For Quick Alerts
ALLOW NOTIFICATIONS  
For Daily Alerts

ಹುರುಳಿಕಾಳಿನ ಪಲ್ಯದ ರೆಸಿಪಿ

|

ಹುರುಳಿಕಾಳಿನ ಪಲ್ಯ ಬಾಯಿಗೆ ರುಚಿಕರ ಮಾತ್ರ ತುಂಬಾ ಆರೋಗ್ಯಕರ ಕೂಡ ಹೌದು. ಇದರಿಂದ ಹುಳಿ, ಪಲ್ಯ, ಚಟ್ನಿ ಏನೇ ಮಾಡಿದರೂ ತುಂಬಾ ರುಚಿಯಾಗಿರುತ್ತದೆ. ಅನ್ನದ ಜೊತೆ ತಿನ್ನಲಂತೂ ಸೂಪರ್. ಇದನ್ನು ಮಾಡುವ ವಿಧಾನ ಕೂಡ ತುಂಬಾ ಸರಳವಾಗಿದೆ.

ಇಲ್ಲಿ ನಾವು ಹುರುಳಿಕಾಳಿನ ಪಲ್ಯದ ರೆಸಿಪಿ ನೀಡಿದ್ದೇವೆ ನೋಡಿ:

Horse Gram Palya

ಬೇಕಾಗುವ ಸಾಮಾಗ್ರಿಗಳು

ಮೊಳಕೆ ಬರಿಸಿದ ಹುರುಳಿಕಾಳು 2 ಕಪ್
ತೆಂಗಿನ ತುರಿ ಅರ್ಧ ಕಪ್
ಈರುಳ್ಳಿ 1
ಕೊತ್ತಂಬರಿ ಪುಡಿ 1 ಚಮಚ
ಖಾರದ ಪುಡಿ( ರುಚಿಗೆ ತಕ್ಕಷ್ಟು)
ಹುಣಸೆ ಹಣ್ಣಿನ ರಸ 2 ಚಮಚ
ಸಾಸಿವೆ ಅರ್ಧ ಚಮಚ
ಅರಿಶಿಣ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 1 ಚಮಚ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿ ಬೇವಿನ ಎಲೆ
ನೀರು 1 ಕಪ್

ತಯಾರಿಸುವ ವಿಧಾನ:

* ತೆಂಗಿನ ತುರಿ, ಹುಣಸೆ ರಸ, ಖಾರದ ಪುಡಿ, ಕೊತ್ತಂಬರಿ ಪುಡಿ, ಸ್ವಲ್ಪ ಅರಿಶಿಣ ಹಾಕಿ, ಸ್ವಲ್ಪವೇ-ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. (2-3 ಚಮಚ ತೆಂಗಿನ ತುರಿಯನ್ನು ತೆಗೆದಿಟ್ಟು ನಂತರ ರುಬ್ಬಿ).

* ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಕಿ. ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಕರಿ ಬೇವಿನ ಎಲೆ ಹಾಕಿ, ನಂತರ ಮೊಳಕೆ ಬರಿಸಿದ ಹುರುಳಿಕಾಳನ್ನು ಹಾಕಿ 3-4 ನಿಮಿಷ ಸಾಧಾರಣ ಉರಿಯಲ್ಲಿ ಫ್ರೈ ಮಾಡಿ, ರುಚಿಗೆ ತಕ್ಕ ಉಪ್ಪು ಮತ್ತು ಸ್ವಲ್ಪ ಅರಿಶಿಣ ಹಾಕಿ, ಈಗ ರುಬ್ಬಿಟ್ಟ ಮಿಶ್ರಣವನ್ನು ಹಾಕಿ 1 ಕಪ್ ನೀರು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ. ( ಹೀಗೆ ಬೇಯಿಸುವಾಗ ಆಗಾಗ ಸೌಟ್ ನಿಂದ ಆಡಿಸುತ್ತಾ ಇರಿ).

* ಹುರುಳಿ ಕಾಳು ಬೆಂದು ಡ್ರೈಯಾದಾಗ, ತುರಿದ ತೆಂಗಿನಕಾಯಿ ಹಾಕಿ ಮಿಕ್ಸ್ ಮಾಡಿ ಮತ್ತೆ 2 ನಿಮಿಷ ಬೇಯಿಸಿದರೆ ಹುರುಳಿಕಾಳಿನ ಪಲ್ಯ ರೆಡಿ.

English summary

Horse Gram Palya Recipe

There are many horse gram recipes that you can try.The best thing about preparing horse gram recipes is, it is easy to make and can be teamed up with rice. Here is a recipe of horse gram palya. 
X
Desktop Bottom Promotion