For Quick Alerts
ALLOW NOTIFICATIONS  
For Daily Alerts

ಸರಳವಾಗಿ ಮಾಡಬಹುದಾದ ಕ್ರಿಸ್ಪಿ ಹಪ್ಪಳದ ರೆಸಿಪಿ!

|

ದಿನಾ ಒಂದೇ ರೀತಿಯ ತರಕಾರಿಗಳನ್ನು ಬಳಸಿಕೊಂಡು ಮಾಡುವ ಪಲ್ಯ, ರಸಂ, ಸಾಂಬರ್, ನಿಮಗೆ ಬೋರ್ ಆಗಿರಬಹುದು! ಹಾಗಾಗಿ, ನಿಮ್ಮ ಮಧ್ಯಾಹ್ನದ ಊಟದ ರುಚಿ ಇನ್ನಷ್ಟು ಸ್ವಾದಿಷ್ಟಭರಿತವಾಗಿರಲು ನೀವು ಹಪ್ಪಳದಿಂದ ಮಾಡಿರುವ ರೆಸಿಪಿಯನ್ನು ಪ್ರಯತ್ನಿಸಲೇ ಬೇಕು!

ಹೌದು ಊಟಕ್ಕೆ ಉಪ್ಪಿನಕಾಯಿ ಎಷ್ಟು ಮುಖ್ಯವೋ ಹಪ್ಪಳವೂ ಅಷ್ಟೇ ಮುಖ್ಯ. ಕುರುಕುರು ಸಪ್ಪಳ ಮಾಡುತ್ತಾ ಹಪ್ಪಳದೊಂದಿಗೆ ಒಂದಷ್ಟು ಹೆಚ್ಚಿಗೇ ಊಟವನ್ನು ಹೊಟ್ಟೆಗೆ ಇಳಿಸಬಹುದು.

ಸಾಮಾನ್ಯವಾಗಿ ನಾವು ಹಪ್ಪಳವನ್ನು ಫ್ರೈ ಮಾಡಿ ಊಟದ ಜೊತೆ ಸೇವಿಸುತ್ತೇವೆ, ಆದರೆ ಇಂದು ನಾವು ಹಪ್ಪಳದಿಂದ ಮಾಡಿರುವ ವಿಶಿಷ್ಟವಾದ ಹಾಗೂ ನಾಲಿಗೆಯ ರುಚಿತಣಿಸುವ ಸೈಡ್ ಡಿಶ್ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಸರಳವಾಗಿ ಮಾಡಬಹುದಾದ ಕ್ರಿಸ್ಪಿ ಹಪ್ಪಳದ ರೆಸಿಪಿ!

ಸಮ್ಮರ್ ಸ್ಪೆಶಲ್ ರುಚಿಯಾದ ಮಾವಿನ ಕಾಯಿ ಚಟ್ನಿ

ಇದನ್ನು ನೀವು ಊಟದ ಜೊತೆ ಹಾಗೂ ರೋಟಿಯೊಂದಿಗೆ ಕೂಡ ಸೇವಿಸಬಹುದು. ತುಂಬಾ ಸರಳವಾಗಿ ಮಾಡಬಹುದಾದ ಈ ಕ್ರಿಸ್ಪಿ ಹಪ್ಪಳದ ರೆಸಿಪಿ ಖಂಡಿತವಾಗಿಯೂ ನಿಮ್ಮ ನಾಲಿಗೆಯ ರುಚಿ ತಣಿಸುವಲ್ಲಿ ಎರಡು ಮಾತಿಲ್ಲ.

ಆದ್ದರಿಂದ ಈ ವೀಕೆಂಡನ್ನು ಇನ್ನಷ್ಟು ಸ್ವಾದಿಷ್ಟಗೊಳಿಸಲು ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಹಪ್ಪಳದಿಂದ ಮಾಡಿರುವ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದೆ. ಖಂಡಿತ ಟ್ರೈ ಮಾಡಿ ಅನುಭವವನ್ನು ಮನೆಮಂದಿಯೊಂದಿಗೆ ಹಂಚಿಕೊಳ್ಳಿ. ಇನ್ನಷ್ಟು ಮಾಹಿತಿಗಾಗಿ ಲೇಖನದ ಕೊನೆಯಲ್ಲಿ ನೀಡಲಾಗಿರುವ ವೀಡಿಯೊವನ್ನು ವೀಕ್ಷಿಸಿ.

ಅವಲಕ್ಕಿ ಹಪ್ಪಳ ಹಾಗೂ ಹಲಸಿನಹಣ್ಣು ಹಪ್ಪಳ

ಪ್ರಮಾಣ: 2

*ಸಿದ್ಧತಾ ಸಮಯ: 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು:
* ಉದ್ದೀನ ಬೇಳೆಯ ಹಪ್ಪಳ - 2
* ಈರುಳ್ಳಿ - 1 (ಕತ್ತರಿಸಿದ್ದು)
* ಸ್ಪ್ರಿಂಗ್ ಈರುಳ್ಳಿ- 2 (ಕತ್ತರಿಸಿದ್ದು)
* ಹಸಿ ಮೆಣಸು-2 (ಕತ್ತರಿಸಿದ್ದು)
* ಜೀರಿಗೆ ಪುಡಿ - 1 ಟೀ ಸ್ಪೂನ್
* ಕೊತ್ತಂಬರಿ ಪುಡಿ- 1 ಟೀ ಸ್ಪೂನ್
* ಡ್ರೈ ಮ್ಯಾಂಗೋ ಪೌಡರ್ (ಒಣ ಮಾವಿನ ಪುಡಿ)- 1 ಟೀ ಸ್ಪೂನ್
* ಉಪ್ಪು - ರುಚಿಗೆ ತಕ್ಕಷ್ಟು
* ಕೊತ್ತುಂಬರಿ ಎಲೆಗಳು - ಸ್ವಲ್ಪ
* ಎಣ್ಣೆ - 1 ಟೀ ಸ್ಪೂನ್

ಮಾಡುವ ವಿಧಾನ:
1. ತವಾವನ್ನು ಬಿಸಿ ಮಾಡಿ ಹಾಗೂ ಹಪ್ಪಳ ಕ್ರಿಸ್ಪಿ ಆಗುವವರೆಗೆ ರೋಸ್ಟ್ ಮಾಡಿ
2. ಹಪ್ಪಳಗಳು ಚೆನ್ನಾಗಿ ರೋಸ್ಟ್ ಆದ ನಂತರ, ಅದನ್ನು ಇನ್ನೊಂದು ಪ್ಲೇಟ್‌ಗೆ ಹಾಕಿ, ಹಾಗೂ ನಿಮ್ಮ ಕೈಯಿಂದ ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ.
3. ತದನಂತರ ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಹಾಗೂ ಈರುಳ್ಳಿ ಕೆಂಪು ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
4. ಈಗ ಜೀರಿಗೆ ಪುಡಿ, ಹಸಿ ಹಸಿಮೆಣಸು, ಕೊತ್ತಂಬರಿ ಪುಡಿ, ಸ್ಪ್ರಿಂಗ್ ಈರುಳ್ಳಿ, ಡ್ರೈ ಮ್ಯಾಂಗೋ ಪೌಡರ್ (ಒಣ ಮಾವಿನ ಪುಡಿ), ಉಪ್ಪು, ಇವುಗಳೆಲ್ಲವನ್ನು ಪ್ಯಾನ್‌ಗೆ ಹಾಕಿ ಹಾಗೂ 4-5 ನಿಮಿಷ ಕೈಯಾಡಿಸಿ

5. ನಂತರ ಪುಡಿ ಮಾಡಲಾಗಿರುವ ಹಪ್ಪಳಗಳನ್ನು ಪ್ಯಾನ್‌ಗೆ ಹಾಕಿ ಹಾಗೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಅಲ್ಲದೆ 1-2 ನಿಮಿಷ ಬೇಯಿಸಿ
6. ಇನ್ನು ಗ್ಯಾಸ್ ಸ್ಟವ್ ಅನ್ನು ಆಫ್ ಮಾಡಿ ಹಾಗೂ ಹೆಚ್ಚಿದ ಕೊತ್ತಂಬರಿ ಸೊಪ್ಪು ಜೊತೆ ಅಲಂಕರಿಸಿ

ರುಚಿ ರುಚಿಯಾದ ಹಪ್ಪಳದ ರೆಸಿಪಿ ಸವಿಯಲು ಸಿದ್ಧ. ಇದನ್ನು ನಿಮ್ಮ ಊಟದ ಜೊತೆ ಸೈಡ್ ಡಿಶ್ ಆಗಿ ಸೇವಿಸಿ.

<center><iframe width="100%" height="417" src="//www.youtube.com/embed/BTzhsD2oVAg" frameborder="0" allowfullscreen></iframe></center>

English summary

Quick & Easy Papad Ki Sabzi Recipe (Watch Video)

Keep aside the usual vegetables, dairy products, chicken, mutton and other eatables. Today we have a unique and lip smacking side dish recipe made of papads.
X
Desktop Bottom Promotion