For Quick Alerts
ALLOW NOTIFICATIONS  
For Daily Alerts

ರುಚಿಯಾದ ಮಸಾಲೆ ಆಲೂ ರೆಸಿಪಿ

|

ಎಲ್ಲಾ ವಯಸ್ಸಿನವರಿಗೆ ಆಲುಗಡ್ಡೆ ತುಂಬಾ ಇಷ್ಟವಾದ ತರಕಾರಿಯಾಗಿದೆ. ಇದು ತುಂಬಾ ಸರಳವಾಗಿ ತಯಾರುಮಾಡಬಹುದಾದ ಐಟಂ ಆಗಿದ್ದು ನೀವು ಅವಸರದಲ್ಲಿರುವಾಗ ನಿಮಗೆ ತುರ್ತಾಗಿ ಸಹಾಯ ಮಾಡುವುದು ಆಲೂಗಡ್ಡೆ ಕರಿಯಾಗಿದೆ. ಪ್ರತೀ ದಿನ ಒಂದೇ ತರಹದ ಆಲೂ ರೆಸಿಪಿಯನ್ನು ಸೇವಿಸಿ ಬೇಸರಗೊಂಡಿರುವಿರಾ?

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಉತ್ತಮ ಕಾಂಬಿನೇಶನ್‌ನ ನವರತ್ನ ಕೂರ್ಮಾ ರೆಸಿಪಿ

Tangy Masaledar Aloo Recipe

ಚಿಂತಸಬೇಡಿ, ನಿಮಗಾಗಿ ನಾವಿಂದು ರುಚಿಯಾದ ಮಸಾಲೆ ಆಲೂ ರೆಸಿಪಿಯನ್ನು ನೀಡುತ್ತಿದ್ದೇವೆ. ಮನೆಯಲ್ಲೇ ಸಿಗುವ ಸಾಂಬಾರು ಪದಾರ್ಥಗಳಿಂದ ಈ ಮಸಾಲಾ ಆಲೂ ರೆಸಿಪಿಯನ್ನು ಸಿದ್ಧಪಡಿಸಬಹುದು. ಪರೋಟಾ ಮತ್ತು ರೋಟಿಗಳಿಗೆ ಹೇಳಿ ಮಾಡಿಸಿದಂತಿರುವ ಈ ಆಲೂ ರೆಸಿಪಿ ವಿವಿಧ ರೀತಿಯ ಮಸಾಲೆಗಳಿಂದ ಕೂಡಿದ್ದು ನಿಮಗೆ ವಿಶಿಷ್ಟ ರುಚಿಯನ್ನು ನೀಡುತ್ತದೆ.

ಹಾಗಿದ್ದರೆ ಮತ್ತೇಕೆ ತಡ, ಈ ಸುಲಭವಾದ ಆಲೂ ರೆಸಿಪಿಯನ್ನು ಸಿದ್ಧಪಡಿಸಲು ತಯಾರಾಗಿ.

ಪ್ರಮಾಣ: 3 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ತಗಲುವ ಸಮಯ: 10 ನಿಮಿಷಗಳು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಲೂಗಡ್ಡೆ ಬದನೆಕಾಯಿ ಸಬ್ಜಿ

ಸಾಮಾಗ್ರಿಗಳು:
.ಆಲೂಗಡ್ಡೆ - 4 (ಬೇಯಿಸಿ ಸಿಪ್ಪೆ ಸುಲಿದದ್ದು)
.ಕೊತ್ತಂಬರಿ ಬೀಜಗಳು - 1ಸ್ಪೂನ್ (ಹುಡಿಮಾಡಿದ್ದು)
.ಜೀರಿಗೆ ಪೌಡರ್- 1ಸ್ಪೂನ್
.ಕೆಂಪು ಮೆಣಸು ಚೂರುಗಳು - 2ಸ್ಪೂನ್
.ಚಾಟ್ ಮಸಾಲಾ - 2ಸ್ಪೂನ್
.ಬ್ಲಾಕ್ ಸಾಲ್ಟ್ - 1/4 ಸ್ಪೂನ್
.ಇಂಗು - ಸಣ್ಣ ತುಂಡು
.ಜೀರಿಗೆ ಬೀಜ - 1ಸ್ಪೂನ್
.ಸಕ್ಕರೆ - 1/2 ಸ್ಪೂನ್
.ಉಪ್ಪು - ರುಚಿಗೆ ತಕ್ಕಷ್ಟು
.ಎಣ್ಣೆ - 1ಸ್ಪೂನ್

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಟರ್ ಪನ್ನೀರ್ ಡ್ರೈ-ಸೈಡ್ ಡಿಶ್

ಮಾಡುವ ವಿಧಾನ:

1.ಬೇಯಿಸಿದ ಆಲೂಗಡ್ಡೆಗಳನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಪಕ್ಕಕ್ಕಿಡಿ.

2.ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಇದಕ್ಕೆ ಜೀರಿಗೆ ಬೀಜ, ಇಂಗು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.

3.ನಂತರ ತುಂಡು ಮಾಡಿರುವ ಬೇಯಿಸಿದ ಆಲೂಗಡ್ಡೆಗಳನ್ನು ಇದಕ್ಕೆ ಹಾಕಿ 3-4 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಿರಿ.

4.ಇದೀಗ ಹುಡಿ ಮಾಡಿದ ಕೊತ್ತಂಬರಿ ಬೀಜ, ಜೀರಿಗೆ ಪೌಡರ್, ಕೆಂಪು ಮೆಣಸಿನ ಚೂರುಗಳು, ಚಾಟ್ ಮಸಾಲಾ, ಬ್ಲಾಕ್ ಸಾಲ್ಟ್, ಸಕ್ಕರೆ ಹಾಕಿ 3-4 ನಿಮಿಷಗಳ ಕಾಲ ಹುರಿಯಿರಿ.

5.ಈ ಮಸಾಲೆಗಳು ಆಲುಗಡ್ಡೆಯ ಮೇಲೆ ಚೆನ್ನಾಗಿ ಕೋಟ್ ಆಗಲಿ. ನಿಮ್ಮ ರುಚಿಗೆ ತಕ್ಕಂತೆ ಉಪ್ಪು ಹಾಕಿ.

6.ಒಮ್ಮೆ ಆದ ನಂತರ, ಗ್ಯಾಸ್ ಆಫ್ ಮಾಡಿ ಮತ್ತು ಬಡಿಸಿ.

ನಿಮ್ಮ ಸ್ಪೈಸಿ ಮತ್ತು ರುಚಿಯಾದ ಆಲೂ ರೆಸಿಪಿ ಬಡಿಸಲು ಸಿದ್ಧವಾಗಿದೆ. ರೋಟಿಯೊಂದಿಗೆ ಇದನ್ನು ಆನಂದಿಸಿ.

English summary

Tangy Masaledar Aloo Recipe

Potatoes are a favourite almost among all age groups. It is also the most simple and easy to prepare item. So, when you are in a hurry, you end up making potato curries almost every day.
X
Desktop Bottom Promotion