For Quick Alerts
ALLOW NOTIFICATIONS  
For Daily Alerts

ಆಲೂಗಡ್ಡೆ ಬದನೆಕಾಯಿ ಸಬ್ಜಿ

|

ಮಕ್ಕಳಿಗೆ ತರಕಾರಿ ತಿನ್ನುವಂತೆ ಮಾಡುವುದು ಅಮ್ಮಂದಿರಿಗೆ ಯಾವಾಗಲೂ ತಲೆನೋವಿನ ಕೆಲಸ. ಮಕ್ಕಳಿಗೆ ಇಷ್ಟವಾಗುವಂತೆ ತರಕಾರಿಗಳ ಕಾಂಬಿನೇಷನ್ ನೀಡುವುದು ಅಷ್ಟು ಸುಲಭವಲ್ಲ. ದೊಡ್ಡವರು ಕೂಡ ಎಲ್ಲ ತರಕಾರಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ.

ಈವತ್ತು ನಿಮಗೆ ಆಲೂಗಡ್ಡೆ ಮತ್ತು ಬದನೆಕಾಯಿ ಸೇರಿಸಿ ಮಾಡಿದ ಸಬ್ಜಿಯನ್ನು ಹೇಳಿಕೊಡುತ್ತೇವೆ. ಇದನ್ನು ಕಡಿಮೆ ಸಮಯ ಮತ್ತು ಕಡಿಮೆ ಮಸಾಲೆ ಬಳಸಿ ಮಾಡಬಹುದು. ಇದು ಖಂಡಿತವಾಗಿಯೂ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.

simple allo baingan ki sabzi

ಬೇಕಾಗುವ ಸಾಮಗ್ರಿಗಳು
1. ಬೇಬಿ ಆಲೂಗಡ್ಡೆಗಳು- 5 (ಬೇಯಿಸಿಕೊಂಡು ಸಿಪ್ಪೆ ತೆಗೆದಿಟ್ಟುಕೊಳ್ಳಿ)
2. ಬದನೆಕಾಯಿ- 1 (ಹೆಚ್ಚಿಟ್ಟುಕೊಳ್ಳಿ)
3. ಟೊಮೊಟೊ- 2 (ಹೆಚ್ಚಿಟ್ಟುಕೊಳ್ಳಿ)
4. ಬೆಳ್ಳುಳ್ಳಿ- 5 ಎಸಳು
5. ಹಸಿಮೆಣಸಿನಕಾಯಿ- 2
6. ಜೀರಿಗೆ ಪುಡಿ- 1 ಟೀಚಮಚ
7. ಮೆಂತ್ಯೆ- 1/2 ಟೀಚಮಚ
8. ಸಾಸಿವೆ- 1/2 ಟೀಚಮಚ
9. ಒಣಮೆಣಸಿನಕಾಯಿ- 1
10. ಉಪ್ಪು ರುಚಿಗೆ ತಕ್ಕಷ್ಟು
11. ಎಣ್ಣೆ
12. ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ
1. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಿಸಿಕೊಂಡು ಸಾಸಿವೆ, ಮೆಂತ್ಯೆ, ಒಣ ಮೆಣಸಿನಕಾಯಿಯನ್ನು ಹಾಕಿ. ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ.
2. ಇದಕ್ಕೆ ಬೆಳ್ಳುಳ್ಳಿ ಸೇರಿಸಿ ಹುರಿಯಿರಿ.
3. ನಂತರ ಬದನೆಕಾಯಿ ಮತ್ತು ಬೇಯಿಸಿಕೊಂಡ ಆಲೂಗಡ್ಡೆ ಹಾಕಿ 3-4 ನಿಮಿಷಗಳವರೆಗೆ ಕಲಸಿ.
4. ಇದಕ್ಕೆ ಟೊಮೊಟೊ, ಉಪ್ಪು, ಜೀರಿಗೆ ಪುಡಿ, ಹಸಿಮೆಣಸಿನಕಾಯಿ ಹಾಕಿ ಮುಚ್ಚಳ ಮುಚ್ಚಿ 8-10 ನಿಮಿಷಗಳವರೆಗೆ ಬೇಯಿಸಿ.
5. ಬೆಂದ ನಂತರ ಮುಚ್ಚಳ ತೆರೆದು ಕೊತ್ತಂಬರಿ ಸೊಪ್ಪನ್ನು ಹಾಕಿ ಕಲಸಿ.

ರೋಟಿಯೊಂದಿಗೆ ತಿನ್ನಲು ಇದು ರುಚಿಕರವಾಗಿರುತ್ತದೆ.

English summary

simple allo baingan ki sabzi

It's tough to get your kids to eat a healthy dish of vegetables. Unless you have just the perfect combination spices in the dish, you will have a difficult time to make your kids enjoy it
Story first published: Wednesday, December 11, 2013, 9:54 [IST]
X
Desktop Bottom Promotion