For Quick Alerts
ALLOW NOTIFICATIONS  
For Daily Alerts

ಮಟರ್ ಪನ್ನೀರ್ ಡ್ರೈ-ಸೈಡ್ ಡಿಶ್

|

ಬಟಾಣಿ ಮತ್ತು ಪನ್ನೀರ್ ಬೆಸ್ಟ್ ಕಾಂಬಿನೇಷನ್. ಇವೆರಡ ಸೇರಿಸಿ ಅಡುಗೆ ಮಾಡಿದ ಯಾವುದೇ ಬಗೆಯ ಅಡುಗೆಯಾಗಿರಲಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಮಟರ್ ಪನ್ನೀರ್ ದೋಸೆ, ಮಟರ್ ಪನ್ನೀರ್ ಗ್ರೇವಿ, ಸಾರು, ಡ್ರೈ ಹೀಗೆ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು.

ಇವತ್ತು ನಾವು ಮಟರ್ ಪನ್ನೀರ್ ಡ್ರೈ ಮಾಡುವುದು ಹೇಗೆ ಎಂದು ತಿಳಿಯೋಣ:

Matar Paneer Dry: Side Dish Recipe

ಬೇಕಾಗುವ ಸಾಮಾಗ್ರಿಗಳು
ಪನ್ನೀರ್ ಕ್ಯೂಬ್ಸ್ 1 ಕಪ್
ಬಟಾಣಿ 1 ಕಪ್ಈರುಳ್ಳಿ 2
ಟೊಮೆಟೊ 1
ತೆಂಗಿನ ಕಾಯಿ ಹಾಲು ಅರ್ಧ ಕಪ್
ಶುಂಠಿ , ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
ಗರಂ ಮಸಾಲ ಅರ್ಧ ಚಮಚ
ಅರಿಶಿಣ ಪುಡಿ
ಕೊತ್ತಂಬರಿ ಪುಡಿ ಅರ್ಧ ಚಮಚ
ಜೀರಿಗೆ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ನೀರು ಅರ್ಧ ಕಪ್
ಎಣ್ಣೆ
ಕರಿಬೇವಿನ ಎಲೆ

ತಯಾರಿಸುವ ವಿಧಾನ:

* ಬಟಾಣಿಯನ್ನು ಕುಕ್ಕರ್ ನಲ್ಲಿ ಹಾಕಿ ಬೇಯಿಸಿಡಿ.

* ಈಗ ಪಾತ್ರೆಯನ್ನು ಬಿಸಿ ಮಾಡಿ 4 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ನಂತರ ಕರಿಬೇವಿನ ಎಲೆ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ .

* ಪನ್ನೀರ್ ಕ್ಯೂಬ್ ಹಾಕಿ ಅದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಬೇಯಿಸಿ ಬಟಾಣಿ ಹಾಕಿ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ, ಕೊತ್ತಂಬರಿ ಪುಡಿ ಹಾಕಿ ತೆಂಗಿನ ಕಾಯಿ ಹಾಲು ಸುರಿದು, ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿ.

* ಮಿಶ್ರಣ ಸ್ವಲ್ಪ ಗ್ರೇವಿ ರೀತಿಯಲ್ಲಿ ಬೇಕಾದರೆ ಮಾಡಬಹುದು ಅಥವಾ ಇನ್ನೂ ಸ್ವಲ್ಪ ಹೊತ್ತು ಬೇಯಿಸಿದರೆ ಪನ್ನೀರ್ ಡ್ರೈ ರೆಡಿ.

English summary

Matar Paneer Dry: Side Dish Recipe | Variety Of Paneer Recipe | ಮಟರ್ ಪನ್ನೀರ್ ಡ್ರೈ ರೆಸಿಪಿ | ಅನೇಕ ಬಗೆಯ ಪನ್ನೀರ್ ರೆಸಿಪಿ

Matar paneer dry is another side dish recipe for the main course. Every time you do not want to prepare the rich and spicy matar paneer. So, this is a healthy alternative. Moreover, matar paneer dry is easy to make and requires less ingredients. Check out the recipe to make matar paneer dry.
X
Desktop Bottom Promotion