For Quick Alerts
ALLOW NOTIFICATIONS  
For Daily Alerts

ಚೆನ್ನಾ ಮಸಾಲ ಸಬ್ಜಿಯ ರೆಸಿಪಿ

|

ಚಪಾತಿ, ಪರೋಟ ಈ ರೀತಿಯ ಪದಾರ್ಥಗಳನ್ನು ಮಾಡಿದಾಗ ಅದರ ಜೊತೆ ತಿನ್ನಲು ಚೆನ್ನಾ ಸಬ್ಜಿ ಸೂಪರ್. ಈ ಚೆನ್ನಾ ಸಬ್ಜಿಯನ್ನು ಗಟ್ಟಿಯಾಗಿ ತಯಾರಿಸಿದರೆ ರುಚಿಯಾಗಿರುತ್ತದೆ. ಬೇಕಿದ್ದರೆ ಸ್ವಲ್ಪ ನೀರಾಗಿ ತಯಾರಿಸಬಹುದು, ಆದರೆ ಈ ಸಬ್ಜಿಯನ್ನು ತುಂಬಾ ನೀರು ಮಾಡಿದರೆ ಅಷ್ಟೇನು ರುಚಿಯಾಗಿರುವುದಿಲ್ಲ.

ಚೆನ್ನಾ ಮಸಾಲ ಸಬ್ಜಿಯನ್ನು ಮಾಡುವ ವಿಧಾನ ನೋಡೋಣ ಬನ್ನಿ.

Dahi Chane Ki Sabzi Side Dish Recip

ಬೇಕಾಗುವ ಸಾಮಾಗ್ರಿಗಳು
* ಕಡಲೆ 100 ಗ್ರಾಂ (ನೀರಿನಲ್ಲಿ ನೆನೆ ಹಾಕಿದ್ದು)
* ಈರುಳ್ಳಿ 2(ಕತ್ತರಿಸಿದ್ದು)
* ಹಸಿ ಮೆಣಸಿನಕಾಯಿ 2-3
* ಟೊಮೆಟೊ 1
* ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
* ಬೆಳ್ಳುಳ್ಳಿಎಸಳು 2-3
* ಚೆನ್ನಾಗಿ ಕದಡಿದ ಮೊಸರು 2 ಚಮಚ
* ಖಾರದ ಪುಡಿ 1 ಚಮಚ
* ಕೊತ್ತಂಬರಿ ಪುಡಿ 1 ಚಮಚ
* ಗರಂ ಮಸಾಲ 1 ಚಮಚ
* ಚೆನ್ನಾ ಮಸಾಲ 1 ಚಮಚ
* ಜೀರಿಗೆ ಅರ್ಧ ಚಮಚ
* 1 ಇಂಚಿನಷ್ಟು ದೊಡ್ದಿರುವ ಚಕ್ಕೆ
* ಲವಂಗ 2
* ಕರಿಬೇವಿನ ಎಲೆ
* ರುಚಿಗೆ ತಕ್ಕ ಉಪ್ಪು
* ಎಣ್ಣೆ

ತಯಾರಿಸುವ ವಿಧಾನ:

* ಕಡಲೆಯನ್ನು ಕುಕ್ಕರ್ ಗೆ ಹಾಕಿ, ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ ಹಾಕಿ 2-3 ವಿಷಲ್ ಹಾಕಬೇಕು.

* ನಂತರ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಹಾಕಿ ಪೇಸ್ಟ್ ಮಾಡಿ.

* ನಂತರ ಟೊಮೆಟೊವನ್ನು ಪ್ರತ್ಯೇಕವಾಗಿ ರುಬ್ಬಿ.

* ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ 2 ಚಮಚ ಎಣ್ಣೆ ಹಾಕಿ, ಎಣ್ಣೆ ಕಾದಾಗ ಜೀರಿಗೆ ಹಾಕಿ, ಕರಿ ಬೇವಿನ ಎಲೆ, ಚಕ್ಕೆ , ಲವಂಗ ಹಾಕಿ.

* ನಂತರ ಈರುಳ್ಳಿ ಪೇಸ್ಟ್ ಹಾಕಿ ಸೌಟ್ ನಿಂದ ಆಡಿಸಿ ನಂತರ ಟೊಮೆಟೊ ಪೇಸ್ಟ್ ಹಾಕಿ 2-3 ನಿಮಿಷ ಸೌಟ್ ನಿಂದ ಆಡಿಸುತ್ತಾ ಹುರಿಯಿರಿ. ನಂತರ ಬೇಯಿಸಿದ ಚೆನ್ನಾ ಹಾಕಿ ಮಿಕ್ಸ್ ಮಾಡಿ, ಖಾರದ ಪುಡಿ, ಗರಂ ಪುಡಿ, ಕೊತ್ತಂಬರಿ ಪುಡಿ, ಚೆನ್ನಾ ಮಸಾಲ ಪುಡಿ ಹಾಕಿ , ಬೇಕಿದ್ದರೆ ಸ್ವಲ್ಪ ಉಪ್ಪು, ಮೊಸರು ಹಾಕಿ 5 ನಿಮಿಷ ಕುದಿಸಿದರೆ ಚೆನ್ನಾ ಸಬ್ಜಿ ರೆಡಿ.

English summary

Dahi Chane Ki Sabzi Side Dish Recipe | Variety Of Gravy Recipe | ಚೆನ್ನಾ ಮಸಾಲ ಸಬ್ಜಿ ರೆಸಿಪಿ | ಅನೇಕ ಬಗೆಯ ಗ್ರೇವಿ ರೆಸಿಪಿ

If you add little curd, you can get a creamy white texture and a tangy taste. Here is the recipe to prepare dahi chane ki sabzi. You can either use chickpeas (chole) or red grams (lal channa).
X
Desktop Bottom Promotion