For Quick Alerts
ALLOW NOTIFICATIONS  
For Daily Alerts

ಸರಳ ತಯಾರಿಕೆಯ ಹರಿಕಾರ ತೊಂಡೆಕಾಯಿ ಗೊಜ್ಜು

|

ಮಳೆಗಾಲದಲ್ಲಿ ಮಾಡುವ ಪ್ರತಿಯೊಂದು ಖಾದ್ಯವೂ ರುಚಿಕರ ಮತ್ತು ಆರೋಗ್ಯಪೂರ್ಣವಾಗಿರುತ್ತದೆ. ಬಿಸಿಯಾಗಿ ಹೊಟ್ಟೆಗೆ ಹಿತವಾಗಿರುವ ಮಳೆಗಾಲದ ಖಾದ್ಯಗಳು ನಿಮ್ಮ ಬಾಯಿ ರುಚಿಯನ್ನು ಹೆಚ್ಚಿಸುವುದರ ಮೂಲಕ ನಿಮಗೆ ಆಹ್ಲಾದವನ್ನು ಸುಂದರ ಅನುಭೂತಿಯನ್ನು ನೀಡುತ್ತದೆ.

ಯಾವಾಗಲೂ ತಯಾರಿಸುವ ಸಾಂಬಾರು ಹುಳಿಗಿಂತ ಮಳೆಗಾಲದಲ್ಲಿ ನಾವು ಗೊಜ್ಜು, ತಂಬುಳಿ ಮೊದಲಾದ ಹಿತಕಾರಿ ಖಾದ್ಯಗಳನ್ನು ಸರಳವಾಗಿ ಊಟಕ್ಕೆ ಬಳಸಿಕೊಳ್ಳುತ್ತೇವೆ. ಹಳ್ಳಿಗಳಲ್ಲಿ ಹೆಚ್ಚು ಕಡಿಮೆ ಮಳೆಗಾಲದಲ್ಲಿ ತಯಾರಿಸುವಂತಹ ಒಂದು ಗೊಜ್ಜಿನ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ಹಣ್ಣು ತೊಂಡೆಕಾಯಿಯನ್ನು ಬಳಸಿ ಅದಕ್ಕೆ ಬೆಲ್ಲ, ಹುಳಿ ಹಸಿಮೆಣಸಿನ ಹದವಾದ ಮಿಶ್ರಣವನ್ನು ಬೆರೆಸಿ ಈ ಗೊಜ್ಜನ್ನು ತಯಾರಿಸಲಾಗುತ್ತದೆ. ಬಿಸಿ ಅನ್ನದೊಂದಿಗೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಈ ಗೊಜ್ಜು ತಯಾರಿಗೆ ತುಂಬಾ ಹೊತ್ತೇನೂ ಬೇಕಾಗಿಲ್ಲ. ನಿಮ್ಮ ಮಧ್ಯಾಹ್ನದ ಊಟದ ಮಜವನ್ನು ಹೆಚ್ಚಿಸುವ ಈ ಗೊಜ್ಜು ರೆಸಿಪಿ ನಿಮ್ಮ ಊಟದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ.

Tindoras gojju south canara special recipe

ಹಾಗಿದ್ದರೆ ಇಲ್ಲಿ ನಾವು ನೀಡಿರುವ ಹಣ್ಣು ತೊಂಡೆಕಾಯಿ ಗೊಜ್ಜಿನ ತಯಾರಿ ವಿಧಾನವನ್ನು ತಿಳಿದುಕೊಂಡು ಅದನ್ನು ತಯಾರಿಸಿ. ಸುಲಭವಾಗಿ ತಯಾರಿಸಬಹುದಾದ ಈ ಗೊಜ್ಜು ನಿಮ್ಮ ಬಾಯಿ ರುಚಿಯನ್ನು ಹಚ್ಚಿಸುವುದರೊಂದಿಗೆ ಮಳೆಗಾಲದ ಸರ್ವ ರೋಗಕ್ಕೂ ಉಪಶಮನಕಾರಿಯಾಗಿದೆ. ಮಧ್ಯಾಹ್ನದ ಭೋಜನಕ್ಕೆ ರುಚಿಯಾದ ತೊಂಡೆಕಾಯಿ ಹಣ್ಣು ಗೊಜ್ಜು

ಪ್ರಮಾಣ : 3
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು

ದಕ್ಷಿಣಕನ್ನಡ ಶೈಲಿಯ ತೊಂಡೆಕಾಯಿ ಪಲ್ಯ

ಸಾಮಾಗ್ರಿಗಳು
*ಹಣ್ಣು ತೊಂಡೆಕಾಯಿ - 25 - 30
*ದ್ರಾಕ್ಷಿ ಗಾತ್ರದ ಬೆಲ್ಲ - ಸ್ವಲ್ಪ
*ಸ್ವಲ್ಪ ಹುಳಿ
*ಹಸಿಮೆಣಸು - 2
*ಈರುಳ್ಳಿ - 1 ಸಣ್ಣದು
*ಉಪ್ಪು ರುಚಿಗೆ ತಕ್ಕಷ್ಟು
*ಸಾಸಿವೆ - 1 ಚಮಚ
*ಸ್ವಲ್ಪ ಇಂಗಿನ ಪುಡಿ
*ಕರಿಬೇವಿನೆಲೆ - 5-6 ಎಲೆ
*ಎಣ್ಣೆ - 1 ಚಮಚ

ಮಾಡುವ ವಿಧಾನ
* ಮೊದಲಿಗೆ ತೊಂಡೆಕಾಯಿಯನ್ನು ತೊಳೆದುಕೊಂಡು ಅದನ್ನು ಚೆನ್ನಾಗಿ ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ.
* ನಂತರ ಈ ತೊಂಡೆಕಾಯಿಗಳನ್ನು ಜಜ್ಜಿಕೊಳ್ಳಿ
* ತದನಂತರ ಜಜ್ಜಿದ ತೊಂಡೆಕಾಯಿ, ಸ್ವಲ್ಪ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ (2 ವಿಶಲ್) ಕುಕ್ಕರ್ ತಣ್ಣಗಾದ ನಂತರ ಚೆನ್ನಾಗಿ ಅವುಗಳನ್ನು ಹಿಸುಕಿಕೊಳ್ಳಿ.
* ಇನ್ನು ಸ್ವಲ್ಪ ಹುಳಿ ಮತ್ತು ನೀರನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು, ಚೆನ್ನಾಗಿ ಹಿಸುಕಿ ಒಂದೆಡೆ ಇರಿಸಿ. ಇದೇ ಸಮಯದಲ್ಲಿ ಈರುಳ್ಳಿ, ಹಸಿಮೆಣಸು, ಕರಿಬೇವಿನೆಲೆಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ
* ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಒಗ್ಗರಣೆ ತಯಾರಿಸಿ. ಇದು ಸಿಡಿಯುತ್ತಿದ್ದಂತೆ ಇಂಗಿನ ಪುಡಿ ಸೇರಿಸಿ ಮತ್ತು ಸ್ವಲ್ಪ ಸೆಕೆಂಡುಗಳ ಕಾಲ ಹಾಗೆ ಇರಿಸಿ. ಇದೀಗ ಕರಿಬೇವಿನೆಲೆಯನ್ನು ಸೇರಿಸಿ. ಬೇಯಿಸಿದ ತೊಂಡೆಕಾಯಿಗೆ ಈರುಳ್ಳಿ ಹಸಿಮೆಣಸನ್ನು ಸೇರಿಸಿ ಒಗ್ಗರಣೆ ಹಾಕಿ.
* ರುಚಿಯಾದ ತೊಂಡೆಕಾಯಿ ಹಣ್ಣು ಗೊಜ್ಜು ಸವಿಯಲು ಸಿದ್ಧವಾಗಿದೆ. ಅನ್ನದೊಂದಿಗೆ ಇದು ಉತ್ತಮ ಕಾಂಬಿನೇಶನ್ ಆಗಿದೆ.

English summary

Tindoras gojju south canara special recipe

Tindoras gojju one of the traditional kind of food preparing for meals. Healthy and tasty gojju giving lot of stamina to handle the problems of rainy seasons. It is very easy to prepare and giving mouth watering kind of feelings.
X
Desktop Bottom Promotion