For Quick Alerts
ALLOW NOTIFICATIONS  
For Daily Alerts

ತೆಂಗಿನ ಹಾಲಿನಲ್ಲಿ ಮಾಡುವ ಅಲಸಂದೆ ಪಲ್ಯ!

|
Moth Bean Palya Recipe
ಕಾಳಿನ ಪಲ್ಯ ಮಾಡಿದರೆ ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಇವತ್ತು ನಾವು ಅಲಸಂದೆ (ಅಲಸಂಡೆ) ಪಲ್ಯ ಮಾಡುವ ವಿಧಾನ ತಿಳಿಯೋಣ.

ಈ ಪಲ್ಯವನ್ನು ಮೊಳಕೆ ಬರಿಸಿದ ಅಲಸಂದೆ ಹಾಕಿ ತಯಾರಿಸಿದರೆ ತುಂಬಾ ರುಚಿಕರವಾಗಿರುತ್ತದೆ. ಸಾಮಾನ್ಯವಾಗಿ ಪಲ್ಯಗಳಿಗೆ ತುರಿದ ತೆಂಗಿನ ಕಾಯಿ ಹಾಕಿ ತಯಾರಿಸುತ್ತೇವೆ, ಆದರೆ ಈ ಪಲ್ಯವನ್ನು ತೆಂಗಿನ ಹಾಲಿನಲ್ಲಿ ತಯಾರಿಸುವುದರಿಂದ ಪಲ್ಯ ಮತ್ತಷ್ಟು ರುಚಿಕರವಾಗಿರುತ್ತದೆ. ಈ ಅಲಸಂದೆ ಪಲ್ಯ ಮಾಡುವ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಮೊಳಕೆ ಬರಿಸಿದ ಅಲಸಂದೆ 250 ಗ್ರಾಂ
* 2 ಚಮಚ ಬೆಣ್ಣೆ
* 2 ಚಿಕ್ಕ ಗಾತ್ರದ ಈರುಳ್ಳಿ (ಕತ್ತರಿಸಿದ್ದು)
* ಕತ್ತರಿಸಿದ ಟೊಮೆಟೊ 1
* 2 ಚಮಚ ಶುಂಠಿ ಪೇಸ್ಟ್
* 1 ಚಮಚ ಬೆಳ್ಳುಳ್ಳಿ ಪೇಸ್ಟ್
* ಒಂದೂವರೆ ಚಮಚ ಹಸಿ ಮೆಣಸಿನ ಕಾಯಿ ಪೇಸ್ಟ್
* ಅರ್ಧ ಕಪ್ ತೆಂಗಿನ ಹಾಲು
* 1/4 ಚಮಚ ಅರಿಶಿಣ
* ಒಂದೂವರೆ ಚಮಚ ಪುಡಿ ಉಪ್ಪು
* 2 ಚಮಚದಷ್ಟು ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

1. ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಕತ್ತರಿಸಿ ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಬೇಕು.

2. ನಂತರ ಶುಂಠಿ, ಹಸಿಮೆಣಸಿನ ಕಾಯಿ, ಬೆಳ್ಳುಳ್ಳಿ ಇವುಗಳ ಪೇಸ್ಟ್ ಹಾಕಿ 2 ನಿಮಿಷ ಬಿಸಿ ಮಾಡಬೇಕು.

3. ಈಗ ಅಲಸಂದೆಯನ್ನು ಸೇರಿಸಿ, 3-4 ನಿಮಿಷ ಹುರಿಯಬೇಕು. ನಂತರ ಟೊಮೆಟೊ, ಉಪ್ಪು ಮತ್ತು ಅರಿಶಿಣ ಪುಡಿ ಹಾಕಿ , ಟೊಮೆಟೊ ಮೆತ್ತಗಾಗುವವರೆಗೆ ಹುರಿದು, ನಂತರ ತೆಂಗಿನ ಹಾಲನ್ನು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಅಲಸಂದೆಯನ್ನು ಬೇಯಿಸಬೇಕು.

4. ಅಲಸಂದೆ ಬೆಂದ ನಂತರ ಅದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬೇಕು.

ಇದನ್ನು ಅನ್ನ ಅಥವಾ ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

English summary

Moth Bean Palya Recipe | Variey Of Palya Recipe | ಅಲಸಂದೆ ಪಲ್ಯ ರೆಸಿಪಿ | ಅನೇಕ ಬಗೆಯ ಪಲ್ಯ ರೆಸಿಪಿ

Usually we use grated coconut for palya. But in this moth bean palya we used coconut milk. So this palya taste will be different. If you want to prepare here is a recipe.
X
Desktop Bottom Promotion