For Quick Alerts
ALLOW NOTIFICATIONS  
For Daily Alerts

ವಿಧ ವಿಧ ಪಲ್ಯ ನಿಮ್ಮ ಲಂಚ್ ಬಾಕ್ಸ್‌ಗಾಗಿ!

|

ನೀವು ಉದ್ಯೋಗದಲ್ಲಿರುವ ಮಹಿಳೆಯಾಗಿದ್ದು ಲಂಚ್ ಬಾಕ್ಸ್‌ಗೆ ವಿಧ ವಿಧದ ರುಚಿಯಾದ ಪಲ್ಯವನ್ನು ತಯಾರಿಸಲು ಕಷ್ಟಪಡುತ್ತಿದ್ದೀರಾ? ಹಾಗಿದ್ದರೆ ನಿಮಗಿನ್ನು ಪ್ರಯಾಸ ಪಡುವ ಅವಶ್ಯಕತೆಯಿಲ್ಲ. ಬೋಲ್ಡ್ ಸ್ಕೈ ಇಂದು ನಿಮಗಾಗಿ ವಿಧ ವಿಧ ಲಂಚ್ ಬಾಕ್ಸ್ ಸಬ್ಜಿ ರೆಸಿಪಿಯನ್ನು ಈ ಲೇಖನದಲ್ಲಿ ಹೊತ್ತು ತಂದಿದೆ. ಇದರಿಂದ ನಾಳೆಗೆ ಯಾವ ಪಲ್ಯ ತಯಾರಿಸಲಿ ಎಂದು ನೀವು ಚಿಂತೆ ಮಾಡುವುದೂ ತಪ್ಪುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನಾಲಿಗೆಯ ರುಚಿ ತಣಿಸುವ ವೆಜ್ ಬಿರಿಯಾನಿ!

ಬೆಳಗ್ಗೆ ಬೇಗನೆದ್ದು ಲಂಚ್ ಬಾಕ್ಸ್‌ಗಾಗಿ ರುಚಿಯಾದ ಪಲ್ಯವನ್ನು ತಯಾರಿಸಿ ಪ್ಯಾಕ್ ಮಾಡುವುದೇ ಕಷ್ಟದ ಕೆಲಸವೇ? ಅದರಲ್ಲೂ ಒಂದೇ ಬಗೆಯ ಪಲ್ಯ ಮಾಡಿದರೆ ಮಕ್ಕಳೊಂದಿಗೆ ಮನೆಯವರೂ ಇಷ್ಟಪಡುವುದಿಲ್ಲ ಮತ್ತು ನಿಮಗೂ ಇದು ಬೋರಿಂಗ್ ಆಗಿರಬಹುದು. ಪಲ್ಯ ತಯಾರಿಸಲೆಂದೇ ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ದುಬಾರಿ ಸಮಯವನ್ನು ಕಳೆಯುತ್ತಾರೆ.

ಇದರಿಂದ ಕಚೇರಿಗೆ ಬೇಗನೇ ತಲುಪದಿರುವ ಸಂಕಷ್ಟ ಅವರಿಗಿರುತ್ತದೆ. ಇನ್ನು ಈ ಗಡಿಬಿಡಿ, ಕಷ್ಟ ಎಲ್ಲದಕ್ಕೂ ಗುಡ್ ಬೈ ಹೇಳುವ ಸಮಯ ಬಂದಿದೆ. ಈ ಲೇಖನದಲ್ಲಿರುವ ವಿವಿಧ ಸಬ್ಜಿಗಳನ್ನು ತಯಾರಿಸಿ ನಿಮ್ಮ ಸಮಯವ ಉಳಿಸಬಹುದು ಮತ್ತು ಮನೆಯವರ ಮೆಚ್ಚುಗೆಯನ್ನೂ ಗಳಿಸಬಹುದು.

ಈ ಲೇಖನದಲ್ಲಿರುವ ಸರಳ ರೆಸಿಪಿಗಳು ನಿಮ್ಮ ಲಂಚ್ ಬಾಕ್ಸ್ ಊಟವನ್ನು ಸಂಪೂರ್ಣಗೊಳಿಸುತ್ತದೆ. ಕೆಲವೊಂದು ಡಿಶ್‌ಗಳು ಖಂಡಿತ ನಿಮ್ಮ ಲಂಚ್ ಬಾಕ್ಸ್ ಅನ್ನು ಪರಿಪೂರ್ಣಗೊಳಿಸುತ್ತದೆ ಮತ್ತು ನಿಮ್ಮ ಮಕ್ಕಳು ಇದೇ ಪಲ್ಯವನ್ನು ತಯಾರಿಸಿ ಎಂದು ದುಂಬಾಲು ಬೀಳುವುದು ಖಂಡಿತ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬಾಯಿಯಲ್ಲಿ ನೀರೂರಿಸುವ ಪಾಲಕ್ ರೈಸ್!

ಬೆಂಡೆಕಾಯಿ ಕಡಲೆಹಿಟ್ಟು ಪಲ್ಯ:

ಬೆಂಡೆಕಾಯಿ ಕಡಲೆಹಿಟ್ಟು ಪಲ್ಯ:

ಬೆಂಡೆಕಾಯಿಯನ್ನು ಯಾವುದೇ ತರಕಾರಿಯೊಂದಿಗೆ ಸಂಮಿಶ್ರವಾಗಿ ಬೇಯಿಸಿಕೊಳ್ಳಬಹುದು. ಇಲ್ಲಿದೆ ಸರಳವಾದ ಬೆಂಡೆಕಾಯಿ ಕಡಲೆ ಹಿಟ್ಟು ಪಲ್ಯ ರೆಸಿಪಿ. ರುಚಿಕರವಾದ ಈ ಪಲ್ಯ ನಿಮ್ಮ ಬಾಯಿ ರುಚಿಯನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸೀಳಿದ ಬೆಂಡೆಕಾಯಿಯನ್ನು ಕಡಲೆ ಹಿಟ್ಟಿನೊಂದಿಗೆ ಫ್ರೈ ಮಾಡಿ ಸುಗಂಧಿತ ಮಸಾಲೆ ಸಾಮಾಗ್ರಿಗಳೊಂದಿಗೆ ಮಿಶ್ರಗೊಳಿಸುವ ರೆಸಿಪಿಯಾಗಿದೆ ಬೆಂಡೆಕಾಯಿ ಕಡಲೆಹಿಟ್ಟು ಪಲ್ಯ.

ಆಲೂಗಡ್ಡೆ ಮತ್ತು ಗ್ರೀನ್ ಬೀನ್ಸ್:

ಆಲೂಗಡ್ಡೆ ಮತ್ತು ಗ್ರೀನ್ ಬೀನ್ಸ್:

ಡ್ರೈ ಆಲೂ ಪಲ್ಯವನ್ನು ರೋಟಿ ಅಥವಾ ರೈಸ್‌ಗೆ ಸೈಡ್ ಡಿಶ್ ಆಗಿ ಬಳಸಬಹುದು. ಈ ಲಂಚ್ ಬಾಕ್ಸ್ ರೆಸಿಪಿ ಕ್ರಿಸ್ಪಿ ಮತ್ತು ಹೆಲ್ದಿಯಾಗಿದೆ.

ಬಟಾಣಿ ಮತ್ತು ಟೊಮೇಟೋ ಸಬ್ಜಿ:

ಬಟಾಣಿ ಮತ್ತು ಟೊಮೇಟೋ ಸಬ್ಜಿ:

ಬಟಾಣಿ ಮತ್ತು ಟೊಮೇಟೋ ಸಬ್ಜಿಯನ್ನು ನಿಮಗೆ ಪ್ರಯತ್ನಿಸಬಹುದು. ನಿಮಿಷಗಳಲ್ಲಿ ಈ ರುಚಿಯಾದ ಮತ್ತು ಹೆಲ್ದಿಯಾದ ಪಲ್ಯವನ್ನು ತಯಾರಿಸಬಹುದು. ರೋಟಿ ಮತ್ತು ಅನ್ನದೊಂದಿಗೆ ಉತ್ತಮ ಕಾಂಬಿನೇಶನ್ ಆಗಿರುವ ಈ ಸಬ್ಜಿ ಟೇಸ್ಟ್ ಅನ್ನು ನಿಮ್ಮ ನಾಲಗೆಯಲ್ಲಿ ಹಾಗೆಯೇ ಉಳಿಸುವುದು ಖಂಡಿತ.

ತ್ವರಿತ ಆಲೂ ದಂ:

ತ್ವರಿತ ಆಲೂ ದಂ:

ಸಾಂಪ್ರದಾಯಿಕ ಆಲೂ ದಂ ರೆಸಿಪಿ ತಯಾರಿಸಲು ಸ್ವಲ್ಪ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಹೆಚ್ಚಿನ ಮಸಾಲೆ ಸಾಮಾಗ್ರಿ ಇದಕ್ಕೆ ಅವಶ್ಯಕ.ಈ ಸರಳವಾದ ಮತ್ತು ಸಾಂಪ್ರದಾಯಿಕ ಆಲೂ ದಂ ಸ್ವಾದವನ್ನು ನಿಡುವ ಸಬ್ಜಿಯನ್ನು ನೌಕರಿಯಲ್ಲಿರುವ ಗೃಹಿಣಿಯರು ಸರಳವಾಗಿ ತಯಾರಿಸಬಹುದು.

ಗೋಬಿ ಮಟರ್:

ಗೋಬಿ ಮಟರ್:

ಕಾಲಿಫ್ಲವರ್ ಅಥವಾ ಗೋಬಿ ಆರೋಗ್ಯಕಾರಿಯಾದ ಮತ್ತು ರುಚಿ ಹೆಚ್ಚಿಸುವ ತರಕಾರಿಯಾಗಿದೆ. ನೀವು ಹೊಸದಾಗಿ ವಿಭಿನ್ನವಾಗಿರುವ ರುಚಿಯಾದ ಸೈಡ್ ಡಿಶ್ ಅನ್ನು ತಯಾರಿಸುವ ಮನವನ್ನು ಹೊಂದಿದ್ದರೆ ಈ ಸರಳವಾದ ಗೋಬಿ ಪಲ್ಯವನ್ನು ಸಿದ್ಧಪಡಿಸಬಹುದು.

ಟ್ಯಾಂಗಿ ಆಲೂ ಟಮಾಟರ್:

ಟ್ಯಾಂಗಿ ಆಲೂ ಟಮಾಟರ್:

ನಿಮ್ಮ ಲಂಚ್ ಬಾಕ್ಸ್ ಅನ್ನು ಮಸ್ತಾಗಿಸುವ ಇನ್ನೊಂದು ಸೈಡ್ ಡಿಶ್ ರೆಸಿಪಿಯಾಗಿದೆ ಆಲೂ ಟಮಾಟರ್. ಬೇಯಿಸಿದ ಆಲೂಗಡ್ಡೆಯನ್ನು ಟೊಮೇಟೋದೊಂದಿಗೆ ಫ್ರೈಯಿಂಗ್ ಪ್ಯಾನ್‌ನಲ್ಲಿ ಚೆನ್ನಾಗಿ ಹುರಿದು ಈ ಡಿಶ್ ಅನ್ನು ತಯಾರಿಸಲಾಗುತ್ತದೆ. ಡ್ರೈ ಅಥವಾ ಸೆಮಿ ಗ್ರೇವಿಯಾಗಿ ಈ ಪಲ್ಯವನ್ನು ತಯಾರಿಸಬಹುದು.

ಮಟರ್ ಪನೀರ್ ಡ್ರೈ:

ಮಟರ್ ಪನೀರ್ ಡ್ರೈ:

ದಪ್ಪನೆಯ ಗ್ರೇವಿ ಡಿಶ್ ಕೆಲವರಿಗೆ ಲಂಚ್ ಬಾಕ್ಸ್‌ನಲ್ಲಿ ಕೊಂಡೊಯ್ಯಲು ಅಷ್ಟೊಂದು ಪ್ರಿಯವಾಗುವುದಿಲ್ಲ. ಆದ್ದರಿಂದ ನಿಮಗೆ ಮಟರ್ ಪನೀರ್ ಅನ್ನು ಸಿದ್ಧಪಡಿಸಬಹುದು. ಇದು ಕ್ರಿಸ್ಪಿ ಮತ್ತು ರುಚಿಕರವಾಗಿದೆ.

ಆಲೂ ಜಲ್‌ಫ್ರೇಜಿ:

ಆಲೂ ಜಲ್‌ಫ್ರೇಜಿ:

ಪಾಕಿಸ್ತಾನದಿಂದ ಬಂದಿರುವ ವಿಶೇಷ ಡಿಶ್ ಆಗಿದೆ ಜಲ್‌ಫ್ರೇಜಿ. ಇಂಡಿಯನ್ ಸಿಜ್ವನ್‌ನಲ್ಲೂ ಜಲ್‌ಫ್ರೇಜಿ ಸಖತ್ ಫೇಮಸ್. ಆಲೂಗಡ್ಡೆ, ಚಿಕನ್, ಮಟನ್ ಅಥವಾ ಮಿಶ್ರ ತರಕಾರಿಗಳೊಂದಿಗೆ ಮಾಂಸಾಹಾರಿ ಇಲ್ಲವೇ ಸಸ್ಯಾಹಾರಿಯಾಗಿ ಈ ಪಲ್ಯವನ್ನು ಸಿದ್ಧಪಡಿಸಬಹುದು. ರೋಟಿ ಅಥವಾ ಪರೋಟಾಕ್ಕೆ ಆಲೂ ಜಲ್‌ಫ್ರೇಜಿ ಉತ್ತಮ ಕಾಂಬಿನೇಶನ್ ಆಗಿದೆ.

ದಹಿ ಚಾನೆ ಕಿ ಸಬ್ಜಿ:

ದಹಿ ಚಾನೆ ಕಿ ಸಬ್ಜಿ:

ಯಾವಾಗಲೂ ಚನ್ನಾವನ್ನು ತಯಾರಿಸಿ ಬೇಸರಗೊಂಡಿರುವಿರಾ? ಈ ಮೊಸರು ಚನ್ನಾವನ್ನು ನಿಮ್ಮ ಲಂಚ್ ಬಾಕ್ಸ್‌ಗೆ ವಿಶೇಷವಾಗಿ ತಯಾರಿಸಬಹುದು. ಬಿಳಿ ಚನ್ನಾದ ಬದಲಿಗೆ ಕೆಂಪು ಚನ್ನಾವನ್ನು ನೀವು ಬಳಸಬಹುದು.

ಆಲೂ ಚೋಕಾ:

ಆಲೂ ಚೋಕಾ:

ಪಲ್ಯವನ್ನು ಸರಳವಾಗಿ ತಯಾರಿಸುವ ಮನಸ್ಸಾಗಿದೆಯೇ? ಆಲೂ ಚೋಕಾವನ್ನು ಅಥವಾ ದಾಲ್‌ನೊಂದಿಗೆ ಸೈಡ್ ಡಿಶ್ ಆಗಿ ಸವಿಯಬಹುದು. ಸರಳವಾದ ಮತ್ತು ತ್ವರಿತವಾಗಿರುವ ರೆಸಿಪಿ ಇದಾಗಿದ್ದು ನಿಮಗೆ ಕೇವಲ ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು.

English summary

Sabzi Recipes For Lunch Box

Are you one of the working woman who is struggling every morning to prepare some lip smacking side dishes for lunch box? There are many lunch box ideas that you can try at home.
Story first published: Wednesday, March 26, 2014, 11:50 [IST]
X
Desktop Bottom Promotion