For Quick Alerts
ALLOW NOTIFICATIONS  
For Daily Alerts

ಶಿವರಾತ್ರಿಗಾಗಿ ಗುಜರಾತಿ ಸ್ಪೆಶಲ್ ಸೇವ್ ಟೊಮೇಟೊ ಪಲ್ಯ

|

ಶಿವರಾತ್ರಿ ಹಬ್ಬವನ್ನು ಶಿವ ಹಾಗೂ ಪಾರ್ವತಿ ದೇವಿಯ ವಿವಾಹದ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಮಿಲಿಯಗಟ್ಟಲೆ ಭಕ್ತಾದಿಗಳು ವೃತವನ್ನು ಆಚರಿಸುತ್ತಾರೆ. ಭಕ್ತಾದಿಗಳು ತಮ್ಮ ವೃತವನ್ನು ಸಂಪನ್ನಗೊಳಿಸುವಾಗ ಕೆಲವೊಂದು ಪ್ರಕಾರದ ಸಸ್ಯಾಹಾರಿ ಆಹಾರವನ್ನು ಮಾತ್ರ ಸ್ವೀಕರಿಸುತ್ತಾರೆ. ಶಿವರಾತ್ರಿ ಅಡುಗೆಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಅಂಶಗಳು ಇರಬಾರದು ಆದ್ದರಿಂದ ಕೆಲವೊಂದು ಸೀಮಿತ ಆಹಾರವನ್ನು ಮಾತ್ರ ಅವರು ತೆಗೆದುಕೊಳ್ಳಬೇಕಾಗುತ್ತದೆ.

ಸೇವ್ ಮತ್ತು ಟೊಮೇಟೊ ಪಲ್ಯ ಈ ದಿನದ ವೃತವನ್ನು ಸಂಪನ್ನಗೊಳಿಸಲು ನೀವು ತೆಗೆದುಕೊಳ್ಳಬಹುದು. ಸೇವ್ ಮತ್ತು ಟೊಮೇಟೋ ಪಲ್ಯದ ಮೂಲ ಗುಜರಾತ್ ಆಗಿದೆ. ತಮ್ಮ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸದ ಗುಜರಾತಿ ಜೈನ ಸಮುದಾಯದವರು ಈ ಪಲ್ಯವನ್ನು ಹೆಚ್ಚು ತಯಾರಿಸುತ್ತಾರೆ ಮತ್ತು ಪ್ರಸಿದ್ಧಿಯನ್ನು ಕೂಡ ಪಡೆದಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವರಾತ್ರಿ ಸ್ಪೆಶಲ್: ರುಚಿಕರವಾಗಿರುವ ಸಾಬಕ್ಕಿ ರೆಸಿಪಿ

ಇದರ ಮೂಲ ಹೆಸರು ಗುಜಾರಾತಿ ಭಾಷೆಯಲ್ಲಿ ಸೇವ್ ಟಮಾಟಾನಾ ನು ಶಾಕ್ ಎಂದಾಗಿದೆ. ಇದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸದೇ ಇರುವುದರಿಂದ ಶಿವರಾತ್ರಿಯ ವೃತ ಸಂಪನ್ನತೆಗೆ ಪವಿತ್ರವಾದ ಡಿಶ್ ಆಗಿದೆ ಈ ಪಲ್ಯ. ಟೊಮೇಟೋದಿಂದ ಮಾಡಿದ ಪಲ್ಯಕ್ಕೆ ಅಲಂಕರಿಸಲು ಸೇವ್ ಅನ್ನು ಬಳಸಲಾಗುತ್ತದೆ.

Sev Tamater Ki Sabji: Shivratri special

ಪ್ರಮಾಣ: 3 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ತಗುಲುವ ಸಮಯ: 15 ನಿಮಿಷಗಳು

ಸಾಮಾಗ್ರಿಗಳು
.ಟೊಮೇಟೋ - 8 (ತುಂಡರಿಸಿದ್ದು)
.ಅರಶಿನ ಹುಡಿ - 1/2 ಟೇಸ್ಪೂನ್
.ಮೆಣಸಿನ ಹುಡಿ - 1ಟೇಸ್ಪೂನ್
.ಇಂಗು - 1ಸಣ್ಣ ತುಂಡು
.ಜೀರಿಗೆ - 1/2 ಸ್ಪೂನ್
.ಸಾಸಿವೆ - 1/2 ಸ್ಪೂನ್
.ಹಸಿಮೆಣಸು - 3 (ಉದ್ದಕ್ಕೆ ಸೀಳಿರುವುದು)
.ಬೆಲ್ಲ - 2 ತುಂಡು
.ಉಪ್ಪು - (ಸಾಂದಾ ನಮಕ್) - ರುಚಿಗೆ ತಕ್ಕಷ್ಟು
.ಎಣ್ಣೆ - 1ಸ್ಪೂನ್
.ಸೇವ್ - 1 ಕಪ್

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಹಾಶಿವರಾತ್ರಿಗೆ 5 ಸ್ಪೆಷೆಲ್ ರೆಸಿಪಿ

ಮಾಡುವ ವಿಧಾನ
1. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ. ಇದಕ್ಕೆ ಜೀರಿಗೆ, ಸಾಸಿವೆ, ಇಂಗು ಮತ್ತು ಹಸಿಮೆಣಸುಗಳನ್ನು ಹಾಕಿ.

2. ನಂತರ ಪ್ಯಾನ್‌ಗೆ ಟೊಮೇಟೊ ಹಾಕಿ.

3. ಮೇಲ್ಭಾಗಕ್ಕೆ ಅರಶಿನ ಮತ್ತು ಮೆಣಸಿನ ಹುಡಿಯನ್ನು ಚಿಮುಕಿಸಿ. ಟೊಮೇಟೊ ಚೆನ್ನಾಗಿ ಬೇಯಲು ಉಪ್ಪು ಹಾಕಿ.

4. ಪ್ಯಾನ್‌ನಲ್ಲಿರುವ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ 5 ನಿಮಿಷಗಳಷ್ಟು ಕಾಲ ಬೇಯಿಸಿ.

5. 1 ಕಪ್ ನೀರಿನಲ್ಲಿ ಬೆಲ್ಲವನ್ನು ಕರಗಿಸಿ ನಂತರ ಇದನ್ನು ಪ್ಯಾನ್‌ನಲ್ಲಿ ಬೆಂದಿರುವ ಟೊಮೇಟೋ ಮೇಲೆ ಹುಯ್ಯಿರಿ.

6. 5-6 ನಿಮಿಷಗಳಷ್ಟು ಕಾಲ ಸಣ್ಣ ಉರಿಯಲ್ಲಿ ಇದು ಬೇಯಲಿ. ಗ್ಯಾಸ್ ಆರಿಸುವ ಮುನ್ನ ಪ್ಯಾನ್‌ಗೆ ಕರಿಬೇವಿನ ಎಲೆಗಳನ್ನು ಹಾಕಲು ಮರೆಯದಿರಿ.

7. ಪಲ್ಯವನ್ನು ಬಡಿಸುವ ಮುನ್ನ ಸೇವ್‌ನೊಂದಿಗೆ ಅಲಂಕರಿಸಿ ಇದರಿಂದ ಸೇವ್ ಗರಿಗರಿಯಾಗಿರುತ್ತದೆ.

8. ಸೇವ್ ಟೊಮೇಟೋ ಪಲ್ಯವನ್ನು ವೃತದ ಅನ್ನ ಅಥವಾ ವೃತದಲ್ಲಿ ತಯಾರಿಸಲಾಗುವ ಪರೋಟಾದೊಂದಿಗೆ ಸವಿಯಬಹುದು.

English summary

Sev Tamater Ki Sabji: Shivratri special

Maha Shivratri is a occasion when all of India celebrates the marriage of Lord Shiva and Devi Parvati. On this day, millions of devotees keep a fast. Even when they break their fast, they have to eat only a certain kind of vegetarian food. Sev tamater ki sabji is originally a Gujrati recipe. It is popular among Gurjati Jains who do not add onions and garlic to their food. The original name for this recipe is sev tamta nu shaak.
X
Desktop Bottom Promotion