For Quick Alerts
ALLOW NOTIFICATIONS  
For Daily Alerts

ರುಚಿಕರವಾದ ತರಕಾರಿ ದಾಲ್ ರೆಸಿಪಿ

|

ಭಾರತೀಯ ಊಟದಲ್ಲಿ ದಾಲ್ ಗೆ ಪ್ರಮುಖ ಸ್ಥಾನವಿದೆ. ಚಪಾತಿಗಳ ಜೊತೆ ಎಷ್ಟೇ ರೀತಿಯ ಪಲ್ಯವಿದ್ದರೂ ದಾಲ್ ಜೊತೆಗಿದ್ದರೆ ಅದರ ಗಮ್ಮತ್ತೆ ಬೇರೆ. ಡಯೆಟ್ ಆಹಾರ ಕ್ರಮದಲ್ಲಿ ಕೂಡ ಬೇಳೆಗಳಿಗೆ ಮಹತ್ವದ ಸ್ಥಾನವಿದೆ. ಇದನ್ನು ಹಲವು ರೀತಿಯಲ್ಲಿ ತಯಾರಿಸಬಹುದು. ಇದನ್ನು ಒಂದಿಷ್ಟು ಬೇಳೆ ಮತ್ತು ಮಸಾಲೆ ಸೇರಿಸಿ ನಮ್ಮ ರುಚಿಗೆ ತಕ್ಕಂತೆ ಹಲವು ವಿಧದಲ್ಲಿ ತಯಾರಿಸಬಹುದು.

ಬೇಳೆಯನ್ನು ಕೆಲವು ಮಾಂಸಾಹಾರದ ಪದಾರ್ಥಗಳನ್ನು ತಯಾರಿಸಲು ಕೂಡ ಬಳಸಬಹುದು ಎಂಬುದು ಕುತೂಹಲಕಾರಿ ಸಂಗತಿ. ಮಾಂಸ ಅಥವ ಮೀನಿನೊಂದಿಗೆ ಇದನ್ನು ಬೆರೆಸಿದಾಗ ಇದರ ರುಚಿ ಬೇರೆಯ ರೀತಿಯಲ್ಲಿರುತ್ತದೆ. ಈವತ್ತು ನಾವು ತರಕಾರಿ ಮತ್ತು ಬೇಳೆಯ ಕಾಂಬಿನೇಷನ್ ನಲ್ಲಿ ದಾಲ್ ತಯಾರಿಸುವುದು ಹೇಗೆ ಎಂದು ತಿಳಿಸುತ್ತೇವೆ.

Delicious Vegetable Dal Recipe

ಬೇಕಾಗುವ ಸಾಮಗ್ರಿಗಳು

1. ಹೆಸರು ಬೇಳೆ- 2 ಹಿಡಿಯಷ್ಟು
2. ತೊಗರಿಬೇಳೆ- 2 ಹಿಡಿಯಷ್ಟು
3. ಈರುಳ್ಳಿ- 1 (ಕತ್ತರಿಸಿಕೊಳ್ಳಿ)
4. ಕ್ಯಾರೆಟ್- 2 (ಕತ್ತರಿಸಿಕೊಳ್ಳಿ)
5. ಹುರುಳಿಕಾಯಿ- 8-20 (ಕತ್ತರಿಸಿಕೊಳ್ಳಿ)
6. ಹಸಿಮೆಣಸಿನ ಕಾಯಿ- 3 (ಕತ್ತರಿಸಿಕೊಳ್ಳಿ)
7. ಬೆಳ್ಳುಳ್ಳಿ- 6-7
8. ಟೊಮೊಟೊ- 1 (ಕತ್ತರಿಸಿಕೊಳ್ಳಿ)
9. ಅರಿಶಿಣ ಪುಡಿ- 2 ಟೀಚಮಚ
10. ಅಚ್ಚ ಖಾರದ ಪುಡಿ- 1 ಟೀಚಮಚ
11. ಗರಂ ಮಸಾಲ- 1 ಟೀಚಮಚ
12. ಜೀರಿಗೆ- 1 ಟೀಚಮಚ
13. ಬೇ ಲೀಫ್- 1
14. ಒಣಮೆಣಸಿನ ಕಾಯಿ- 1
15. ಉಪ್ಪು- ರುಚಿಗೆ ತಕ್ಕಷ್ಟು
16. ನಿಂಬೆ ರಸ- 1 ಟೀಚಮಚ
17. ತುಪ್ಪ- 1 ಟೀಚಮಚ

ಮಾಡುವ ವಿಧಾನ
1. ಎರಡೂ ಬೇಳೆಗಳನ್ನು ನೀರಿನಲ್ಲಿ ತೊಳೆದು 25-30 ನಿಮಿಷ ನೆನಸಿಡಿ.
2. ನೆಂದ ಕಾಳುಗಳನ್ನು ಕುಕ್ಕರಿನಲ್ಲಿ ಹಾಕಿ ಉಪ್ಪು ಮತ್ತು ಅರಿಶಿಣ ಪುಡಿ ಬೆರೆಸಿ. ಕುಕ್ಕರನ್ನು 3-4 ಸಲ ಕೂಗಿಸಿ.
3. ಬಾಣಲಿಯಲ್ಲಿ ತುಪ್ಪ ಹಾಕಿ ಜೀರಿಗೆ, ಬೇ ಲೀಫ್ ಮತ್ತು ಒಣಮೆಣಸಿನಕಾಯಿ ಹಾಕಿ.
4. ನಂತರ ಈರುಳ್ಳಿಯನ್ನು ಸೇರಿಸಿ ಹುರಿಯಿರಿ. ಇದರೊಂದಿಗೆ ಕ್ಯಾರೆಟ್, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಹುರಳಿಕಾಯಿ ಹಾಕಿ 3-4 ನಿಮಿಷಗಳವರೆಗೆ ಹುರಿಯಿರಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿ ಮತ್ತು ಉಪ್ಪನ್ನು ಹಾಕಿ (ಹೆಚ್ಚು ಉಪ್ಪನ್ನು ಹಾಕಬೇಡಿ. ಏಕೆಂದರೆ ನೀವು ಈಗಾಗಲೇ ಬೇಳೆಯೊಂದಿಗೆ ಉಪ್ಪನ್ನು ಹಾಕಿದ್ದೀರಿ ಎಂದು ಮರೆಯಬೇಡಿ)
5. ಬೇಯಿಸಿದ ಬೇಳೆಯನ್ನು ಚೆನ್ನಾಗಿ ಕಲಸಿಕೊಳ್ಳಿ.
6. ತರಕಾರಿಗಳು ಬೆಂದ ಮೇಲೆ ಅಚ್ಚ ಖಾರದ ಪುಡಿ, ಗರಂ ಮಸಾಲ ಮತ್ತು ಬೆಂದ ಬೇಳೆಗಳನ್ನು ಇದರೊಂದಿಗೆ ಸೇರಿಸಿ.
7. ಬೇಯಲು ಆರಂಭಿಸಿದ ಮೇಲೆ ನಿಧಾನವಾಗಿ ಕಲಸುತ್ತೀರಿ. ಸ್ವಲ್ಪ ನೀರು ಬೇಕಿದ್ದರೆ ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿ.

ಒಲೆ ಆರಿಸಿದ ನಂತರ ಇದಕ್ಕೆ ಸ್ವಲ್ಪ ನಿಂಬೆ ರಸ ಹಿಂಡಿ. ಇದನ್ನು ರೋಟಿ ಅಥವ ಅನ್ನದೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

English summary

Delicious Vegetable Dal Recipe

No Indian meal is ever deemed complete without having a bowl of dal on your plate. You may not have a lot of curries with your chapati, but if you have a bowl of dal, you can have a hearty meal without complaints.
Story first published: Thursday, December 12, 2013, 10:23 [IST]
X
Desktop Bottom Promotion