For Quick Alerts
ALLOW NOTIFICATIONS  
For Daily Alerts

ಪನೀರ್ ಚೆನ್ನಾ ಮಸಾಲ ರೆಸಿಪಿ

|

ಪನೀರ್ ಚೆನ್ನಾ ಮಸಾಲ ಖಾರ ಪ್ರಿಯರ ಫೇವರೆಟ್ ಖಾದ್ಯವಾಗುವುದರಲ್ಲಿ ಸಂಶಯವಿಲ್ಲ. ಇದೊಂದು ಸರಳವಾದ ರೆಸಿಪಿಯಾಗಿದ್ದು ರೊಟ್ಟಿ, ಚಪಾತಿ ಜೊತೆ ತಿನ್ನಲು ಸೂಕ್ತವಾದ ಪಲ್ಯ ಇದಾಗಿದೆ.

ಪನೀರ್ ಮತ್ತು ಚೆನ್ನಾ ಎಂಬ ಎರಡು ರುಚಿಕರವಾದ ಪದಾರ್ಥಗಳನ್ನು ಬಳಸಿ ಈ ಪಲ್ಯ ಮಾಡುವುದು ಹೇಗೆ ಎಂದು ನೋಡೋಣವೇ?

Paneer Chana Masala Dry Recipe

ಬೇಕಾಗುವ ಪದಾರ್ಥಗಳು
ಚೆನ್ನಾ 1 ಕಪ್
ಪನೀರ್ 100 ಗ್ರಾಂ
ಈರುಳ್ಳಿ 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಟೊಮೆಟೊ 2
ಕೊತ್ತಂಬರಿ ಪುಡಿ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಜೀರಿಗೆ ಪುಡಿ 1 ಚಮಚ
ಕರಿ ಮೆಣಸಿನ ಪುಡಿ ಅರ್ಧ ಚಮಚ
ಗರಂ ಮಸಾಲ ಅರ್ಧ ಚಮಚ
ಖಾರದ ಪುಡಿ(ಖಾರಕ್ಕೆ ತಕ್ಕಷ್ಟು)
ಒಣ ಮಾವಿನ ಪುಡಿ 1 ಚಮಚ
ಜೀರಿಗೆ ಅರ್ಧ ಚಮಚ
ಎಣ್ಣೆ 2 ಚಮಚ
ನೀರು 1 ಕಪ್
ಸ್ವಲ್ಪ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

* ಕಡಲೆಯನ್ನು 5-6 ಗಂಟೆಗಳ ಕಾಲ ನೆನೆ ಹಾಕಿ.

* ನಂತರ ಕಡಲೆಯನ್ನು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ ಬೇಯಲು ತಕ್ಕ ನೀರು ಹಾಕಿ, ಉಪ್ಪು ಸೇರಿಸಿ 3 ವಿಶಲ್ ಬರುವವರೆಗೆ ಬೇಯಿಸಿ.

* ಈಗ ಪ್ಯಾನ್ ಅನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ಜೀರಿಗೆ ಚಟಾಪಟಾ ಶಬ್ದ ಮಾಡುವಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 3 ನಿಮಿಷ ಫ್ರೈ ಮಾಡಿ.

* ಈಗ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ, ನಂತರ ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ,ಜೀರಿಗೆ ಪುಡಿ, ಒಣ ಮಾವಿನಕಾಯಿ ಪುಡಿ, ಕರಿ ಮೆಣಸಿನ ಪುಡಿ ಹಾಕಿ, ಗರಂ ಮಸಾಲ, ಪನೀರ್ ಹಾಕಿ 5 ನಿಮಿಷ ಫ್ರೈ ಮಾಡಿ.

* ನಂತರ ಬೇಯಿಸಿದ ಕಡಲೆಯನ್ನು ಹಾಕಿ ಮಿಕ್ಸ್ ಮಾಡಿ, ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಸೇರಿಸಿ, ಮಿಶ್ರಣ ಡ್ರೈ ರೀತಿಯಾಗುವವರೆಗೆ ಫ್ರೈ ಮಾಡಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಉರಿಯಿಂದ ಇಳಿಸಿದರೆ ಚೆನ್ನಾ ಪನೀರ್ ರೆಡಿ.

English summary

Paneer Chana Masala Dry Recipe

Preparing paneer chana masala you just have to keep some regular kitchen ingredients ready and it goes very well with rotis and parathas. So, just prepare this delightful dish and give your taste buds a spicy and delicious treat.
X
Desktop Bottom Promotion