For Quick Alerts
ALLOW NOTIFICATIONS  
For Daily Alerts

ನಾಲಿಗೆಯ ರುಚಿ ತಣಿಸುವ ಪಾಲಕ್ ರೆಸಿಪಿ!

|

ದಿನಾ ಒಂದೇ ತರಹದ ರುಚಿ ತಿಂದು ತಿಂದು ನಾಲಗೆ ಕೆಟ್ಟವರಿಗೆ ಇಲ್ಲೊಂದು ಡಿಫರೆಂಟ್ ಐಟೆಮ್ ರೆಡಿ ಇದೆ! ರುಚಿಯಾಗಿರೋದರ ಜೊತೆ ಆರೋಗ್ಯವೂ ಚೆನ್ನಾಗಿರುತ್ತೆ ಅಂದ್ರೆ ಯಾರಿಗೆ ಇಷ್ಟ ಆಗೊಲ್ಲ ಹೇಳಿ? ಈಗ ಜನರು ಆರೋಗ್ಯವಂತ ಆಹಾರದ ಕಡೆಗೆ ತಮ್ಮ ಗಮನವನ್ನು ಹರಿಸುತ್ತಿದ್ದಾರೆ. ಪೋಷಕಾಂಶ ಭರಿತ ಆಹಾರ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿ ನಮ್ಮ ದೈಹಿಕ ಚಟುವಟಿಕೆಗೆ ಶಕ್ತಿಯನ್ನು ನೀಡುತ್ತದೆ.

ಇಂದಿನ ಲೇಖನದಲ್ಲಿ ಒಂದು ಆರೋಗ್ಯಯುತ ಆಹಾರ ಪದ್ಧತಿಯನ್ನು ನಾವು ನಿಮಗಿಲ್ಲಿ ನೀಡಿದ್ದು ಅವು ನಿಜವಾಗಿಯೂ ನಿಮ್ಮ ಆರೋಗ್ಯಕ್ಕೆ ಫಲಪ್ರದವಾಗಿದೆ. ಹೌದು, ಇಂದು ಬೋಲ್ಡ್ ಸ್ಕೈ ನಿಮಗಾಗಿ ಸುಲಭದಲ್ಲೇ ತಯಾರಿಸಬಹುದಾದ ಪಾಲಕ್ ಸೊಪ್ಪಿನ ಪಲ್ಯ ಮಾಡುವ ವಿಧಾನವನ್ನು ಈ ಕೆಳಗೆ ನೀಡಿದೆ, ಹಾಗಾದರೆ ಇನ್ನೇಕೆ ತಡ? ಬನ್ನಿ ಪಾಲಕ್ ಸೊಪ್ಪಿನ ಪಲ್ಯ ಮಾಡುವ ವಿಧಾನವನ್ನು ಪ್ರಯತ್ನಿಸಿ.

ಸರಳವಾಗಿ ಮಾಡಬಹುದಾದ ಕ್ರಿಸ್ಪಿ ಹಪ್ಪಳದ ರೆಸಿಪಿ!

Mouth watering Palak side dish recipe

ಬೇಕಾಗುವ ಸಾಮಗ್ರಿಗಳು:
*ಪಾಲಕ ಸೊಪ್ಪು ಒಂದು ಅಥವಾ ಎರಡು ಕಟ್ಟು,
*ಈರುಳ್ಳಿ - 1 (ಕತ್ತರಿಸಿಕೊಳ್ಳಿ)
*ಟೊಮೆಟೊ- 1 (ಕತ್ತರಿಸಿಕೊಳ್ಳಿ)
*ಹಸಿಮೆಣಸಿನಕಾಯಿ - 1 (ಕತ್ತರಿಸಲಾಗಿರುವ)
*ರಸಂ ಪುಡಿ - ಸ್ವಲ್ಪ
*ರುಚಿಗೆ ತಕ್ಕಷ್ಟು ಉಪ್ಪು
*ಎಣ್ಣೆ- ಸ್ವಲ್ಪ
*ಜೀರಿಗೆ - 1 ಸ್ಪೂನ್
*ಸಾಸಿವೆ- 1 ಸ್ಪೂನ್ (ಒಗ್ಗರಣೆಗೆ)
*ಕೊತ್ತೊಂಬರಿ ಸೊಪ್ಪು- ಸ್ವಲ್ಪ (ಕತ್ತರಿಸಲಾಗಿರುವ)

ಮಕ್ಕಳ ವಿಶೇಷ ರೆಸಿಪಿ ಆಲೂ ಪೂರಿ!

ಮಾಡುವ ವಿಧಾನ:
1.ಪಾಲಕ್ ಚೆನ್ನಾಗಿ ಶುಚಿಗೊಳಿಸಿ,ತೊಳೆದು ನಂತರ ಸಣ್ಣಗೆ ಹೆಚ್ಚಿಕೊಳ್ಳಿ

2 ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಜೀರಿಗೆ, ಸಾಸಿವೆ ಹಾಕಿ, ಇನ್ನು ಕತ್ತರಿಸಲಾಗಿರುವ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ

3. ತದನಂತರ ಕತ್ತರಿಸಲಾಗಿರುವ ಟೊಮೆಟೊವನ್ನು ಹಾಕಿ, 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ, ಇನ್ನು ಪಾಲಕ್ ಸೊಪ್ಪು ಹಾಕಿ ಚೆನ್ನಾಗಿ ಅದರಲ್ಲಿಯೇ ಬೆರೆಸಿ,

4. ಇನ್ನು ರುಚಿಗೆ ತಕ್ಕಷ್ಟು ಉಪ್ಪು, ಕತ್ತರಿಸಿರುವ ಹಸಿಮೆಣಸಿನಕಾಯಿ ಮತ್ತು ರಸಂ ಪುಡಿಯನ್ನು ಹಾಕಿ, ನಂತರ ಅರ್ಧ ಗ್ಲಾಸ್ ನೀರು ಹಾಕಿ 5 ನಿಮಿಷ ಮುಚ್ಚಿಡಿ, ಬಾಣಲೆಗೆ ಪಾತ್ರೆಯಿಂದ ಮುಚ್ಚಿದಾಗ, ಅದು ಆವಿಯಲ್ಲಿಯೇ ಬೇಯುತ್ತದೆ.

5. ನಂತರ ಕತ್ತರಿಸಲಾಗಿರುವ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ, ರುಚಿ ರುಚಿಯಾದ ಪಾಲಕ್ ಸೊಪ್ಪಿನ ಪಲ್ಯ ಸವಿಯಲು ರೆಡಿ

English summary

Mouth watering Palak side dish recipe

Palak is considered as a superfood that has many health and nutritional benefits. Spinach has dietary fiber that aids digestion.
X
Desktop Bottom Promotion