For Quick Alerts
ALLOW NOTIFICATIONS  
For Daily Alerts

ಆಲೂ ಜಾಲ್ ಫ್ರೆಜಿ- ಖಾರದ ಗ್ರೇವಿ ರೆಸಿಪಿ

|

ಜಾಲ್ ಫ್ರಿಜಿ ಮೂಲತಃ ಪಾಕಿಸ್ತಾನ ಶೈಲಿಯ ಅಡುಗೆಯಾಗಿದ್ದರೂ ಭಾರತದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಭಾರತೀಯ ಹೋಟೆಲ್ ಗಳಲ್ಲಿ, ಡಾಬಾಗಳಲ್ಲಿ ಆಲೂ ಜಾಲ್ ಫ್ರೆಜಿ ದೊರೆಯುತ್ತದೆ.

ಜಾಲ್ ಫ್ರೆಜಿಯನ್ನು ಮಟನ್ ಚಿಕನ್ ಹಾಗೂ ತರಕಾರಿ ಹಾಕಿ ಕೂಡ ಮಾಡಬಹುದು. ಈ ಗ್ರೇವಿ ಖಾರವಾಗಿರುತ್ತದೆ. ಇಲ್ಲಿ ನಾವು ಆಲೂ ಬಳಸಿ ಜಾಲ್ ಫ್ರೆಜಿ ಮಾಡುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:

Aloo Jalfrezi: Spicy Side Dish Recipe

ಬೇಕಾಗುವ ಸಾಮಾಗ್ರಿಗಳು:
ಆಲೂಗಡ್ಡೆ 7-8 (ಬೇಯಿಸಿದ್ದು, ಸಿಪ್ಪೆ ಸುಲಿದಿರಬೇಕು)
ಈರುಳ್ಳಿ 2
ಶುಂಠಿ(ಒಂದು ಚಿಕ್ಕ ಪೀಸ್)
ಬೆಳ್ಳುಳ್ಳಿ ಎಸಳು 5-6
ಟೊಮೆಟೊ 1 (ಚಿಕ್ಕದಾಗಿ ಕತ್ತರಿಸಿದ್ದು)
ಹಸಿ ಮೆಣಸಿನ ಕಾಯಿ 1
ಒಣ ಮೆಣಸು 2
ಟೊಮೆಟೊ ಪೇಸ್ಟ್ ಅರ್ಧ ಕಪ್
ಅರಿಶಿಣ ಪುಡಿ ಅರ್ಧ ಚಮಚ
ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
ಗರಂ ಮಸಾಲ 1 ಚಮಚ
ಜೀರಿಗೆ 1 ಚಮಚ
ಸಾಸಿವೆ ಅರ್ಧ ಚಮಚ
ಮೆಂತೆ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ತುಪ್ಪ 2 ಚಮಚ
ನೀರು 1 ಕಪ್

ತಯಾರಿಸುವ ವಿಧಾನ:

* ಸಾರು ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ಅದಕ್ಕೆ ಜೀರಿಗೆ, ಪಲಾವ್ ಎಲೆ, ಸಾಸಿವೆ, ಮೆಂತೆ ಹಾಕಬೇಕು.

* ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಇದೇ ಸಮಯದಲ್ಲಿ ಬೇಯಿಸಿದ ಆಲೂಗೆಡ್ಡೆಯನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿಡಬೇಕು. ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವಾಗ ಹಸಿ ಮೆಣಸಿನ ಕಾಯಿ ಮತ್ತು ಒಣ ಮೆಣಸು ಹಾಕಿ ನಂತರ ಟೊಮೆಟೊವನ್ನು ಹಾಕಿ ಸೌಟ್ ನಿಂದ ಆಡಿಸಿ.

* ಟೊಮೆಟೊ ಸ್ವಲ್ಪ ಮೆತ್ತಗಾದಾಗ ಅರಿಶಿಣ ಪುಡಿ, ಖಾರದ ಪುಡಿ, ಗರಂ ಮಸಾಲ, ಉಪ್ಪು ಹಾಕಿ ನಂತರ ಟೊಮೆಟೊ ಸಾಸ್, ಆಲೂಗಡ್ಡೆ ಹಾಕಿ 1 ಕಪ್ ನೀರು ಹಾಕಿ ಗ್ರೇವಿ ರೀತಿಯಾಗುವವರೆಗೆ ಬೇಯಿಸಿ ನಂತರ ಉರಿಯಿಂದ ಇಳಿಸಿದರೆ ಆಲೂ ಜಾಲ್ ಫ್ರೆಜಿ ರೆಡಿ.

English summary

Aloo Jalfrezi: Spicy Side Dish Recipe | Variety Of Gravy Recipe | ಆಲೂ ಜಾಲ್ ಫ್ರೆಜಿ ರೆಸಿಪಿ | ಅನೇಕ ಬಗೆಯ ಗ್ರೇವಿ ರೆಸಿಪಿ

Jalfrezi recipes can be vegetarian or non-vegetarian. The jalfrezi recipes are spicy gravies that can be prepared with aloo, chicken, mutton or mix vegetables. Lets start with the basic aloo jalfrezi recipe. This side dish can be a spicy treat for main course.
X
Desktop Bottom Promotion