ಮನೆಯಲ್ಲೇ ತಯಾರಿಸಿ 'ಪನ್ನೀರ್ ಬಟರ್ ಮಸಾಲ' ರೆಸಿಪಿ

ಸರಳವಾಗಿ ತಯಾರಿಸಬಹುದಾದ ಪನ್ನೀರ್ ಬಟರ್ ಮಸಾಲದ ರುಚಿಯು ಅನನ್ಯವಾದುದು. ಅಲ್ಲದೆ ಇದಕ್ಕೆ ಸೇರಿಸುವ ಬೆಣ್ಣೆಯು ಈ ಖಾದ್ಯದ ರುಚಿಯನ್ನು ಇಮ್ಮಡಿಗೊಳಿಸುತ್ತದೆ. ಜೊತೆಗೆ ಇದಕ್ಕೆ ಹಾಕುವ ಮಸಾಲೆಯು ಸಹ ನಿಮ್ಮ ಬಾಯಿಯಲ್ಲಿ ನೀರೂರಿಸುತ್ತದೆ..

By: Vani Nayak
Subscribe to Boldsky

ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆಯೇ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳು ತಯಾರು ಮಾಡಬೇಕಾಗುತ್ತದೆ. ಈ ಹಬ್ಬದ ಸಮಯದಲ್ಲಿ ಮನೆಯು ಬಂಧು ಮಿತ್ರರು, ಅತಿಥಿಗಳಿಂದ ತುಂಬಿರುತ್ತದೆ. ಇಂಥ ಸಂದರ್ಭದಲ್ಲಿ ನೀವು ನಿಮ್ಮ ಪಾಕಶಾಸ್ತ್ರ ಪ್ರವೀಣತೆ ಎಷ್ಟರ ಮಟ್ಟಿಗೆ ತೋರಿಸಿದರೆ, ಅಷ್ಟರ ಮಟ್ಟಿಗೆ ಹಬ್ಬದ ಆಚರಣೆ ಯಶಸ್ವಿಯಾಗುತ್ತದೆ. ಆದರೆ, ಚಿಂತಿಸುವ ಅವಶ್ಯಕತೆ ಇಲ್ಲ. ಬೋಲ್ಡ್ ಸ್ಕೈ ಬೇಕಾದ ಸಹಾಯ ಮಾಡಲು ನಿಮ್ಮ ನೆರವಿಗೆ ಇದೆ.

ಇಂದು ಕೆನೆಭರಿತ ಸ್ವಾದಿಷ್ಟಕರವಾದ ಪನ್ನೀರ್ ರೆಸಿಪಿ ಬಗ್ಗೆ ತಿಳಿದುಕೊಳ್ಳೋಣ. ಪನ್ನೀರ್ ಬಟರ್ ಮಸಾಲ ಉತ್ತರ ಭಾರತದ ಜನಪ್ರಿಯ ಖಾದ್ಯವಾಗಿದೆ. ಮೃದುವಾದ ಪನ್ನೀರ್ ಕ್ಯೂಬ್ ಗಳನ್ನು ಬೆಣ್ಣೆಯಿಂದೊಡಗೂಡಿದ ಟೊಮೇಟೊ ಹಣ್ಣಿನ ರಸದಲ್ಲಿ ಭಾರತೀಯ ಮಸಾಲೆಯೊಡನೆ ಬೇಯಿಸಲಾಗುತ್ತದೆ.    ನಾಲಿಗೆಯ ರುಚಿ ತಣಿಸುವ ಮಟರ್ ಪನ್ನೀರ್ ರೆಸಿಪಿ

ಬಾಯಲ್ಲಿಟ್ಟರೆ ಕರಗುವಂತಹ ಈ ಪನ್ನೀರ್ ರೆಸಿಪಿಯನ್ನು ಒಮ್ಮೆ ನಾಲಿಗೆಯ ಮೇಲೆ ಇಟ್ಟ ಕೂಡಲೆ ಮತ್ತೆ ಮತ್ತೆ ಸವಿಯಬೇಕೆಂಬ ಹಂಬಲವಾಗುತ್ತದೆ. ಸ್ವಾದಿಷ್ಟಕರವಾದ ಈ 'ಪನ್ನೀರ್ ಬಟರ್ ಮಸಾಲ' ರೆಸಿಪಿಯನ್ನು ದೀಪಾವಳಿ ಹಬ್ಬಕ್ಕೆ ನೀವು ಒಮ್ಮೆ ತಯಾರಿಸಿ ನೋಡಿ.

*ಅಳತೆ: 3 ಮಂದಿಗೆ ಸಾಕಾಗುವಷ್ಟು
*ಸಿದ್ಧತೆಯ ಸಮಯ: 10 ನಿಮಿಷಗಳು
*ತಯಾರಿಸುವ ಸಮಯ: 20 ನಿಮಿಷಗಳು

Paneer
 

ಬೇಕಾಗುವ ಸಾಮಗ್ರಿಗಳು
*ಪನ್ನೀರ್ - 500 ಗ್ರಾ(ಕ್ಯೂಬ್ ಆಕಾರ ಅಂದರೆ, ಘನಾಕೃತಿಯಲ್ಲಿರಬೇಕು)
*ಬೆಣ್ಣೆ - 4 ಟೇಬಲ್ ಚಮಚ
* ಎಣ್ಣೆ - 1 ಟೀ ಚಮಚ
*ಲವಂಗದ ಎಲೆ - 1
*ಲವಂಗ - 2
*ಚೆಕ್ಕೆ - 1
*ಒಣ ಮೆಣಸಿನಕಾಯಿ - 2 (ಮುರಿದದ್ದು)
*ಕೊತ್ತಂಬರಿ ಬೀಜ - ಪುಡಿ ಮಾಡಿದ್ದು 2 ಟೇಬಲ್ ಚಮಚ
*ಈರುಳ್ಳಿ - 1 (ಹೆಚ್ಚಿದ್ದು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೇಬಲ್ ಚಮಚ
*ಟೊಮೇಟೊ - 3 (ರುಬ್ಬಿದ್ದು)
*ಧನಿಯಾ ಪುಡಿ (ಕೊತ್ತಂಬರಿಬೀಜದ ಪುಡಿ)- 1 ಟೀ ಚಮಚ
*ಅಚ್ಚ ಖಾರದ ಪುಡಿ - 1 ಟೀ ಚಮಚ
*ಅರಿಶಿನ ಪುಡಿ - 1 ಟೀ ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಕಸೂರಿ ಮೇಥಿ - 1 ಟೀ ಚಮಚ
*ತಾಜಾ ಕ್ರೀಮ್ - 1 ಟೇಬಲ್ ಚಮಚ
*ನೀರು - ಅರ್ಧ ಕಪ್  

Paneer butter masala
 

ಮಾಡುವ ವಿಧಾನ
*2 ಟೀಬಲ್ ಚಮಚ ಬೆಣ್ಣೆ ಮತ್ತು 1 ಟೀ ಚಮಚ ಎಣ್ಣೆಯನ್ನು ಒಂದು ಪ್ಯಾನ್‌ನಲ್ಲಿ ಬಿಸಿ ಮಾಡಿ. ಇದಕ್ಕೆ ಲವಂಗದ ಎಲೆ, ಮುರಿದ ಒಣ ಮೆಣಸಿನಕಾಯಿ, ಕುಟ್ಟಿ ಪುಡಿ ಮಾಡಿದ ಧನಿಯಾ ಬೀಜ, ಚಕ್ಕೆ, ಲವಂಗ ಹಾಕಿ ಒಂದು ನಿಮಿಷಗಳ ಕಾಲ ಹುರಿಯಿರಿ.
*ನಂತರ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಹಾಕಿ 4-5 ನಿಮಿಷಗಳ ಕಾಲ ಬಾಡಿಸಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ 2-3 ನಿಮಿಷಗಳ ಕಾಲ ಬೇಯಿಸಿ.
*ಇನ್ನು ಅರಿಶಿನ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ ಮತ್ತು ರುಬ್ಬಿಕೊಂಡು ತಯಾರಿಸಿದ ಟೊಮೇಟೊ ಪ್ಯೂರಿಯನ್ನು ಹಾಕಿರಿ.
*ಈ ಸಾಮಗ್ರಿಗಳನೆಲ್ಲಾ ಹಾಕಿದ ನಂತರ ಮೀಡಿಯಮ್ ಉರಿಯಲ್ಲಿ 5-6 ನಿಮಿಷಗಳ ಕಾಲ ಬೇಯಿಸಿ.
*ನಂತರ ಪನ್ನೀರ್ ತುಂಡುಗಳನ್ನು ಮಿಶ್ರಣಕ್ಕೆ ಹಾಕಿ ನಿಧಾನವಾಗಿ ಕೈಯಾಡಿಸಿ.
*ನೀರನ್ನು ಹಾಕಿ, ಉಪ್ಪು ಸೇರಿಸಿ ಕೈಯಾಡಿಸಿ. ಕಸೂರಿ ಮೇಥಿಯನ್ನು ಉದುರಿಸಿ ಸಣ್ಣ ಉರಿಯಲ್ಲಿ 5-6 ನಿಮಿಷಗಳ ಕಾಲ ಬೇಯಿಸಿ. ಆದ ನಂತರ, ಒಲೆಯನ್ನು ಆರಿಸಿ ಉಳಿದ ಬೆಣ್ಣೆ ಮತ್ತು ಕ್ರೀಮ್ ನಿಂದ ಅಲಂಕರಿಸಿ.  

ರುಚಿಯಾದ ಪಾಲಾಕ್ ಪನ್ನೀರ್ ಪಾಕ  

ಪನ್ನೀರ್ ಟೊಮೆಟೊ ಗ್ರೇವಿ -ಸೈಡ್ ಡಿಶ್ ರೆಸಿಪಿ 

Story first published: Tuesday, October 18, 2016, 13:03 [IST]
English summary

Paneer Butter Masala: Diwali Special Recipe

With Diwali around the corner, it is time to gear up with all sorts of mouthwatering dishes. Diwali is a festival when your house will be full of guests and relatives. So it goes without saying that you will have to display your culinary skills to make it a hit on the festive occasion. Do not worry, as Boldsky is here to help you with all the support you need.
Please Wait while comments are loading...
Subscribe Newsletter