For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ನಿಮ್ಮನ್ನು ಕೂಲ್ ಮಾಡುವ ಪಾಲಾಕ್ ರಾಯಿತ ರೆಸಿಪಿ

|

ಬಿಸಿಲ ಬೇಗೆಗೆ ಬಳಲಿ ಬೆಂಡಾದ ದೇಹಕ್ಕೆ ತುಸು ತಂಪನ್ನು ನೀಡುವುದು ಆವಶ್ಯಕ. ಅದು ರಾಯಿತವಾಗಿದ್ದಲ್ಲಿ ಅದರಷ್ಟು ಉತ್ತಮ ಬೇರಾವುದೂ ಇಲ್ಲ ಎಂದೇ ಹೇಳಬಹುದು.

ಇಂದಿನ ಲೇಖನದಲ್ಲಿ ತಂಪು ತಂಪಾದ ಗಟ್ಟಿ ಮೊಸರಿನಿಂದ ಮಾಡಿದ ರಾಯಿತ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದ್ದು ನೀವೂ ಬೇಸಿಗೆಯ ಉರಿಯನ್ನು ಕಡಿಮೆಗೊಳಿಸಲು ಇದನ್ನು ಟ್ರೈ ಮಾಡಬಹುದು.

ಪಾಲಾಕ್ ರಾಯಿತ ತಂಪು ಮಾಡುವ ಗುಣವನ್ನು ಹೊಂದಿದ್ದು ಇಂದಿನ ರಾಯಿತ ರೆಸಿಪಿಯಲ್ಲಿ ಪಾಲಾಕ್ ಅನ್ನು ಮುಖ್ಯವಾಗಿಸಿ ನಾವು ರಾಯಿತ ರೆಡಿ ಮಾಡುತ್ತಿದ್ದೇವೆ. ಇದರಲ್ಲಿ ಐರನ್ ಹಾಗೂ ವಿಟಮಿನ್‌ಗಳು ಹೆಚ್ಚಿದ್ದು ನಿಮ್ಮ ದೇಹಕ್ಕೆ ಅಗತ್ಯವಾಗಿರುವ ಶಕ್ತಿಯನ್ನು ನೀಡುತ್ತದೆ.

Palak Raita Recipe To Beat The Heat (Watch Video)

ಇಂದಿನ ರೆಸಿಪಿ ತಯಾರಿಯನ್ನು ನಾವು ವೀಡಿಯೊದ ಮೂಲಕ ತೋರಿಸುತ್ತಿದ್ದು ಅದನ್ನು ಹಂತ ಹಂತ ಕ್ರಮದ ಮೂಲಕ ನೀವೂ ಅಭ್ಯಸಿಸಬಹುದಾಗಿದೆ. ಬನ್ನಿ ಹಾಗಿದ್ದರೆ ರುಚಿಕರ ರಾಯಿತ ರೆಸಿಪಿಯನ್ನು ಮಾಡುವ ವಿಧಾನವನ್ನು ನಿಮಗಾಗಿ ಇಲ್ಲಿ ತೋರಿಸುತ್ತಿದ್ದೇವೆ.

ಈರುಳ್ಳಿ, ಬೆಳ್ಳುಳ್ಳಿ ರಾಯತದ ರೆಸಿಪಿ

ಪ್ರಮಾಣ:3
ಸಿದ್ಧತಾ ಸಮಯ: 10 ನಿಮಿಷಗಳು
ರೆಫ್ರಿಜರೇಶನ್ ಸಮಯ: 30 ನಿಮಿಷಗಳು

ಸಾಮಾಗ್ರಿಗಳು:
.ಪಾಲಾಕ್ - 1/2 ಕಪ್ (ಚೆನ್ನಾಗಿ ಕತ್ತರಿಸಿದ್ದು)
.ದಪ್ಪ ತಾಜಾ ಮೊಸರು - 1 1/2 ಕಪ್‌ಗಳು
.ಹಸಿ ಮೆಣಸು - 1/2 ಸ್ಪೂನ್ (ಸಣ್ಣಗೆ ಹೆಚ್ಚಿದ್ದು)
.ಉಪ್ಪು - ರುಚಿಗೆ ತಕ್ಕಷ್ಟು
.ಸಕ್ಕರೆ - ಸ್ವಲ್ಪ
.ಕಾಳುಮೆಣಸಿನ ಹುಡಿ - ರುಚಿಗೆ ತಕ್ಕಷ್ಟು

ಊಟದ ರುಚಿ ಹೆಚ್ಚಿಸುವ ಆಲೂ ರಾಯತ

ಮಾಡುವ ವಿಧಾನ:
1.ಪಾಲಾಕ್ ಅನ್ನು ಚೆನ್ನಾಗಿ ತೊಳೆದು ಅದರ ಸೊಪ್ಪನ್ನು ಬೇರ್ಪಡಿಸಿ ಬಿಸಿ ನೀರಿಗೆ ಅದನ್ನು ಹಾಕಿ.
2.ಸ್ವಲ್ಪ ನಿಮಿಷದ ನಂತರ, ನೀರಿನಿಂದ ಪಾಲಕ್ ಎಲೆಗಳನ್ನು ತೆಗೆಯಿರಿ ಹಾಗೂ ಸಣ್ಣದಾಗಿ ಹೆಚ್ಚಿ.
3.ಮೊಸರನ್ನು ಚೆನ್ನಾಗಿ ಕಲಸಿ ಇದಕ್ಕೆ ಉಪ್ಪು, ಸಕ್ಕರೆ, ಹಸಿಮೆಣಸು, ಕಾಳುಮೆಣಸಿನ ಹುಡಿಯನ್ನು ಸೇರಿಸಿ.
4.ಈಗ ಚೆನ್ನಾಗಿ ತೊಳೆಯಿರಿ ಸಣ್ಣಗೆ ಹೆಚ್ಚಿದ ಪಾಲಾಕ್ ಸೊಪ್ಪನ್ನು ಮೊಸರಿಗೆ ಮಿಶ್ರ ಮಾಡಿ.
5.30 ನಿಮಿಷಗಳ ಕಾಲ ಈ ರಾಯಿತವನ್ನು ರೆಫ್ರಿಜರೇಟ್ ಮಾಡಿ ಮತ್ತು ತಂಪಾಗಿ ಸರ್ವ್ ಮಾಡಿ.

ಆರೋಗ್ಯಯುತವಾದ ಪಾಲಾಕ್ ರಾಯಿತ ಸವಿಯಲು ಸಿದ್ಧವಾಗಿದೆ. ಬಿರಿಯಾನಿ ಅಥವಾ ಪರೋಟಾದ ಮೂಲಕ ಈ ತಂಪಾದ ರಾಯಿತವನ್ನು ಸವಿಯಿರಿ.

<center><img style="-webkit-user-select:none;border:0px;" border="0" width="100%" height="417" src="http://web.ventunotech.com/beacon/vtpixpc.gif?pid=2&pixelfrom=jp" /> <div id="vnVideoPlayerContent"></div> <script> var vtn_player_type="vp";</center>

X
Desktop Bottom Promotion