For Quick Alerts
ALLOW NOTIFICATIONS  
For Daily Alerts

ನಿಮ್ಮ ಮಧ್ಯಾಹ್ನದ ಊಟದ ಬುತ್ತಿಗಾಗಿ ತಯಾರಿಸಿ ವಿಧ ವಿಧ ಪಲ್ಯ

|

ಬೆಳಗೆ ಬೇಗನೆ ಎದ್ದು ಊಟದ ಬುತ್ತಿಗೆ (ಲಂಚ್ ಬಾಕ್ಸ್‌) ರುಚಿಯಾದ ಪಲ್ಯವನ್ನು ತಯಾರಿಸಿ ಪ್ಯಾಕ್ ಮಾಡುವುದೇ ಕಷ್ಟದ ಕೆಲಸವೇ? ಅದರಲ್ಲೂ ಒಂದೇ ಬಗೆಯ ಪಲ್ಯ ಮಾಡಿದರೆ ಮಕ್ಕಳೊಂದಿಗೆ ಮನೆಯವರೂ ಇಷ್ಟಪಡುವುದಿಲ್ಲ ಮತ್ತು ನಿಮಗೂ ಇದು ಬೇಸರ ಆಗಿರಬಹುದು. ಪಲ್ಯ ತಯಾರಿಸಲೆಂದೇ ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ದುಬಾರಿ ಸಮಯವನ್ನು ಕಳೆಯುತ್ತಾರೆ.

ಇದರಿಂದ ಕಚೇರಿಗೆ ಬೇಗನೇ ತಲುಪದಿರುವ ಸಂಕಷ್ಟ ಅವರಿಗಿರುತ್ತದೆ. ಇನ್ನು ಈ ಗಡಿಬಿಡಿ, ಕಷ್ಟ ಎಲ್ಲದಕ್ಕೂ ಗುಡ್ ಬೈ ಹೇಳುವ ಸಮಯ ಬಂದಿದೆ. ಈ ಲೇಖನದಲ್ಲಿರುವ ವಿವಿಧ ರುಚಿಯ ಪಲ್ಯಗಳನ್ನು ತಯಾರಿಸಿ ನಿಮ್ಮ ಸಮಯವ ಉಳಿಸಬಹುದು ಮತ್ತು ಮನೆಯವರ ಮೆಚ್ಚುಗೆಯನ್ನೂ ಗಳಿಸಬಹುದು.

ಈ ಲೇಖನದಲ್ಲಿರುವ ಸರಳ ಖಾದ್ಯಗಳು ನಿಮ್ಮ ಲಂಚ್ ಬಾಕ್ಸ್ ಊಟವನ್ನು ಸಂಪೂರ್ಣಗೊಳಿಸುತ್ತದೆ. ಕೆಲವೊಂದು ಖಾದ್ಯಗಳು ಖಂಡಿತ ನಿಮ್ಮ ಲಂಚ್ ಬಾಕ್ಸ್ (ಊಟದ ಬುತ್ತಿ) ಅನ್ನು ಪರಿಪೂರ್ಣಗೊಳಿಸುತ್ತದೆ ಮತ್ತು ನಿಮ್ಮ ಮಕ್ಕಳು ಇದೇ ಪಲ್ಯವನ್ನು ತಯಾರಿಸಿ ಎಂದು ದುಂಬಾಲು ಬೀಳುವುದು ಖಂಡಿತ.

ಗೋಬಿ ಪಲ್ಯ

ಗೋಬಿ ಪಲ್ಯ

ಗೋಬಿ ಆರೋಗ್ಯಕಾರಿಯಾದ ಮತ್ತು ರುಚಿ ಹೆಚ್ಚಿಸುವ ತರಕಾರಿಯಾಗಿದೆ. ನೀವು ಹೊಸದಾಗಿ ವಿಭಿನ್ನವಾಗಿರುವ ರುಚಿಯಾದ ಖಾದ್ಯವನ್ನು ತಯಾರಿಸುವ ಮನವನ್ನು ಹೊಂದಿದ್ದರೆ ಈ ಸರಳವಾದ ಗೋಬಿ ಪಲ್ಯವನ್ನು ಸಿದ್ಧಪಡಿಸಬಹುದು. ಗೋಬಿ ಅಧಿಕ ಪ್ರೋಟೀನ್ ಹಾಗೂ ನ್ಯೂಟ್ರಿನ್‌ಗಳನ್ನು ಹೊಂದಿದೆ. ಇದರಲ್ಲಿರುವ ಬೇಟಾ-ಕ್ಯಾರೊಟೀನ್ ಹಾಗೂ ಫೈಟೋನ್ಯೂಟ್ರಿಯೆಂಟ್ಸ್ ರೋಗವನ್ನು ದೂರವಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಪಾಕ ಪದ್ಧತಿಯನ್ನೇ ಸೊಗಸಾಗಿಸುವ ಗುಣ ಗೋಬಿಗಿದೆ. ಗೋಬಿ ಪಲ್ಯ ಮಾಡುವ ವಿಧಾನಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ

ರುಚಿಕರವಾದ ಗೋಬಿ ಬಟಾಣಿ ಖಾದ್ಯವನ್ನು ಒಮ್ಮೆ ಪ್ರಯತ್ನಿಸಿ ನೋಡಿ!

ಆಲೂಗಡ್ಡೆ ಪಲ್ಯ:

ಆಲೂಗಡ್ಡೆ ಪಲ್ಯ:

ಪಲ್ಯವನ್ನು ಸರಳವಾಗಿ ತಯಾರಿಸುವ ಮನಸ್ಸಾಗಿದೆಯೇ? ಹಾಗಾದರೆ ಆಲೂಗಡ್ಡೆ ಪಲ್ಯವನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಸರಳವಾದ ಮತ್ತು ತ್ವರಿತವಾಗಿರುವ ಖಾದ್ಯ ಇದಾಗಿದ್ದು ನಿಮಗೆ ಕೆಲವೇ ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು. ಆಲೂಗಡ್ಡೆ ಪಲ್ಯ ಮಾಡುವ ವಿಧಾನಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ

ಅಮ್ಮನ ಕೈರುಚಿಯ ವಿಶೇಷ ಖಾದ್ಯ ಆಲೂಗಡ್ಡೆ ಪಲ್ಯ

ಆಲೂಗಡ್ಡೆ ಟೊಮೇಟೊ ಪಲ್ಯ

ಆಲೂಗಡ್ಡೆ ಟೊಮೇಟೊ ಪಲ್ಯ

ನಿಮ್ಮ ಮಧ್ಯಾಹ್ನದ ಊಟದ ಬುತ್ತಿಗೆ (ಲಂಚ್ ಬಾಕ್ಸ್) ಮಸ್ತಾಗಿಸುವ ಇನ್ನೊಂದು ರುಚಿಕರವಾದ ಖಾದ್ಯ ಆಲೂ ಟೊಮೇಟೊ ಪಲ್ಯ. ಬೇಯಿಸಿದ ಆಲೂಗಡ್ಡೆಯನ್ನು ಇನ್ನೊಂದು ಪಾತ್ರೆಯಲ್ಲಿ ಟೊಮೇಟೊದೊಂದಿಗೆ ಚೆನ್ನಾಗಿ ಹುರಿದು ಈ ಖಾದ್ಯವನ್ನು ತಯಾರಿಸಲಾಗುತ್ತದೆ. ಡ್ರೈ ಅಥವಾ ಗ್ರೇವಿಯಾಗಿ ಕೂಡ ಈ ಪಲ್ಯವನ್ನು ತಯಾರಿಸಬಹುದು. ಆಲೂಗಡ್ಡೆ ಟೊಮೇಟೊ ಪಲ್ಯ ಮಾಡುವ ವಿಧಾನಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ

ಬಾಯಿಯಲ್ಲಿ ನೀರೂರಿಸುವ ಆಲೂ ಟೊಮೇಟೊ ಪಲ್ಯ

ಕೋಸಿನ ಪಲ್ಯ

ಕೋಸಿನ ಪಲ್ಯ

ಕೋಸಿನ ಪಲ್ಯವನ್ನು ಮಧ್ಯಾಹ್ನದ ಊಟದ ಬುತ್ತಿಗೆ ನೀವು ಪ್ರಯತ್ನಿಸಬಹುದು. ಕಲವೇ ನಿಮಿಷಗಳಲ್ಲಿ ಈ ರುಚಿಯಾದ ಮತ್ತು ಆರೋಗ್ಯಕರವಾದ ಈ ಪಲ್ಯವನ್ನು ನೀವು ತಯಾರಿಸಬಹುದು. ಅನ್ನದೊಂದಿಗೆ ಉತ್ತಮ ಕಾಂಬಿನೇಶನ್ ಆಗಿರುವ ಈ ಪಲ್ಯ, ರುಚಿಯನ್ನು ನಿಮ್ಮ ನಾಲಿಗೆಯಲ್ಲಿ ಹಾಗೆಯೇ ಉಳಿಸುವುದು ಖಂಡಿತ. ಕೋಸಿನ ಪಲ್ಯ ಮಾಡುವ ವಿಧಾನಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ

ಕೋಸಿನ ಪಲ್ಯ ಹೀಗೆ ಮಾಡಿದ್ರೆ ಹೇಗೆ?

ಬೆಂಡೆಕಾಯಿ ಕಡಲೆಹಿಟ್ಟು ಪಲ್ಯ

ಬೆಂಡೆಕಾಯಿ ಕಡಲೆಹಿಟ್ಟು ಪಲ್ಯ

ಬೆಂಡೆಕಾಯಿಯನ್ನು ಯಾವುದೇ ತರಕಾರಿಯೊಂದಿಗೆ ಸಂಮಿಶ್ರವಾಗಿ ಬೇಯಿಸಿಕೊಳ್ಳಬಹುದು. ಇಲ್ಲಿದೆ ಸರಳವಾದ ಬೆಂಡೆಕಾಯಿ ಕಡಲೆ ಹಿಟ್ಟು ಪಲ್ಯ ರೆಸಿಪಿ. ರುಚಿಕರವಾದ ಈ ಪಲ್ಯ ನಿಮ್ಮ ಬಾಯಿ ರುಚಿಯನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸೀಳಿದ ಬೆಂಡೆಕಾಯಿಯನ್ನು ಕಡಲೆ ಹಿಟ್ಟಿನೊಂದಿಗೆ ಫ್ರೈ ಮಾಡಿ ಸುಗಂಧಿತ ಮಸಾಲೆ ಸಾಮಾಗ್ರಿಗಳೊಂದಿಗೆ ಮಿಶ್ರಗೊಳಿಸುವ ರೆಸಿಪಿಯಾಗಿದೆ ಬೆಂಡೆಕಾಯಿ ಕಡಲೆಹಿಟ್ಟು ಪಲ್ಯ. ಬೆಂಡೆಕಾಯಿ ಕಡಲೆಹಿಟ್ಟು ಪಲ್ಯ ಮಾಡುವ ವಿಧಾನಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ

ಬಾಯಿಯಲ್ಲಿ ನೀರೂರಿಸುವ ರುಚಿಕರವಾದ ಬೆಂಡೆಕಾಯಿ ಪಲ್ಯ

English summary

Delicious lunch box sabzi recipes

Every morning, you need to prepare some quick sabzis that can be packed for lunch box. However,lack of time and the need to prepare something new every day can be a real challenge especially for working women. Most of the sabzis are dry which makes it easy to carry and enjoy your lunch as well. Take a look.
X
Desktop Bottom Promotion