For Quick Alerts
ALLOW NOTIFICATIONS  
For Daily Alerts

ಅತಿ ಸರಳವಾಗಿ ಮಾಡಬಹುದಾದ ಆಲೂ ಹೂಕೋಸು ರೆಸಿಪಿ!

|

ಇತ್ತೀಚಿನ ದಿನಗಳಲ್ಲಿ ಕಷ್ಟಕರವಾದ ಅಡುಗೆಗಳನ್ನು ಮಾಡಲು ಯಾರಿಗೂ ಇಷ್ಟವಾಗುವುದಿಲ್ಲ. ಇದಕ್ಕೆ ಕಾರಣ ಇವುಗಲನ್ನು ಮಾಡಲು ನಮಗೆ ಸಮಯಾವಕಾಶದ ಕೊರತೆ ಎಲ್ಲರಿಗು ಇರುತ್ತದೆ.ಆದರೂ ಆಹಾರ ಎಂಬುದು ಎಲ್ಲರಿಗು ಅಗತ್ಯವಾಗಿ ಬೇಕಾಗಿರುತ್ತದೆ. ಏಕೆಂದರೆ ನಾವು ಬದುಕಲು ಮತ್ತು ಆರೋಗ್ಯವಾಗಿರಲು ಇದು ಅತ್ಯಾವಶ್ಯಕ. ಹಾಗಾಗಿ ಮನೆಯಲ್ಲಿ ತಯಾರಿಸಿದ ಆಹಾರವು ನಮ್ಮ ಇಂದಿನ ಅಗತ್ಯವಾಗಿದೆ. ತರಕಾರಿಗಳು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಆಗರವಾಗಿವೆ.

ಒಂದೊಮ್ಮೆ ನೀವು ಮಾಂಸಾಹಾರಿ ಪ್ರಿಯರಾಗಿದ್ದರು, ನೀವು ತರಕಾರಿಗಳನ್ನು ಸೇವಿಸಬೇಕಾಗುತ್ತದೆ. ಒಂದು ವೇಳೆ ನಿಮಗೆ ಎಲ್ಲಾ ತರಕಾರಿಗಳು ಹಿಡಿಸಲಿಲ್ಲವೆಂದಾದಲ್ಲಿ ಈ ರೆಸಿಪಿಯು ನಿಮಗಾಗಿ ಎಂದುಕೊಳ್ಳಿ. ಆಲೂ ಅಥವಾ ಆಲೂಗಡ್ಡೆಗಳು ಬಹುತೇಕ ಮಂದಿಗೆ ಅತ್ಯಂತ ಪ್ರಿಯವಾದ ತರಕಾರಿಯಾಗಿರುತ್ತದೆ. ಆದ್ದರಿಂದ ಇದನ್ನು ನಾವು ನಾನಾ ತರಹ ಬಳಸುತ್ತೇವೆ ಹಾಗು ನಾವು ಕಡಿಮೆ ಆದ್ಯತೆ ನೀಡುವ ತರಕಾರಿಗಳ ಜೊತೆಗೆ ಸೇರಿಸಿ, ನಮ್ಮ ಬಾಯಿ ಚಪಲವನ್ನು ತೀರಿಸುವಂತಹ ಆಹಾರಗಳನ್ನು ಕಡಿಮೆ ಅವಧಿಯಲ್ಲಿ ತಯಾರಿಸಿಕೊಳ್ಳುತ್ತೇವೆ.

ಆಲೂ ಗೋಬಿ ಅಂತಹ ಒಂದು ತರಕಾರಿಗಳಿಂದ ಮಾಡುವ ಪ್ರಸಿದ್ಧ ಖಾದ್ಯವಾಗಿದೆ. ಹಾಗಾದರೆ ನಾವು ಇಂದು ಈ ಖಾದ್ಯದ ಆವೃತ್ತಿಯ ಬಗ್ಗೆ ತಿಳಿದುಕೊಳ್ಳೋಣ. ಇದೊಂದು ತಕ್ಷಣಕ್ಕೆ ಮಾಡಿಕೊಳ್ಳಬಹುದಾದ ರೆಸಿಪಿಯನ್ನು ಹೊಂದಿದೆ. ಇದಕ್ಕೆ ಯಾವುದೇ ಕಷ್ಟಕರವಾದ ಹಂತಗಳು ಇಲ್ಲ.

Quick & Easy Rasedar Aloo Gobhi Recipe

ಪ್ರಮಾಣ: 4 : 3
*ಸಿದ್ಧತಾ ಸಮಯ: 15 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಬೇಕಾಗುವ ಪದಾರ್ಥಗಳು
*ಆಲೂಗಡ್ಡೆ - 3 (ಬೆಂದ ಮತ್ತು ಕತ್ತರಿಸಿದ ಹೋಳುಗಳು)
*ಹೂಕೋಸು - 1 (ಬೆಂದ ಮತ್ತು ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ತುಂಡುಗಳು)
*ಟೊಮೇಟೊ- 3 (ಸಣ್ಣದಾಗಿ ಕತ್ತರಿಸಿದಂತಹವು)
*ಶುಂಠಿ ಪೇಸ್ಟ್ - 1 ಚಮಚ
*ಜೀರಿಗೆ ಪುಡಿ - 2 ಚಮಚ
*ಕೆಂಪು ಮೆಣಸಿನಕಾಯಿ ಪುಡಿ - 1 ಚಮಚ
*ಅರಿಶಿಣ ಪುಡಿ - 1 ಚಮಚ
*ಸಕ್ಕರೆ - ಒಂದು ಚಿಟಿಕೆ
*ಉಪ್ಪು - ರುಚಿಗೆ ತಕ್ಕಷ್ಟು
*ಜೀರಿಗೆ (ಬೀಜಗಳು) - 1 ಚಮಚ
*ಕರಿಬೇವು -ಸ್ವಲ್ಪ
*ಎಣ್ಣೆ - 2 ಚಮಚ
*ನೀರು - 1 ಕಪ್
*ಕೊತ್ತಂಬರಿ ಸೊಪ್ಪು - ಸ್ವಲ್ಪ ಅಲಂಕಾರಕ್ಕೆ

ವಿಧಾನ
1. ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಮತ್ತು ಅದಕ್ಕೆ ಜೀರಿಗೆಯ ಬೀಜಗಳನ್ನು ಹಾಗು ಕರಿಬೇವು ಸೊಪ್ಪನ್ನು ಹಾಕಿ, ಒಗ್ಗರೆಣ್ಣೆಯಂತೆ ಉರಿಯಿರಿ.
2. ನಂತರ ಇದಕ್ಕೆ ಶುಂಠಿಯ ಪೇಸ್ಟನ್ನು ಸೇರಿಸಿ ಮತ್ತು ಇದನ್ನು ಒಂದು ನಿಮಿಷ ಕಾಲ ಬೇಯಿಸಿ.
3. ಈಗ ಬೇಯಿಸಿದ ಆಲೂಗಡ್ಡೆ ಮತ್ತು ಹೂಕೋಸುಗಳನ್ನು ಇದಕ್ಕೆ ಬೆರೆಸಿ. 2-3 ನಿಮಿಷಗಳ ಕಾಲ ಬೇಯಿಸಿ.
4. ನಂತರ ಅರಿಶಿಣ, ಕೆಂಪು ಮೆಣಸಿನಕಾಯಿ ಪುಡಿ, ಸಕ್ಕರೆ, ಜೀರಿಗೆ ಪುಡಿಗಳನ್ನು ಸೇರಿಸಿ 3-4 ನಿಮಿಷ ಬೇಯಿಸಿ.
5. ಇದಾದ ನಂತರ ಇದಕ್ಕೆ ಕತ್ತರಿಸಿದ ಟೊಮೇಟೊಗಳನ್ನು ಮತ್ತು ಉಪ್ಪನ್ನು ಹಾಕಿ. ಮಧ್ಯಮ ಗಾತ್ರದ ಉರಿಯಲ್ಲಿ ಇದನ್ನು 3-4 ನಿಮಿಷಗಳ ಕಾಲ ಬೇಯಲು ಬಿಡಿ.
6. ನಂತರ ಕೊನೆಗೆ ಇದಕ್ಕೆ ನೀರನ್ನು ಬೆರೆಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
7. 5 ನಿಮಿಷ ಮಧ್ಯಮ ಗಾತ್ರದ ಉರಿಯಲ್ಲಿ ಬೇಯಲು ಬಿಟ್ಟು ಬಾಣಲೆಯನ್ನು ಮುಚ್ಚಿ. ನಂತರ ಒಲೆಯನ್ನು ಆರಿಸಿ.
8. ಆಲು ಗೋಬಿ ಈಗ ಸಿದ್ಧವಾಗಿದೆ. ಇದರ ಮೇಲೆ ಅಲಂಕಾರಕ್ಕೆ ಕೊತ್ತಂಬರಿಯನ್ನು ಉದುರಿಸಿ.ಈ ರುಚಿಕರವಾದ ಖಾದ್ಯವನ್ನು ಅನ್ನದ ಜೊತೆಗೆ ಮತ್ತು ಚಪಾತಿಯ ಜೊತೆಗು ಸಹ ಸವಿಯಬಹುದು.

English summary

Quick & Easy Rasedar Aloo Gobhi Recipe

Nowadays nobody likes to prepare complicated recipes. This is for the obvious reason that we hardly have time for anything. Food is however a crucial thing because it is essential for us to survive and stay healthy.
X
Desktop Bottom Promotion