For Quick Alerts
ALLOW NOTIFICATIONS  
For Daily Alerts

ಅಸದಳ ರುಚಿಯನ್ನು ನೀಡುವ ಪನ್ನೀರ್-ರಾಜ್ಮಾ ಕರಿ ರೆಸಿಪಿ

|

ಪನ್ನೀರ್ ಮತ್ತು ರಾಜ್ಮ ಎರಡೂ ಉತ್ತರ ಭಾರತದ ಪದಾರ್ಥಗಳಾಗಿ ಜನರಿಗೆ ಪರಿಚಿತವಾಗಿವೆ. ಇವುಗಳ ಹೆಸರು ಹೇಳಿದರೆ ಸಾಕು, ಜನರಿಗೆ ಬಾಯಿಯಲ್ಲಿ ನೀರೂರುತ್ತದೆ. ಅವುಗಳ ರುಚಿಯೇ ಹಾಗೆ. ಹಾಗಾಗಿ ಇವುಗಳ ಸಹಾಯದಿಂದ ಒಂದು ತಿಂಡಿಯನ್ನು ಮಾಡಿದರೆ ಅವುಗಳ ರುಚಿಯನ್ನು ನೀವೇ ಊಹಿಸಬಹುದು. ಇದರ ರುಚಿಯು ನಿಮ್ಮ ರುಚಿಗ್ರಂಥಿಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ಇದನ್ನು ತಯಾರಿಸಲು ನೀವು ರಾಜ್ಮಾವನ್ನು ಕನಿಷ್ಠ 4 ಗಂಟೆಗಳ ಕಾಲ ನೆನೆಸಬೇಕು. ಆಗ ರಾಜ್ಮಾವನ್ನು ಬೇಯಿಸಿದಾಗ ಅದು ಮೆತ್ತಗಾಗಲು ಇದು ಅತ್ಯಾವಶ್ಯಕ.

ರಾಜ್ಮಾವನ್ನು ಬೇಯಿಸುವಾಗ ಸ್ವಲ್ಪ ಉಪ್ಪು ಮತ್ತು ಮೆಣಸಿನಕಾಯಿಯನ್ನು ಹಾಕಿ. ಇದರಿಂದ ಅದರ ರುಚಿ ದ್ವಿಗುಣವಾಗುತ್ತದೆ. ಮತ್ತೊಂದು ವಿಶೇಷವೆಂದರೆ, ಈ ಪದಾರ್ಥಗಳು ನಿಮ್ಮ ಅಡುಗೆ ಮನೆಯಲ್ಲಿಯೇ ದೊರೆಯುತ್ತವೆ. ಇದಕ್ಕೆ ಬಳಸುವ ಕೆಲವೊಂದು ಮಸಾಲೆಗಳು ನಿಮ್ಮ ಬಾಯಿಯಲ್ಲಿ ನೀರೂರುವಂತೆ ಮಾಡುತ್ತವೆ. ಬನ್ನಿ ಈ ಮಧ್ಯಾಹ್ನ ಈ ರಾಜ್ಮಾ ಕರಿಯನ್ನು ಮಾಡುವ ಬಗೆಯನ್ನು ತಿಳಿದುಕೊಂಡು ಬರೋಣ.

ನಾಲ್ಕು ಜನರಿಗೆ ಬಡಿಸಬಹುದು
ತಯಾರಿಕೆಗೆ ತಗುಲುವ ಸಮಯ: 19 ನಿಮಿಷಗಳು
ಅಡುಗೆಗೆ ತಗುಲುವ ಸಮಯ : 40 ನಿಮಿಷಗಳು

Mouth Watering: Paneer and Rajma Curry Recipe

ರಾಜ್ಮಾ ಮಖಾನಿ ಗ್ರೇವಿ-ಪಂಜಾಬಿ ಶೈಲಿಯ ಅಡುಗೆ

ಅಗತ್ಯವಾದ ಪದಾರ್ಥಗಳು
*ರಾಜ್ಮಾ - 1 1/2 ಕಪ್
*ಪನ್ನೀರ್ - 150 ಗ್ರಾಂ
*ಈರುಳ್ಳಿ - 2 (ಕತ್ತರಿಸಿದಂತಹುದು)
*ಟೊಮೇಟೊ - 2 (ಕತ್ತರಿಸಿದಂತಹುದು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಟೀ.ಚಮಚ
*ಅರಿಶಿನ ಪುಡಿ- 1/2 ಟೀ.ಚಮಚ
*ಖಾರದ ಪುಡಿ - 1/2 ಟೀ.ಚಮಚ
ಧನಿಯಾ ಪುಡಿ - 1 ಟೀ.ಚಮಚ
*ಜೀರಿಗೆ - 1/2 ಟೀ.ಚಮಚ
*ಗರಂ ಮಸಾಲ - 1/4 ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ಎಣ್ಣೆ - 3 ಟೀ.ಚಮಚ

ನಿಮ್ಮ ಬಾಯಿ ರುಚಿಯನ್ನು ಹೆಚ್ಚಿಸಲಿರುವ ಪನ್ನೀರ್ ರೆಸಿಪಿ!

ತಯಾರಿಸುವ ವಿಧಾನ
*ರಾಜ್ಮಾವನ್ನು ಬೇಯಿಸಿದ ನಂತರ, ಅದರ ನೀರನ್ನು ಪಕ್ಕದಲ್ಲಿಟ್ಟುಕೊಳ್ಳಿ. ಈ ನೀರನ್ನು ನೀವು ರಾಜ್ಮಾವನ್ನು ಬಾಣಲೆಯಲ್ಲಿ ಬೇಯಿಸಲು ಬಳಸಬೇಕಾಗುತ್ತದೆ. ಇನ್ನು ಟೊಮೇಟೊ ಮತ್ತು ಈರುಳ್ಳಿಗಳನ್ನು ಪ್ರತ್ಯೇಕವಾಗಿ ರುಬ್ಬಿಕೊಂಡು ಪಕ್ಕದಲ್ಲಿಟ್ಟುಕೊಳ್ಳಿ.
*ಈಗ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿಕೊಳ್ಳಿ, ಅದಕ್ಕೆ ಜೀರಿಗೆಯನ್ನು ಹಾಕಿ. ಅದು ಚಿಟ ಪಟ ಎಂದು ಸದ್ದು ಮಾಡಿದ ಮೇಲೆ, ಈರುಳ್ಳಿ ಪೇಸ್ಟ್ ಹಾಕಿ.ಈ ಪದಾರ್ಥಗಳನ್ನು 2 ನಿಮಿಷಗಳ ಕಾಲ ಹುರಿದುಕೊಳ್ಳಿ.
*ಈಗ ಇದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟನ್ನು ಹಾಕಿ. ಇದು ಹೊಂಬಣ್ಣಕ್ಕೆ ತಿರುಗುವವರೆಗು ಕಾಯಿರಿ.
*ತದನಂತರ ಇದಕ್ಕೆ ರುಬ್ಬಿದ ಟೊಮೇಟೊ, ಅರಿಶಿನ ಪುಡಿ ಮತ್ತು ಮೆಣಸಿನಕಾಯಿ ಪುಡಿಯನ್ನು ಹಾಕಿ. ಇದನ್ನು ಚೆನ್ನಾಗಿ ಕಲೆಸಿಕೊಡಿ. ನಂತರ ಇದರ ಮೇಲೆ ಕೊತ್ತೊಂಬರಿ ಪುಡಿಯನ್ನು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.
*ಈ ಪದಾರ್ಥಗಳನ್ನು ನೀವು ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸಿಕೊಳ್ಳಬೇಕು ಮತ್ತು ಎಣ್ಣೆಯು ಪಕ್ಕದಲ್ಲಿ ಕಾಣಿಸಿಕೊಳ್ಳುವವರೆಗು ಕಾಯಿರಿ. ಇದಾದ ಮೇಲೆ ಇದಕ್ಕೆ ಪನ್ನೀರ್ ಬೆರೆಸಿ ಮತ್ತೆ 5 ನಿಮಿಷಗಳ ಕಾಲ ಬೇಯಿಸಿ.
*ಇನ್ನು ನಿಮಗೆ ಅಗತ್ಯವಾದರೆ ರಾಜ್ಮಾ ನೀರನ್ನು ಹಾಕಿ. ಅಲ್ಲದೆ ಬಾಣಲೆಯಲ್ಲಿರುವ ಖಾದ್ಯಕ್ಕೆ ಗರಂ ಮಸಾಲ ಹಾಗು ರಾಜ್ಮಾವನ್ನು ಸಹ ಹಾಕಬಹುದು. ಮಧ್ಯಮ ಗಾತ್ರದ ಉರಿಯಲ್ಲಿ ಈ ಪದಾರ್ಥಗಳು ಸರಿಯಾಗಿ ಬೇಯಲು ಬಿಡಿ. 10 ನಿಮಿಷಗಳವರೆಗು ಇದನ್ನು ಹೀಗೆಯೇ ಬಿಡಿ ಮತ್ತು ನಂತರ ಹುರಿಯನ್ನು ಆರಿಸಿ.

ಪೋಷಕಾಂಶದ ಸಲಹೆ
ಈ ಎರಡೂ ಪದಾರ್ಥಗಳಲ್ಲಿ ಪ್ರೋಟೀನ್ ಹೆಚ್ಚಾಗಿರುತ್ತದೆ. ಪನೀರ್ ಸಹ ಅಧಿಕ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಹಾಗಾಗಿ ಇದು ಹಲ್ಲು ಮತ್ತು ಮೂಳೆಗಳಿಗೆ ಹೆಚ್ಚಿಗೆ ಸಹಾಯ ಮಾಡುತ್ತದೆ.

ಸಲಹೆ
ರಾಜ್ಮಾಗಳು ಚೆನ್ನಾಗಿ ಬೆಂದಿವೆ ಮತ್ತು ಮೆದುವಾಗಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಒಂದು ವೇಳೆ ಇದು ಮೃದುವಾಗಿಲ್ಲವೆಂದಾದಲ್ಲಿ, ಇದನ್ನು ಮತ್ತೆ 12 ನಿಮಿಷಗಳ ಕಾಲ ಪ್ರೆಷರ್ ಕುಕ್‍ನಲ್ಲಿಟ್ಟು ಬೇಯಿಸಿ.

English summary

Mouth Watering: Paneer and Rajma Curry Recipe

Paneer & rajma are two well-known ingredients in North India. By itself these ingredients are extremely yummy, so can you imagine when we mix these two delights into one, the taste will be exuberant.Take a look at this afternoon paneer and rajma curry recipe. It is going to be a happy day at the dining table.
X
Desktop Bottom Promotion