For Quick Alerts
ALLOW NOTIFICATIONS  
For Daily Alerts

ನುಗ್ಗೆ ಸೊಪ್ಪಿನ ರೆಸಿಪಿ: ಸರ್ವ ರೋಗಕ್ಕೂ ರಾಮಬಾಣ

By Arshad
|

ಸಾಮಾನ್ಯವಾಗಿ ವರ್ಷವಿಡೀ ಸಾಂಬಾರಿನಲ್ಲಿ ಕಂಡುಬರುವ ತರಕಾರಿಗಳೆಂದರೆ ಮೂಲಂಗಿ, ನುಗ್ಗೇಕಾಯಿ ಮತ್ತು ಬದನೇಕಾಯಿ. ಹೆಚ್ಚಿನವರಿಗೆ ನುಗ್ಗೇಕಾಯಿ ಎಂದರೆ ಏನೋ ತಾತ್ಸಾರ. ಇದನ್ನು ತಿನ್ನದೇ ಹಾಗೇ ಬಿಟ್ಟುಬಿಡುತ್ತಾರೆ. ಆದರೆ ನುಗ್ಗೆಕಾಯಿಯಲ್ಲಿ ಉತ್ತಮ ಪೋಷಕಾಂಶಗಳಿರುವುದರಿಂದ ತಿನ್ನದಿರುವುದು ಸಲ್ಲದು. ನುಗ್ಗೇಕಾಯಿಯಂತೆ ನುಗ್ಗೆಸೊಪ್ಪಿನ (ಎಲೆಗಳ) ಪಲ್ಯ ಸಹಾ ಪೋಷಕಾಂಶಗಳಿಂದ ಕೂಡಿದೆ. ಆದರೆ ಇದು ಕೊಂಚ ಕಹಿಯಾಗಿರುವುದರಿಂದ ಹೆಚ್ಚಿನವರು ಇದನ್ನು ಇಷ್ಟಪಡುವುದಿಲ್ಲ, ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಲಭ್ಯವೂ ಇಲ್ಲ.

ಆದರೆ ಈ ಎಲೆಗಳು ಆರೋಗ್ಯಕ್ಕೆ ಉತ್ತಮವಾಗಿವೆ. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಕಾರಣ ಮಧುಮೇಹಿಗಳಿಗೂ ಸೂಕ್ತವಾಗಿದೆ. ಹೆಚ್ಚಿನ ನಾರು ಮತ್ತು ಜೀರ್ಣಿಸಿಕೊಳ್ಳಲು ಶರೀರದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸುವುದರಿಂದ ತೂಕ ಇಳಿಸಿಕೊಳ್ಳುತ್ತಿರುವವರಿಗೂ ಸೂಕ್ತವಾದ ಆಹಾರವಾಗಿದೆ.

ಆರೋಗ್ಯತಜ್ಞರಿಂದ ಈಗ ಈ ಎರಡೂ ವಿಷಯಗಳು ಪ್ರಮಾಣಿಸಲ್ಪಟ್ಟಿವೆ. ಅಲ್ಲದೇ ಗರ್ಭಿಣಿಯರೂ ಈ ಆಹಾರವನ್ನು ಸೇವಿಸುವ ಮೂಲಕ ಅಗತ್ಯವಿರುವ ಅಧಿಕ ರಕ್ತವನ್ನು ಪಡೆಯಬಹುದು. ಹೆಚ್ಚಿನವರ ಅವಗಣನೆಗೆ ಗುರಿಯಾಗಿದ್ದ ಈ ಸೊಪ್ಪಿನ ಸೊಗಸನ್ನು ಹೆಚ್ಚಿಸುವ ಸುಲಭ ವಿಧಾನವನ್ನು ಇಲ್ಲಿ ನೀಡಲಾಗಿದೆ. ಅಧಿಕ ಪ್ರೊಟೀನ್ ಇರುವ ನುಗ್ಗೆ ಸೊಪ್ಪಿನ ಚಟ್ನಿ

Delicious Drumstick Keerai Recipe

ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹದಿನೈದು ನಿಮಿಷಗಳು
ತಯಾರಿಕಾ ಸಮಯ: ಹದಿನೆಂಟು ನಿಮಿಷಗಳೂ

ಅಗತ್ಯವಿರುವ ಸಾಮಾಗ್ರಿಗಳು:
*ನುಗ್ಗೆಸೊಪ್ಪು - ಮೂರು ಕಟ್ಟು
*ಈರುಳ್ಳಿ - 2, ಚಿಕ್ಕದಾಗಿ ಹೆಚ್ಚಿದ್ದು (ಮಧ್ಯಮ ಗಾತ್ರ)
*ಬೆಳ್ಳುಳ್ಳಿ - ನಾಲ್ಕು ಎಸಳು, ಸಿಪ್ಪೆ ಸುಲಿದದ್ದು
*ಮೊಟ್ಟೆ - 1
*ಕೆಂಪು ಮೆಣಸಿನ ಕಾಯಿ - 3-4
*ಅಡುಗೆ ಎಣ್ಣೆ - 2 ದೊಡ್ಡ ಚಮಚ
*ಸಾಸಿವೆ- 1 ಚಿಕ್ಕಚಮಚ
*ಕಡಲೆ ಬೇಳೆ- 1 ಚಿಕ್ಕಚಮಚ
*ಉದ್ದಿನ ಬೇಳೆ - 1 ಚಿಕ್ಕಚಮಚ
*ಕಾಯಿತುರಿ - 2 ದೊಡ್ಡ ಚಮಚ (grated)
*ಉಪ್ಪು- ರುಚಿಗನುಸಾರ.

ವಿಧಾನ:
*ಮೊದಲು ನುಗ್ಗೆಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಿ. ಪ್ರತಿ ಎಲೆಯನ್ನೂ ಬೆರಳುಗಳಿಂದ ಸವರಿ ತೊಳೆಯುವುದು ಅಗತ್ಯ. ಏಕೆಂದರೆ ಎಲೆಯ ಮೇಲೆ ಅಂಟಿಕೊಂಡಿರುವ ಧೂಳು ಕೇವಲ ನೀರಿನಲ್ಲಿ ನೆನೆಸುವುದರಿಂದ ತೊಲಗುವುದಿಲ್ಲ. ಬಳಿಕ ನೀರು ಬಸಿದು ಒಂದು ಬದಿಯಲ್ಲಿಡಿ.
*ಒಂದು ಪಾತ್ರೆಯಲ್ಲಿ ಕೊಂಚವೇ ನೀರು ಹಾಕಿ ನುಗ್ಗೆಸೊಪ್ಪನ್ನು ಚಿಕ್ಕ ಉರಿಯಲ್ಲಿ ಹದಿನೈದು ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಕೊಂಚ ಉಪ್ಪನ್ನು ಎಲ್ಲಾ ಎಲೆಗಳ ಮೇಲೆ ಬರುವಂತೆ ಚಿಮುಕಿಸಿ. ನಡುನಡುವೆ ತಿರುವುತ್ತಿರಿ.
*ಇನ್ನೊಂದು ಪಾತ್ರೆಯನ್ನು ಮಧ್ಯಮ ಉರಿಯಲ್ಲಿಟ್ಟು ಎಣ್ಣೆ ಹಾಕಿ ಕೊಂಚ ಬಿಸಿಯಾಗುತ್ತಿದ್ದಂತೆಯೇ ಈರುಳ್ಳಿ, ಬೆಳ್ಳುಳ್ಳಿ, ಕೆಂಪುಮೆಣಸು, ಸಾಸಿವೆ, ಉದ್ದಿನ ಬೇಳೆ ಮತ್ತು ಕಡಲೆ ಬೇಳೆ ಹಾಕಿ ಹುರಿಯಿರಿ.
ಈರುಳ್ಳಿ ಕೆಂಪಕಾಗುವವರೆಗೆ ತಿರುವುತ್ತಾ ಇರಿ.
*ಈಗ ಮೊಟ್ಟೆಯನ್ನು ಒಡೆದು ನೀರುಳ್ಳಿಯ ಮೇಲೆ ಸುರಿದು ತಕ್ಷಣ ತಿರುವುತ್ತಾ ಎಲ್ಲಾ ಪ್ರಮಾಣದಲ್ಲಿ ಮಿಳಿತವಾಗುವಂತೆ ನೋಡಿಕೊಳ್ಳಿ
*ಇನ್ನು ಬೇಯಿಸಿಟ್ಟಿದ್ದ ನುಗ್ಗೆ ಎಲೆಗಳನ್ನು ಹಾಕಿ ಚೆನ್ನಾಗಿ ತಿರುವಿರಿ. ಮಧ್ಯಮ ಉರಿಯಲ್ಲಿ ಈ ಮಿಶ್ರಣವನ್ನು ಚೆನ್ನಾಗಿ ಬೇಯಿಸಿ.
*ತದನಂತರ ಎಲೆಗಳು ಬೆಂದಿವೆಯೇ ನೋಡಿಕೊಳ್ಳಿ. ಬಳಿಕ ಕಾಯಿತುರಿ ಹಾಕಿ ತಿರುವಿ. ಕೂಡಲೇ ಒಲೆಯಿಂದಿಳಿಸಿ ತಣಿಯಲು ಬಿಡಿ.

ಸಲಹೆ:
ನುಗ್ಗೆಸೊಪ್ಪನ್ನು ಬೇಯಿಸುವಾಗ ಅತಿ ಕಡಿಮೆ ನೀರು ಇರಬೇಕು. ಪ್ರೆಶರ್ ಕುಕ್ಕರ್ ಬಳಸುವುದಾದರೆ ಐದಾರು ಸೀಟಿ ಬರುವವರೆಗೆ ಬೇಯಿಸಿ. ಆದರೆ ಉಪ್ಪನ್ನು ನೀರಿನಲ್ಲಿ ಮೊದಲೇ ಹಾಕಬೇಕು.

English summary

Delicious Drumstick Keerai Recipe

Drumstick leaves or murungai is a famous South India treat. Since drumstick season is round the corner it is a must try recipe. Usually people only opt for the vegetable not realising how nutritious and healthy the leaves are. Health experts state that murungai keerai is good for diabetics.
X
Desktop Bottom Promotion