For Quick Alerts
ALLOW NOTIFICATIONS  
For Daily Alerts

ಫಟಾಫಟ್ ತಯಾರಿಸಿ: ಖಾರವಾದ ತಂದೂರಿ ಗೋಬಿ ರೆಸಿಪಿ!

|

ಭಾರತೀಯರೆಲ್ಲರು ತಂದೂರಿ ಆಹಾರಗಳ ಪ್ರಿಯರೆಂಬುದು ಎಲ್ಲರಿಗು ಗೊತ್ತು. ಅದರಲ್ಲೂ ಮಾಂಸಾಹಾರಿ ಪ್ರಿಯರಿಗೆ ತಂದೂರಿ ಖಾದ್ಯಗಳೆಂದರೆ ಬಾಯಿಯಲ್ಲಿ ನೀರು ಬರುವುದರಲ್ಲಿ ಸಂಶಯವಿಲ್ಲ. ಈ ವಿಚಾರದಲ್ಲಿ ಶಾಖಾಹಾರಿಗಳು ಸಹ ಹಿಂದೆ ಬಿದ್ದಿಲ್ಲ. ತಂದೂರಿಯ ರುಚಿ ಮತ್ತು ಸ್ವಾದವು ಶಾಖಾಹಾರಿ ಆಹಾರ ಖಾದ್ಯಗಳಿಗು ಸಹ ತಮ್ಮದೇ ಆದ ಒಂದು ಮೆರಗನ್ನು ನೀಡುತ್ತವೆ.

ಅಂತಹ ಖಾದ್ಯಗಳಲ್ಲಿ ತಂದೂರಿ ಗೋಬಿ ಖಾದ್ಯವು ಸಹ ಒಂದು. ಈ ಖಾದ್ಯವು ತಂದೂರಿ ಶೈಲಿಯನ್ನು ಬಯಸುವವರಿಗಾಗಿ ಹೇಳಿ ಮಾಡಿಸಿದಂತಹ ಖಾದ್ಯವಾಗಿದೆ. ಇದಕ್ಕಾಗಿ ತಂದೂರ್ ಒಲೆಗಳು ಬೇಕಾಗಿಲ್ಲ. ಏಕೆಂದರೆ ಎಲ್ಲರ ಮನೆಯಲ್ಲಿಯೂ ಈ ಒಲೆ ಅಥವಾ ಓವೆನ್‌ಗಳು ಇರುವುದಿಲ್ಲ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಬ್ಯಾಚುಲರ್‌ಗಳು ತಂದೂರಿ ಪ್ರಿಯರಾಗಿದ್ದರು, ಓವೆನ್‌ಗಳ ಕೊರತೆಯಿಂದ ಈ ತಂದೂರಿಯನ್ನು ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ.

Spicy Tandoori Gobi Recipe (Without Oven)

ಅಂತಹವರಿಗಾಗಿಯೇ ಈ ತಂದೂರಿ ಗೋಬಿ ರೆಸಿಪಿಯನ್ನು ನೀಡುತ್ತಿದ್ದೇವೆ. ಇದಕ್ಕಾಗಿ ನಾವು ಒಂದು ಮಾರ್ಗವನ್ನು ಕಂಡು ಹಿಡಿದಿದ್ದೇವೆ! ನಂಬಿ ಈ ಮಾರ್ಗದಲ್ಲಿ ನೀವು ಸಹ ತಂದೂರಿ ಗೋಬಿ ರೆಸಿಪಿಯನ್ನು ಮಾಡಿಕೊಳ್ಳಬಹುದು. ಇದಕ್ಕಾಗಿ ನಿಮಗೆ ಒಂದು ಸ್ಪಷ್ಟ ಯೋಜನೆ ಮತ್ತು ಅಗತ್ಯವಾದ ಪದಾರ್ಥಗಳು ತಪ್ಪದೆ ಬೇಕಾಗುತ್ತದೆ. ಇವುಗಳ ಮೂಲಕ ನೀವು ನಿಮ್ಮ ಅಡುಗೆ ಮನೆಯಲ್ಲಿ ಒಂದು ಮ್ಯಾಜಿಕ್ ಮಾಡಿ, ತಂದೂರಿ ಗೋಬಿ ರೆಸಿಪಿಯನ್ನು ತಯಾರಿಸಿಕೊಳ್ಳಬಹುದು. ಬನ್ನಿ ಇನ್ನು ತಡ ಮಾಡದೆ ಈ ರೆಸಿಪಿಯನ್ನು ನಾವು ಸಹ ತಿಳಿದುಕೊಂಡು ಬರೋಣ. ಕೇವಲ 15 ನಿಮಿಷದಲ್ಲಿ ತಯಾರಿಸಿ ಮೊಟ್ಟೆ ಪುಲಾವ್ ರೆಸಿಪಿ!

ಮೂವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 30 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಹೂಕೋಸು- 1 (ಪೂರ್ತಿ)
*ಪನ್ನೀರ್- 250 ಗ್ರಾಂ (ಚೌಕಾಕಾರವಾಗಿ ಕತ್ತರಿಸಿದಂತಹುದು)
*ಮೊಸರು - 2 ಟೀ.ಚಮಚ
*ಎಣ್ಣೆ - 2 ಟೀ.ಚಮಚ


*ನಿಂಬೆ ರಸ- 2 ಟೇ.ಚಮಚ
*ಖಾರದ ಪುಡಿ - 1 ಟೀ.ಚಮಚ
*ಶುಂಠಿ - ಸ್ವಲ್ಪ (ಸಣ್ಣಗೆ ಕತ್ತರಿಸಿದಂತಹುದು)
*ಒಣ ದ್ರಾಕ್ಷಿ - 8
*ಗರಂ ಮಸಾಲ ಪುಡಿ - 1 ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ಚಕ್ಕೆ - 2 ಕಡ್ಡಿಗಳು
*ಹಸಿ ಏಲಕ್ಕಿ - 3
*ಕಪ್ಪು ಏಲಕ್ಕಿ - 1
*ಲವಂಗ - 3
*ಪಲಾವ್ ಎಲೆ - 2
*ಕೊತ್ತಂಬರಿ ಸೊಪ್ಪು - 2 ಟೀ.ಚಮಚ (ಕತ್ತರಿಸಿದಂತಹುದು)

ತಯಾರಿಸುವ ವಿಧಾನ
1. ಮೂರು ಕಪ್ ನೀರಿಗೆ ಉಪ್ಪು, ಚಕ್ಕೆ, ಹಸಿರು ಏಲಕ್ಕಿ, ಕಪ್ಪು ಏಲಕ್ಕಿ, ಲವಂಗ ಮತ್ತು ಪಲಾವ್ ಎಲೆ ಹಾಕಿ ಕಾಯಿಸಿ. ಇದು ಕುದಿಯುವಾಗ ಇದಕ್ಕೆ ಹೂಕೋಸು ಹಾಕಿ.
2. ತದನಂತರ ಹೂಕೋಸನ್ನು 8-10 ನಿಮಿಷ ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸಿ. ಚೆನ್ನಾಗಿ ಬೆಂದಿರುವುದನ್ನು ಖಾತ್ರಿಪಡಿಸಿಕೊಳ್ಳಿ.
3. ಇನ್ನು ಇದಕ್ಕೆ ಪನ್ನೀರ್, ಮೊಸರು, ಎಣ್ಣೆ, ನಿಂಬೆ ರಸ, ಶುಂಠಿ, ಖಾರದ ಪುಡಿ, ಒಣ ದ್ರಾಕ್ಷಿ, ಗರಂ ಮಸಾಲ ಪುಡಿ ಮತ್ತು ಉಪ್ಪನ್ನು ಹಾಕಿ ಮಿಶ್ರಣ ಮಾಡಿ.


4. ಇದಾದ ಮೇಲೆ ಹೂಕೋಸನ್ನು ನೀರಿನಿಂದ ಹೊರತೆಗೆದು ತಣ್ಣಗಾಗಲು ಬಿಡಿ.
5. ಹೂಕೋಸಿನ ಒಳಗೆ ಸಿದ್ಧಪಡಿಸಿದ ಪನ್ನೀರ್ ಮಸಾಲದಲ್ಲಿ ಅದ್ದಿ, ಉಳಿದ ಮಸಾಲೆಯನ್ನು ಸಹ ಈ ಹೂಕೋಸಿನ ಮೇಲೆ ಹಾಕಿ.
6. ಎರಡು ಟೇಬಲ್ ಚಮಚದಷ್ಟು ಎಣ್ಣೆಯನ್ನು ಹೂಕೋಸಿನ ಮೇಲೆ ಹಾಕಿ, ನಂತರ ಬಾಣಲೆಯಲ್ಲಿ ಹಾಕಿ.
7. ಇದನ್ನು ಮುಚ್ಚಿ ಮತ್ತು 20 ನಿಮಿಷಗಳ ಕಾಲ ಬೇಯಿಸಿ.
8. ಇದಾದ ಮೇಲೆ ಉರಿಯನ್ನು ಆರಿಸಿ ಮತ್ತು ಹೂಕೋಸಿನ ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿ. ಈಗ ನಿಮ್ಮ ಮುಂದೆ ತಂದೂರಿ ಗೋಬಿ ಸಿದ್ಧವಾಗಿದೆ. ಇದನ್ನು ಚಟ್ನಿಯ ಜೊತೆಗೆ ಸವಿಯಲು ಚೆನ್ನಾಗಿರುತ್ತದೆ.
English summary

Spicy Tandoori Gobi Recipe (Without Oven)

We, Indians love our tandoori dishes. Not only does the non vegetarian tandoori dishes taste heavely, the vegetarians go no less in terms of flavour and taste. Tandoori gobi is one such variety from the Indian vegetarian tandoor. Take a look at the recipe of tandoori gobi and give it a try.
X
Desktop Bottom Promotion