For Quick Alerts
ALLOW NOTIFICATIONS  
For Daily Alerts

ರುಚಿಯನ್ನು ಮಸ್ತಾಗಿಸುವ ಮಸಾಲಾ ಹಲಸು ರೆಸಿಪಿ!

|

ನಿಮಗೆಲ್ಲಾ ತಿಳಿದಿರುವಂತೆ ಹಲಸಿನ ಕಾಯಿ (ಗುಜ್ಜೆ) ಯ ಸೀಸನ್ ಈಗ. ನಿಮ್ಮಲ್ಲಿ ಹಲವರಿಗಂತೂ ಗುಜ್ಜೆ (ಹಲಸು) ಎಂದರೆ ವಿಶೇಷ ಅಕ್ಕರೆ ಎಂಬುದು ನಮಗೆ ತಿಳಿದಿದೆ. ನಿಮ್ಮಲ್ಲಿ ಯಾರಿಗೆ ಈ ತರಕಾರಿಯ ಬಗ್ಗೆ ತಿಳಿದಿಲ್ಲ ಅವರಿಗೆ ತಿಳಿಸುವ ಆಸೆ ನಮ್ಮದಾಗಿದೆ.

ಈ ತರಕಾರಿಯಿಂದ ತಯಾರಿಸಲಾಗುವ ಮಸಾಲಾ ರೆಸಿಪಿಯನ್ನು ನಿಮಗೆ ಉಣಬಡಿಸಿ ನಿಮ್ಮಿಂದ ಭೇಶ್ ಹೇಳಿಸಿಕೊಳ್ಳುವ ತುಡಿತ ನಮ್ಮದು. ಹಲಸನ್ನು ಹಿಂದಿಯಲ್ಲಿ 'ಕತಾಲ್' ಎಂದು ಕರೆಯುತ್ತಾರೆ. ಈ ಮಸಲಾ ಕತಾಲ್ ರೆಸಿಪಿಯನ್ನು ಸುವಾಸಿತ ಮತ್ತು ಬಾಯಿ ರುಚಿಯನ್ನು ಮಸ್ತಾಗಿಸುವ ಸಾಂಬಾರು ಪದಾರ್ಥಗಳಿಂದ ತಯಾರಿಸಲಾಗುತ್ತದೆ.

ರುಚಿ ಹೆಚ್ಚಿಸುವುದಲ್ಲದೆ ಹಲಸು ಒಂದು ಆರೋಗ್ಯಪೂರ್ಣ ತರಕಾರಿಯಾಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಿ ಅಂಶಗಳಿದ್ದು ನಿಮ್ಮ ದೃಷ್ಟಿಯನ್ನು ಸುಧಾರಿಸುವ ಸಾಮರ್ಥ್ಯ ಹಲಸಿನಲ್ಲಿ ಅಡಗಿದೆ. ಹಾಗಿದ್ದರೆ ಇನ್ನೇಕೆ ತಡ, ಈ ರುಚಿಕರ ಮಸಾಲಾ ಕತಾಲ್ ರೆಸಿಪಿಯ ತಯಾರಿಯನ್ನು ಕಲಿತುಕೊಳ್ಳಿ ಮತ್ತು ಮನೆಮಂದಿಗೆಲ್ಲಾ ಉಣಬಡಿಸಿ ಸೈ ಎನ್ನಿಸಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯುಗಾದಿ ಸ್ಪೆಶಲ್ ಮಸಾಲಾ ಗರೇಲು ರೆಸಿಪಿ!

Masaledar Kathal/Jackfruit Curry Recipe

ಪ್ರಮಾಣ: 3
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು:
(ಗುಜ್ಜೆ) ಎಳೆ ಹಲಸಿನ ಕಾಯಿ - 250 ಗ್ರಾಮ್ (ತುಂಡರಿಸಿದ್ದು)
ಈರುಳ್ಳಿ - 2 (ಕತ್ತರಿಸಿದ್ದು)
ಟೊಮೇಟೋ - 2 (ಕತ್ತರಿಸಿದ್ದು)
ಶುಂಠಿ - ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್
ಜೀರಿಗೆ ಹುಡಿ - 1 ಸ್ಪೂನ್
ಮೆಣಸಿನ ಹುಡಿ - 1 ಸ್ಪೂನ್
ಡ್ರೈ ಮ್ಯಾಂಗೋ ಪೌಡರ್ - 1 ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಗರಂ ಮಸಾಲಾ ಪೌಡರ್ - 1/2 ಸ್ಪೂನ್
ಎಣ್ಣೆ - 1 ಸ್ಪೂನ್
ಎಣ್ಣೆ - ಕರಿಯಲು
ಕರಿಬೇವಿನೆಲೆ - 2 ಸ್ಫೂನ್ (ಕತ್ತರಿಸಿದ್ದು)

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ರುಚಿಯಾದ ಮಸಾಲೆ ಆಲೂ ರೆಸಿಪಿ

ಮಾಡುವ ವಿಧಾನ:
1. ಹಲಸಿನ ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಉಪ್ಪು ಮತ್ತು ಹುಳಿಯಲ್ಲಿ ಹಲಸಿನ ತುಂಡುಗಳನ್ನು ಮುಳುಗಿಸಿಡಿ.

2.ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಮಧ್ಯಮ ಉರಿಯಲ್ಲಿ ಹಲಸಿನ ತುಂಡುಗಳನ್ನು 5-6 ನಿಮಿಷಗಳ ಕಾಲ ಫ್ರೈ ಮಾಡಿ.

3.ಹಲಸು ಚೆನ್ನಾಗಿ ಬೆಂದ ನಂತರ, ಅದನ್ನು ಪ್ಲೇಟ್‌ಗೆ ವರ್ಗಾಯಿಸಿ.

4.ಪ್ಯಾನ್‌ನಲ್ಲಿ ಎಣ್ಣೆ ಬೆಚ್ಚಗೆ ಮಾಡಿ ಮತ್ತು ಅದಕ್ಕೆ ಈರುಳ್ಳಿ ಹಾಕಿ. ಈರುಳ್ಳಿಯನ್ನು 3-4 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹುರಿಯಿರಿ.

5.ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಫ್ರೈ ಮಾಡಿ.

6.ಟೊಮೇಟೋ, ಉಪ್ಪು, ಅರಶಿನ ಹುಡಿ, ಮೆಣಸಿನ ಹುಡಿ, ಜೀರಿಗೆ ಹುಡಿ, ಡ್ರೈ ಮ್ಯಾಂಗೋ ಪೌಡರ್ ಸೇರಿಸಿ ಮತ್ತು 3-4 ನಿಮಿಷಗಳ ಕಾಲ ಬೇಯಿಸಿ.

7.ಮಸಾಲಾ ಚೆನ್ನಾಗಿ ಬೆಂದ ನಂತರ, ಹುರಿದ ಹಲಸಿನ ತುಂಡುಗಳನ್ನು ಸೇರಿಸಿ ಹಾಗೂ ಗರಂ ಮಸಾಲಾ ಹುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.

8.ಸ್ವಲ್ಪ ನೀರು ಹಾಕಿ ಮತ್ತು ಮಧ್ಯಮ ಉರಿಯಲ್ಲಿ ಹಲಸು 5-7 ನಿಮಿಷಗಳ ಕಾಲ ಬೇಯಲಿ.

9. ಎಲ್ಲಾ ಪೂರ್ಣಗೊಂಡ ನಂತರ, ಗ್ಯಾಸ್ ಆಫ್ ಮಾಡಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಕರಿಯನ್ನು ಅಲಂಕರಿಸಿ.

ಖಾರ ಹುಳಿ ಮಿಶ್ರಿತ ಮಸಾಲಾ ಕತಾಲ್ ಕರಿ ಸವಿಯಲು ಸಿದ್ಧವಾಗಿದೆ. ಅನ್ನ ಅಥವಾ ರೋಟಿಯೊಂದಿಗೆ ಇದನ್ನು ಸವಿಯಿರಿ.

English summary

Masaledar Kathal/Jackfruit Curry Recipe

The spiky jackfruit is in season now. We are sure many of you must be extremely fond of jackfruit. But those of you who are not very fond of this vegetable, today we have a lip-smacking recipe for you which will compel you to change your preference.
Story first published: Tuesday, March 25, 2014, 15:51 [IST]
X
Desktop Bottom Promotion