For Quick Alerts
ALLOW NOTIFICATIONS  
For Daily Alerts

ಮಧ್ಯಾಹ್ನದೂಟದ ಸವಿಯನ್ನು ಹೆಚ್ಚಿಸುವ ತೊಂಡೆಕಾಯಿ ಕಡ್ಲೆ ಪಲ್ಯ

|

ನಿಮ್ಮ ಮಧ್ಯಾಹ್ನದೂಟವನ್ನು ಅತಿ ವಿಶೇಷಗೊಳಿಸುವ ಖಾದ್ಯದೊಂದಿಗೆ ನಾವಿಂದು ಬಂದಿರುವೆವು. ಈ ಖಾದ್ಯ ನಿಮ್ಮ ನಾಲಗೆಯ ಹಸಿವನ್ನು ತೀರಿಸಿ ಇನ್ನಷ್ಟು ತಿನ್ನಬೇಕೆಂಬ ಹಂಬಲವನ್ನು ನಿಮ್ಮಲ್ಲಿ ಉಂಟು ಮಾಡುತ್ತದೆ. ಸರಳವಾಗಿ ತಯಾರಿಸಬಹುದಾದ ಈ ತೊಂಡೆಕಾಯಿ ಕಡ್ಲೆ ಪಲ್ಯ ನಿಮ್ಮಲ್ಲಿ ಆರೋಗ್ಯಕಾರಿ ಅಂಶಗಳನ್ನು ಉತ್ಪತ್ತಿ ಮಾಡುತ್ತದೆ.

ತೊಂಡೆಕಾಯಿ ಕಡಲೆ ಪಲ್ಯ ಹೆಚ್ಚಿನ ಪ್ರೋಟೀನ್ ಮತ್ತು ನ್ಯೂಟ್ರೀನ್‌ಗಳನ್ನು ಒಳಗೊಂಡು ನಿಮ್ಮಲ್ಲಿ ಆರೋಗ್ಯಕಾರಿ ಅಂಶಗಳನ್ನು ವರ್ಧಿಸುತ್ತದೆ. ನಿಮ್ಮ ಮನೆಯವರು ಮಕ್ಕಳು ಹೆಚ್ಚು ಇಷ್ಟಪಡುವ ಈ ತೊಂಡೆಕಾಯಿ ಕಡಲೆ ಪಲ್ಯ ಮಧ್ಯಾಹ್ನದೂಟಕ್ಕೆ ಮೃಷ್ಟಾನ್ನಭೋಜನವಿದ್ದಂತೆ. ಹಾಗಿದ್ದರೆ ಕೆಳಗಿನ ಸರಳ ವಿಧಾನಗಳತ್ತ ನೋಟ ಹರಿಸಿ ಅತೀ ಶೀಘ್ರವಾಗಿ ತಯಾರಿಸಬಹುದಾದ ಈ ಪಲ್ಯವನ್ನು ನಿಮ್ಮ ಮಧ್ಯಾಹ್ನದೂಟಕ್ಕೆ ತಯಾರಿಸಿಕೊಳ್ಳಿ.

ರುಚಿಯಾದ ತೊಂಡೆ ಕಾಯಿ, ಗೋಡಂಬಿ ಪಲ್ಯ

Mouthwatering Tindora Channa side dish recipe

ಪ್ರಮಾಣ: 3
*ಸಿದ್ಧತಾ ಸಮಯ: 15 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಸಲಕರಣೆಗಳು
*ಕಡಲೆ ಕಾಳು - 1 ಕಪ್
*ತೊಂಡೆಕಾಯಿ - 1/2 ಕೆಜಿ
*ಕೆಂಪು ಮೆಣಸು - 2
*ಹಸಿಮೆಣಸು - 1
*ತೆಂಗಿನ ತುರಿ - 1 ಕಪ್
*ಗರಮ್ ಮಸಾಲೆ - 1/2 ಚಮಚ
*ಅರಶಿನ - 1/2 ಚಮಚ
*ಕೊತ್ತಂಬರಿ - 1/2 ಚಮಚ
*ಜೀರಿಗೆ - 1/2 ಚಮಚ
*ಮೆಂತೆ - ಸ್ವಲ್ಪ
*ಕರಿಬೇವಿನೆಸಳು - 1/2 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 1 ಚಮಚ

ಮಾಡುವ ವಿಧಾನ
1. ಮೊದಲಿಗೆ ಕಡಲೆ ಕಾಳು (ಚನ್ನಾ) ವನ್ನು ಹಿಂದಿನ ದಿನವೇ ನೀರಿನಲ್ಲಿ ಹಾಕಿ ನೆನೆಸಿಡಿ.
2. ಮರುದಿನ ಕಡಲೆ ಕಾಳು ಮತ್ತು ತೊಂಡೆಕಾಯಿಯನ್ನು ಪ್ರಶ್ಶರ್ ಕುಕ್ಕರ್‌ನಲ್ಲಿ 1 ಕಪ್ ನೀರು ಅರಶಿನ ಹಾಕಿ 3 ವಿಶಲ್ ಬರುವವರೆಗೆ ಬೇಯಿಸಿ.
3. ನಂತರ ಬಾಣಲೆಯಲ್ಲಿ 1 ಚಮಚದಷ್ಟು ಎಣ್ಣೆ ಹಾಕಿ ಕೆಂಪು ಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆಯನ್ನು ಚೆನ್ನಾಗಿ ಹುರಿದುಕೊಳ್ಳಿ ನಂತರ ಕೊಬ್ಬರಿಯನ್ನು ತುಸು ಬೆಚ್ಚಗೆ ಮಾಡಿಕೊಳ್ಳಿ.
4. ಈ ಮಿಶ್ರಣ ಆರಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
5. ಈಗ ಕುಕ್ಕರ್‌ನಿಂದ ಕಡಲೆ ಮತ್ತು ತೊಂಡೆಕಾಯಿಯನ್ನು ಪಾತ್ರೆಗೆ ವರ್ಗಾಯಿಸಿಕೊಳ್ಳಿ ಮತ್ತು ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಬೇಯಲು ಬಿಡಿ. ಸ್ವಲ್ಪ ಸಮಯದ ನಂತರ ಮಸಾಲೆ ಮಿಶ್ರಣವನ್ನು ಈ ತರಕಾರಿ ಮಿಶ್ರಣಕ್ಕೆ ಸೇರಿಸಿ. ಸ್ವಲ್ಪ ಗರಮ್ ಮಸಾಲೆಯನ್ನು ಹಾಕಿ.
6. ಮಸಾಲೆಯು ಚೆನ್ನಾಗಿ ಬೆಂದ ನಂತರ ಅದಕ್ಕೆ ಸಾಸಿವೆ ಒಗ್ಗರಣೆಯನ್ನು ಮಾಡಿಕೊಳ್ಳಿ.
ತೊಂಡೆಕಾಯಿ ಕಡ್ಲೆ ಪಲ್ಯ ರೆಸಿಪಿ ಸವಿಯಲು ಸಿದ್ಧವಾಗಿದೆ. ಅನ್ನ ಅಥವಾ ಚಪಾತಿ ಪೂರಿಯೊಂದಿಗೆ ಸವಿಯಲು ಈ ಗ್ರೇವಿ ಹೇಳಿ ಮಾಡಿಸಿದ ಆಹಾರವಾಗಿದೆ.

English summary

Mouthwatering Tindora Channa side dish recipe

Tindora Channa dry blended with coconut and many spices. This is an authentic and traditional Mangalorean style recipe. Tindora channa and dal rice/sambar rice is a very good combination
X
Desktop Bottom Promotion