For Quick Alerts
ALLOW NOTIFICATIONS  
For Daily Alerts

ವಾವ್! ಮಾವಿನಕಾಯಿ ಗೊಜ್ಜು ರೆಸಿಪಿಯ ಟೇಸ್ಟ್ ಮಾಡಿರುವಿರಾ?

|

ಈಗ ಏನಿದ್ದರೂ ಮಾರುಕಟ್ಟೆಯಲ್ಲಿ ಮಾವಿನಕಾಯಿಗಳದೇ ಕಾರುಬಾರು. ಮಾವಿನಕಾಯಿ ಬಳಸಿ ನಾವು ಅನೇಕ ರೀತಿಯ ರೆಸಿಪಿಗಳನ್ನು ಮಾಡಬಹುದು ಅದರಲ್ಲಿ ಮಾವಿನಕಾಯಿ ಗೊಜ್ಜು ಕೂಡ ಒಂದು. ಗೊಜ್ಜು ಮಾಡಲು ಮಾವಿನಕಾಯಿ ಹುಳಿ ಇದ್ದಷ್ಟೂ ಒಳ್ಳೆಯದು.

ಚೆನ್ನಾಗಿ ಕುದಿಸಿಟ್ಟರೆ ಈ ಗೊಜ್ಜು ನಾಲ್ಕೈದು ದಿನಗಳವರೆಗೂ ಚೆನ್ನಾಗಿರುತ್ತದೆ. ಇದಕ್ಕೆ ಫ್ರೆಶ್ ಮಾವಿನಕಾಯಿಯೇ ಬೇಕೆಂದಿಲ್ಲ, ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿಯಿಂದಲೂ ಈ ಗೊಜ್ಜನ್ನು ತಯಾರಿಸಬಹುದು. ಇದು ಅನ್ನದೊಡನೆ ಒಳ್ಳೆಯ ಕಾಂಬಿನೇಶನ್.

Mouthwatering Mango gojju recipe

ಈ ಬದನೆಕಾಯಿ ಗೊಜ್ಜು ಖಾರ ಪ್ರಿಯರಿಗೆ ಮಾತ್ರ

ಸಿದ್ದ ಪಡಿಸಲು ಬೇಕಾಗುವ ಸಮಯ: 40 ನಿಮಿಷಗಳು

ಬೇಕಾಗುವ ಸಾಮಗ್ರಿಗಳು:
*ಚೆನ್ನಾಗಿ ಹುಳಿ ಇರುವ ಮಾವಿನಕಾಯಿ - 1 ದೊಡ್ಡದು
*ಒಣಮೆಣಸು - 2
*ಹಸಿಮೆಣಸು - 6 (ಖಾರಕ್ಕೆ ತಕ್ಕಂತೆ)
*ಉದ್ದಿನಬೇಳೆ - 1 / 2 ಚಮಚ
*ಸಾಸಿವೆ - 1 / 2 ಚಮಚ
*ಇಂಗು
*ಕರಿಬೇವು
*ಚಿಟಿಕೆ ಅರಿಶಿನ
*ಸಕ್ಕರೆ - 1 / 2 ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ಬೆಳ್ಳುಳ್ಳಿ 8 - 10 ಎಸಳು (ಜಜ್ಜಿದ್ದು)
*ಎಣ್ಣೆ - 3 ಚಮಚ

ಈರುಳ್ಳಿ, ಹುಣಸೆಹಣ್ಣಿನ ಬೊಂಬಾಟ್ ಗೊಜ್ಜು

ಮಾಡುವ ವಿಧಾನ:
1.ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಮಾವಿನಕಾಯಿಯನ್ನು ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.
2.ಬೆಂದ ನಂತರ ಮಾವಿನಕಾಯಿಯನ್ನು ನೀರಿನಿಂದ ತೆಗೆದು ತಣ್ಣಗಾಗಲು ಬಿಡಿ.
3.ಮಾವಿನಕಾಯಿಯ ಪಲ್ಪ್ ತೆಗೆದು, ಸಿಪ್ಪೆ ಮತ್ತು ಓಟೆಯನ್ನು ಎಸೆದುಬಿಡಿ. ಪಲ್ಪ್ ತೆಗೆಯುವಾಗ ಬೇಕಿದ್ದರೆ ಸ್ವಲ್ಪ ನೀರನ್ನೂ ಸೇರಿಸಬಹುದು.
4.ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಕಾದ ನಂತರ ಉದ್ದಿನಬೇಳೆ, ಒಣಮೆಣಸಿನ ಚೂರುಗಳು, ಸಾಸಿವೆ, ಇಂಗು, ಅರಿಶಿನ ಸೇರಿಸಿ ಚಟಗುಟ್ಟಿದ ನಂತರ ಕರಿಬೇವು, ಹಸಿಮೆಣಸಿನ ಚೂರುಗಳನ್ನು ಸೇರಿಸಿ.
5.ಇದಕ್ಕೆ ಜಜ್ಜಿದ ಬೆಳ್ಳುಳ್ಳಿಯನ್ನು ಸೇರಿಸಿ ಹಸಿ ವಾಸನೆ ಹೋಗುವಂತೆ ಹುರಿಯಿರಿ.
6.ನಂತರ ಇದಕ್ಕೆ ಮಾವಿನ ಪಲ್ಪ್, ಉಪ್ಪು ಮತ್ತು ಸಕ್ಕರೆ ಸೇರಿಸಿ ಕುದಿಯಲಿಡಿ. ಮಿಶ್ರಣ ತುಂಬ ಗಟ್ಟಿ ಎನಿಸಿದರೆ ಸ್ವಲ್ಪ ನೀರು ಸೇರಿಸಿಕೊಳ್ಳಿ.
7.ಗೊಜ್ಜು 8 - 10 ನಿಮಿಷ ಚೆನ್ನಾಗಿ ಕುದಿದ ನಂತರ ಉರಿಯಿಂದ ಇಳಿಸಿ. ತಣ್ಣಗಾದನಂತರ ಗಾಳಿಯಾಡದ ಬಾಟಲ್‌ನಲ್ಲಿ ತುಂಬಿಸಿಡಿ.
8.ಹುಳಿ, ಖಾರ ಹದವಾಗಿರುವ ಈ ಗೊಜ್ಜು ಊಟಕ್ಕೆ ಹಾಕಿಕೊಳ್ಳಲು ಹಿತವಾಗಿರುತ್ತದೆ. ಚೆನ್ನಾಗಿ ಕುದಿಸಿಕೊಂಡರೆ 4 - 5 ದಿನವಾದರೂ ಹಾಳಾಗುವುದಿಲ್ಲ.

Story first published: Wednesday, May 21, 2014, 13:05 [IST]
X
Desktop Bottom Promotion