For Quick Alerts
ALLOW NOTIFICATIONS  
For Daily Alerts

ತೆಂಗಿನಕಾಯಿಯೊಂದಿಗೆ ಗರಿಯಾದ ಹಾಗಲಕಾಯಿ ಫ್ರೈ ರೆಸಿಪಿ

|

ಕರೇಲಾ ಅಥವಾ ಹಾಗಲಕಾಯಿ ಹೆಚ್ಚಾಗಿ ಪ್ರತಿಯೊಬ್ಬರೂ ದೂರ ಮಾಡುವಂತಹ ತರಕಾರಿಯಾಗಿದೆ. ಅದರಲ್ಲೂ ಮಕ್ಕಳು ಈ ತರಕಾರಿಯನ್ನು ನೋಡಿದೊಡನೆ ಮಾರು ದೂರ ಹೋಗುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಹಾಗಲಕಾಯಿ ಒಂದು ಉತ್ತಮ ತರಕಾರಿಯಾಗಿದೆ. ಮಧುಮೇಹ ರೋಗಿಗಳಿಗೆ, ನಿಮ್ಮ ತ್ವಚೆಗೆ ಹಾಗೂ ನಿಮ್ಮ ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಇದೊಂದು ಅದ್ಭುತ ತರಕಾರಿಯಾಗಿದೆ.

ಕಹಿಯಿಲ್ಲದೆ ಈ ಹಾಗಲಕಾಯಿ ಪದಾರ್ಥವನ್ನು ಮಾಡುವ ವಿಧಾನವನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ತೆಂಗಿನ ಕಾಯಿಯನ್ನು ಬಳಸಿ ತಯಾರಿಸುವ ಹಾಗಲಕಾಯಿ ರೆಸಿಪಿ ಕಹಿ ಸ್ವಾದವನ್ನು ಮರೆಮಾಚುತ್ತದೆ. ಹಾಗಲಕಾಯಿಯನ್ನು ಸ್ವಲ್ಪ ಹೊತ್ತು ನೆನೆಸಿ ಮತ್ತು ಗರಿಗರಿಯಾಗಿವಂತೆ ಹುರಿದು ಈ ಖಾದ್ಯವನ್ನು ತಯಾರಿಸಲಾಗುತ್ತದೆ.

Crispy Karela Fry Recipe With Coconut

ಗರಿಗರಿಯಾದ ಹಾಗಲಕಾಯಿ ರೆಸಿಪಿಯನ್ನು ತೆಂಗಿನಕಾಯಿಯೊಂದಿಗೆ ಸೇರಿಸಿ ಈ ರೆಸಿಪಿಯನ್ನು ನಾವು ತಯಾರಿಸುತ್ತಿದ್ದೇವೆ. ಈ ರೆಸಿಪಿ ನಿಮ್ಮ ಮನೆಯವರಿಗೆಲ್ಲರಿಗೂ ಇಷ್ಟವಾಗುವುದು ಖಂಡಿತ.

ಆಲೂ ಹಾಗಲಕಾಯಿ ಪಲ್ಯ, ಸ್ಟೆಪ್ ಬೈ ಸ್ಟೆಪ್ ರೆಸಿಪಿ

ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು:
*ಹಾಗಲಕಾಯಿ - 6 (ದಪ್ಪನೆಯ ಸುರುಳಿ ಆಕಾರದಲ್ಲಿ ಕತ್ತರಿಸಿದ)
*ಚನ್ನಾ ದಾಲ್ - 1 ಸ್ಪೂನ್
*ಜೀರಿಗೆ - 1/2 ಸ್ಪೂನ್
*ಸಾಸಿವೆ - 1/2 ಸ್ಪೂನ್
*ಕರಿಬೇವಿನೆಲೆ - 7-8
*ಕೆಂಪು ಮೆಣಸು - 3
*ಬೆಳ್ಳುಳ್ಳಿ - 5
*ತೆಂಗಿನ ಕಾಯಿ - 1/2 ಕಪ್ (ತುರಿದದ್ದು)
*ಅರಶಿನ ಹುಡಿ - 1/2 ಸ್ಪೂನ್
*ಮೆಣಸಿನ ಹುಡಿ - 1 ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - ಹುರಿಯಲು
*ಎಣ್ಣೆ - 2 ಸ್ಪೂನ್

ಹಾಗಲಕಾಯಿ ಸುಕ್ಕಾ ರೆಸಿಪಿ

ಮಾಡುವ ವಿಧಾನ:
1.ತುಂಡರಿಸಿದ ಹಾಗಲಕಾಯಿ ತುಂಡುಗಳನ್ನು ಉಪ್ಪು ಮತ್ತು ಅರಶಿನ ಹುಡಿ ಹಾಕಿ 10 - 15 ನಿಮಿಷಗಳ ಕಾಲ ಮುಳುಗಿಸಿಡಿ.

2.ಹಾಗಲಕಾಯಿ ಕಹಿ ರಸವನ್ನು ನಿಮ್ಮ ಕೈಯಿಂದ ಹಿಂಡಿ ತೆಗೆದು ಪಕ್ಕದಲ್ಲಿಡಿ.

3.ಪ್ಯಾ‌ನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಹಾಗಲಕಾಯಿಯನ್ನು 4-5 ನಿಮಿಷಗಳ ಕಾಲ ಹುರಿಯಿರಿ. ಅವು ಕಂದು ಬಣ್ಣ ಮತ್ತು ಗರಿಗರಿಯಾಗಿರುವಂತೆ ನೋಡಿಕೊಳ್ಳಿ.

4.ಹುರಿದ ಹಾಗಲಕಾಯಿ ತುಂಡುಗಳನ್ನು ತಟ್ಟೆಗೆ ವರ್ಗಾಯಿಸಿ.

5.ತೆಂಗಿನ ಕಾಯಿ, ಬೆಳ್ಳುಳ್ಳಿ ಮತ್ತು ಮೆನಸಿನ ಹುಡಿಯನ್ನು ಸೇರಿಸಿ ಪೌಡರ್‌ನಂತೆ ರುಬ್ಬಿಕೊಳ್ಳಿ.

6.ಪ್ಯಾನ್‌ನಲ್ಲಿ ಎರಡು ಸ್ಪೂನ್‌ನಷ್ಟು ಎಣ್ಣೆಯನ್ನು ತೆಗೆದುಕೊಳ್ಳಿ ಇದಕ್ಕೆ ಜೀರಿಗೆ, ಚನ್ನಾ ದಾಲ್, ಸಾಸಿವೆ, ಕೆಂಪು ಮೆಣಸು, ಕರಿಬೇವನ್ನು ಒಂದರ ಹಿಂದೆ ಒಂದರಂತೆ ಹಾಕಿ. ಸ್ವಲ್ಪ ನಿಮಿಷಗಳ ಕಾಲ ಇದನ್ನು ಹುರಿಯಿರಿ.

7.ಹುಡಿ ಮಾಡಿದ ತೆಂಗಿನ ಕಾಯಿ ಮಿಶ್ರಣವನ್ನು ಪ್ಯಾನ್‌ಗೆ ಹಾಕಿ ಮತ್ತು 3-4 ನಿಮಿಷಗಳ ಕಾಲ ಬೇಯಿಸಿ.

8.ಇದೀಗ ಚೆನ್ನಾಗಿ ಹುರಿದ ಹಾಗಲಕಾಯಿ ತುಂಡುಗಳನ್ನು ಪ್ಯಾನ್‌ಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ.

9.ಉಪ್ಪು ಸೇರಿಸಿ ಮತ್ತು ಸ್ವಲ್ಪ ನಿಮಿಷಗಳ ಕಾಲ ಫ್ರೈ ಮಾಡಿ.

10.ಒಮ್ಮೆ ಪೂರ್ತಿ ಆದ ನಂತರ, ಗ್ಯಾಸ್ ಆಫ್ ಮಾಡಿ ಮತ್ತು ಬಡಿಸಿ.

ಗರಿಯಾದ ಹಾಗಲಕಾಯಿ ಫ್ರೈ ಸವಿಯಲು ಸಿದ್ಧವಾಗಿದೆ. ಸ್ಟೀಮ್ ಅನ್ನ ಮತ್ತು ದಾಲ್‌ನೊಂದಿಗೆ ಈ ರೆಸಿಪಿ ಒಂದು ಉತ್ತಮ ಕಾಂಬಿನೇಷನ್ ಆಗಿದೆ.

English summary

Crispy Karela Fry Recipe With Coconut

Karela or bitter gourd is the most hated vegetable, especially among kids. But it is also one of the best vegetables when it comes to your health
X
Desktop Bottom Promotion