ ನೋಡಿ

|

ಇಲ್ಲಿ ನಾವು ನೀಡಿರುವುದು ಪಕ್ಕಾ ಆಂಧ್ರ ಶೈಲಿಯ ರೆಸಿಪಿಯಾಗಿದೆ. ಆಂಧ್ರ ಅಡುಗೆಯೆಂದರೆ ಖಾರ ಸ್ವಲ್ಪ ಅಧಿಕವೇ ಇರುತ್ತದೆ, ಆದರೆ ಈ ಗ್ರೇವಿಯನ್ನು ಮಿತಿಯಾದ ಖಾರದಲ್ಲಿ ಮಾಡಿದರೂ ಅಷ್ಟೇ ರುಚಿಕರವಾಗಿರುತ್ತದೆ, ಆದ್ದರಿಂದ ಖಾರ ಇಷ್ಟಪಡದವರು ಖಾರ ಸ್ವಲ್ಪ ಕಮ್ಮಿ ಹಾಕಿ ಈ ಅಡುಗೆ ತಯಾರಿಸಿ.

ಈ ಮೊಟ್ಟೆ ಗ್ರೇವಿ ಏನಿದ್ದರೂ ಬಿಸಿ-ಬಿಸಿಯಾದ ಅನ್ನದ ಜೊತೆ ತಿನ್ನಲು ತುಂಬಾ ರುಚಿ. ಬನ್ನಿ ಈ ಮೊಟ್ಟೆ ಗ್ರೇವಿ ಮಾಡುವ ವಿಧಾನ ನೋಡೋಣ:

Andra Style Gravy Recipe

ಬೇಕಾಗುವ ಸಾಮಾಗ್ರಿಗಳು
ಬೇಯಿಸಿ ಮೊಟ್ಟೆ 6
ಅರಿಶಿಣ ಪುಡಿ
ಖಾರದ ಪುಡಿ ಒಂದೂವರೆ ಚಮಚ ಅಥವಾ ನಿಮ್ಮ ಖಾರಕ್ಕೆ ತಕ್ಕಷ್ಟು
ಎಣ್ಣೆ
ಸಾಸಿವೆ
ಮೆಂತೆ ಅರ್ಧ ಚಮಚ
ಜೀರಿಗೆ ಅರ್ಧ ಚಮಚ
ಒಣ ಮೆಣಸು1
ಹಸಿ ಮೆಣಸು 1-2
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಒಂದೊಂದು ಚಮಚ
ಈರುಳ್ಳಿ
ಕೊತ್ತಂಬರಿ ಪುಡಿ ಅರ್ಧ ಚಮಚ
ಜೀರಿಗೆ ಪುಡಿ ಅರ್ಧ ಚಮಚ
ಹುಣಸೆ ಹಣ್ಣಿನ ರಸ 2 ಚಮಚ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

* ಬೇಯಿಸಿದ ಮೊಟ್ಟೆಗಳನ್ನು ಸಮ ಅರ್ಧ ಭಾಗಗಳಾಗಿ ಕತ್ತರಿಸಿ, ಅದಕ್ಕೆ ಅರ್ಧ ಚಮಚ ಅರಿಶಿಣ ಪುಡಿ ಮತ್ತು ಒಂದು ಅಥವಾ ಒಂದೂವರೆ ಚಮಚ ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ 3 ಚಮಚ ಎಣ್ಣೆ ಹಾಕಿ ಪಾತ್ರೆಯನ್ನು ಉರಿ ಮೇಲೆ ಇಟ್ಟು ಅದರಲ್ಲಿ ಮೊಟ್ಟೆ ಹಾಕಿ, ಮೊಟ್ಟೆಗಳ ಬಣ್ಣ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ಈಗ ಮತ್ತೊಂದು ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಅದರಲ್ಲಿ ಸಾಸಿವೆ ಹಾಕಿ ನಂತರ ಮೆಂತೆ ಮತ್ತು ಜೀರಿಗೆ ಹಾಕಿ, ನಂತರ ಒಣ ಮೆಣಸನ್ನು ಮುರಿದು ಹಾಕಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಹುರಿಯಿರಿ. ನಂತರ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

* ನಂತರ ಅರಿಶಿಣ ಸೇರಿಸಿ, ಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಹಾಕಿ ಸೌಟ್ ನಿಂದ ಆಡಿಸಿ. ನಂತರ 1/4 ಕಪ್ ನೀರು ಸೇರಿಸಿ, ಹುಣಸೆ ಹಣ್ಣಿನ ರಸ ಮತ್ತು ರುಚಿಗೆ ಉಪ್ಪು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ, ನಂತರ ಫ್ರೈ ಮಾಡಿದ ಮೊಟ್ಟೆ ಹಾಕಿ 2 ನಿಮಿಷ ಬಿಸಿ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಆಂಧ್ರ ಶೈಲಿಯ ಕೋಡಿ ಗುಡ್ಡು ಪುಲುಸು ಅಂದರೆ ಮೊಟ್ಟೆ ಗ್ರೇವಿ ರೆಡಿ.

English summary

Andra Style Gravy Recipe

Taste the spicy gravy of Andra and we bet that you can't stop eating over and over again!. The egg gravy tastes the best with hot rotis and even with toasted bread.
X
Desktop Bottom Promotion