For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಪೊಟೇಟೊ ರಿಚಾಯ್ಡೊ

By Manohar
|

ಪೊಟೇಟೊವನ್ನು ಬಳಸಿ ಹಲವು ರೀತಿಯ ಅಡುಗೆಯನ್ನು ನಾವು ರುಚಿಕರವಾಗಿ ತಯಾರಿಸಬಹುದು. ಇದರಲ್ಲಿ ಪೊಟೇಟೊ ರಿಚಾಯ್ಡೊ ಕೂಡ ಒಂದು. ಪೊಟೇಟೊವನ್ನು ಬಳಸಿ ಸುಲಭವಾಗಿ ಮಾಡಬಹುದಾದ ಪೊಟೇಟೊ ರಿಚಾಯ್ಡೊವನ್ನು ಮಧ್ಯಾಹ್ನದ ಊಟಕ್ಕೆ ಸೈಡ್‌ ಡಿಶ್ ಆಗಿಯೂ ಇದನ್ನು ಬಳಸಬಹುದು.

ruchikaravada Potato-Recheiado

ಬೇಕಾಗುವ ಸಾಮಾಗ್ರಿಗಳು
ಕೆಂಪು ಮೆಣಸು - 5
ಕರಿಮೆಣಸು - 4
ಜೀರಿಗೆ - ಸ್ವಲ್ಪ
ವಿನೇಗರ್ - 1 ಟೇ.ಸ್ಫೂನ್
ಶುಂಠಿ - 1 (ಹೆಚ್ಚಿದ್ದು)
ಏಲಕ್ಕಿ - 5
ದಾಲ್ಚಿನಿ - 4 ಎಸಳು
ಬಾಳೆ ಎಲೆ - 3
ಬಟಾಟೆ (ಪೊಟೇಟೊ) - 4

ಪೊಟೇಟೊ ರಿಚಾಯ್ಡೊ ತಯಾರಿ ವಿಧಾನ:

1.ಕೆಂಪು ಮೆಣಸು, ಜೀರಿಗೆ, ಕರಿಮೆಣಸು ಮತ್ತು ವಿನೇಗರ್ ಅನ್ನು ಒಂದು ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ.

2. ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಹೆಚ್ಚಿದ ಶುಂಠಿ, ಏಲಕ್ಕಿ, ದಾಲ್ಚೀನಿಯೊಂದಿಗೆ ಪೇಸ್ಟ್ ಮಾಡಿ.

3.ಈ ಮಿಶ್ರಣಕ್ಕೆ ಅರಿಶಿನ ಪುಡಿಯನ್ನು ಹಾಕಿ ಮಿಶ್ರ ಮಾಡಿ.

4.ಬಟಾಟೆಯನ್ನು ಓವಲ್ ಆಕಾರದಲ್ಲಿ ತುಂಡರಿಸಿ. ಅವುಗಳ ಮೇಲೆ ಉಪ್ಪು ಚಿಮುಕಿಸಿ, ಗ್ರೈಂಡ್ ಮಾಡಿದ ಮಸಾಲವನ್ನು ಹೆಚ್ಚಿದ ಬಟಾಟೆಯ ಮೇಲೆ ಸವರಿ.

5. ಇದನ್ನು ಬಾಳೆ ಎಲೆಯಲ್ಲಿ ಮುಚ್ಚಿ ಕವರ್ ಮಾಡಿ. ತವಾ ಬಿಸಿ ಮಾಡಿ ಈ ಕವರ್ ಮಾಡಿದ ಬಾಳೆ ಎಲೆಯನ್ನು ಅದರ ಮೇಲೆ ಇಡಿ.

6. ಕವರ್ ಮಾಡಿದ ಬಾಳೆ ಎಲೆಯ ಸುತ್ತ ಎಣ್ಣೆ ಸವರಿ. ನಂತರ ಮುಚ್ಚಳ ಮುಚ್ಚಿ ಬೇಯಿಸಿ ಬಟಾಟೆ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ.

7. ಮಧ್ಯಾಹ್ನದ ಊಟಕ್ಕೆ ನಿಮ್ಮ ಮೆಚ್ಚಿನ ಸೈಡ್ ಡಿಶ್ ಆಗಿ ಪೊಟೇಟೊ ರಿಚಾಯ್ಡೊವನ್ನು ಸವಿಯಲು ಸಿದ್ದ.

English summary

ruchikaravada Potato-Recheiado

we can prepare variety of dishes while using the potatoes. Here we can introduce the potato Recheiado recipe, which can be using for the afternoon dishes
Story first published: Tuesday, December 17, 2013, 12:03 [IST]
X
Desktop Bottom Promotion