For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಕಡಲೆಕಾಳು ಪುಲಾವ್ ರೆಸಿಪಿ

|

ಭಾರತದ ಹಲವೆಡೆಗಳಲ್ಲಿ ಹೆಚ್ಚು ಪ್ರಿಯವಾಗಿರುವ ಸಾಮಾಗ್ರಿಯೆಂದರೆ ಕಡಲೆಕಾಳಾಗಿದೆ. ಭಾರತದ ಉತ್ತರದ ಕಡೆಗಳಲ್ಲಿ ಮುಖ್ಯವಾದ ಸಾಮಾಗ್ರಿಯಾಗಿರುವ ಕಡಲೆಕಾಳು ದಕ್ಷಿಣದ ಕಡೆಗಳಲ್ಲಿ ಕೂಡ ಸಾಮಾನ್ಯ ಬಹುಮುಖ್ಯವಾಗಿರುವ ಸಾಮಾಗ್ರಿಯಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೆಂಗಿನೆಣ್ಣೆ ಹಾಕಿ ಮಾಡುವ ಮೀನಿನ ಫ್ರೈ

ಈ ರುಚಿಯಾದ ಸಾಮಾಗ್ರಿ ಕಡಲೆಕಾಳು, ದೊಡ್ಡವರಿಗಿಂತ ಹೆಚ್ಚಾಗಿ ಮಕ್ಕಳು ಸಹ ಹೆಚ್ಚು ಇಷ್ಟಪಡುತ್ತಾರೆ. ನಿಮ್ಮ ಪುಟ್ಟ ಮಕ್ಕಳ ಹಸಿವನ್ನು ತಣಿಸಲು ಈ ರುಚಿಯಾದ ಕಡಲೆಕಾಳು ಪುಲಾವ್ ಅನ್ನು ನೀವು ಪ್ರಯತ್ನಿಸಲೇಬೇಕು.

 Colourful Chickpeas Pulav Recipe

ಈ ರುಚಿಯಾದ ಕಡಲೆಕಾಳು ಪುಲಾವ್ ರೆಸಿಪಿಯನ್ನು ತಯಾರಿಲಸಲು ನೀವು ತುಂಬಾ ಹೊತ್ತು ಕಳೆಯಬೇಕೆಂದಿಲ್ಲ. ಇದನ್ನು ತಯಾರಿಸಲು ಕೇವಲ 20 ನಿಮಿಷ ಸಾಕು. ಬನ್ನಿ ಈ ಹೊಸತಾದ ರುಚಿಯನ್ನು ತಯಾರಿಸಿ ನಿಮ್ಮ ಮನೆಮಂದಿಗೆಲ್ಲಾ ಖುಷಿ ನೀಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸ್ವಾದಿಷ್ಟ ಬೆಣ್ಣೆ ಕ್ಯಾಪ್ಸಿಕಂ ಮಿಶ್ರಿತ ಅನ್ನದ ರೆಸಿಪಿ

ಪ್ರಮಾಣ: 3
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು
.ಅಕ್ಕಿ - 1ಕಪ್
.ಕಡಲೆಕಾಳು -25ಗ್ರಾಂಗಳು
.ಟೊಮೇಟೊ - 2(ತುಂಡರಿಸಿದ್ದು)
.ಆಲೂಗಡ್ಡೆ - 1(ಬೇಯಿಸಿದ್ದು)
.ಪಾಲಕ್ - 1ಕಟ್ಟು (ಕತ್ತರಿಸಿದ್ದು)
.ಕ್ಯಾಪ್ಸಿಕಂ - 1 (ದೊಡ್ಡ ಗಾತ್ರದ್ದು)
.ಎಣ್ಣೆ - 2ಟೇಸ್ಪೂನ್
.ಜೀರಿಗೆ - 1ಟೇಸ್ಪೂನ್
.ಇಂಗು -1/2 ಟೇಸ್ಪೂನ್
.ಶುಂಠಿ - 1ಟೇಸ್ಪೂನ್
.ಹಸಿಮೆಣಸು - 2 (ತುಂಡರಿಸಿದ್ದ)
.ಹಳದಿ -1ಟೇಸ್ಪೂನ್
.ಅಮೆಚೂರ್- 1/2 ಟೇಸ್ಪೂನ್
.ಗರಂ ಮಸಾಲಾ - 1/4ಟೇಸ್ಪೂನ್
.ನೀರು - 2ಕಪ್‌ಗಳು
.ಉಪ್ಪು ರುಚಿಗೆ ತಕ್ಕಷ್ಟು
.ಬೇ ಲೀಪ್ - 1

ಮಾಡುವ ವಿಧಾನ:
1. ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿಡಿ. 15 ನಿಮಿಷದಷ್ಟು ಕಾಲ ಅಕ್ಕಿ ನೀರಿನಲ್ಲಿರಲಿ.

2.ಕಡಲೆಕಾಳು ನೆನೆಸಿಟ್ಟ ನೀರನ್ನು ಬಸಿದು, 5 ವಿಸಿಲ್ ಬರುವವರೆಗೆ ಕುಕ್ಕರ್‌ನಲ್ಲಿ ಬೇಯಿಸಿ, ನಂತರ ಪಕ್ಕಕ್ಕಿಡಿ.

3.ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.

4.ಎಣ್ಣೆ ಬಿಸಿಯಾದೊಡನೆ, ಜೀರಿಗೆಯನ್ನು ಎಣ್ಣೆಗೆ ಹಾಕಿ. ಜೀರಿಗೆ ಬಿಸಿಯಾಗುವವರೆಗೆ ಕಾಯಿರಿ. ಶುಂಠಿ, ತುಂಡರಿಸಿದ ಹಸಿಮೆಣಸು, ಮತ್ತು ಹಳದಿಯನ್ನು ಎಣ್ಣೆಯಲ್ಲಿ ಹುರಿಯಿರಿ.

5.ಈಗ ಪ್ಯಾನ್‌ಗೆ ತುಂಡರಿಸಿದ ಟೊಮೇಟೊವನ್ನು ಹಾಕಿ ಮತ್ತು ಪ್ಯಾನ್‌ನಲ್ಲಿರುವ ಸಾಮಾಗ್ರಿಗೆ ಉಪ್ಪು ಚಿಮುಕಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾಯಿಯಲ್ಲಿ ನೀರೂರಿಸುವ ಬಂಗಾಳಿ ಖಾದ್ಯಗಳು

6.ಟೊಮೇಟೊ ಬೆಂದ ಕೂಡಲೆ, ಬೇಯಿಸಿದ ಕಡಲೆಕಾಳನ್ನು ಪ್ಯಾನ್‌ಗೆ ಹಾಕಿ, ಆಲೂಗಡ್ಡೆ ಮತ್ತು ನೀರು ಸೇರಿಸಿ. ಬೇಯುತ್ತಿರುವಾಗಲೇ ಪ್ಯಾನ್‌ಗೆ ಮುಚ್ಚಳ ಮುಚ್ಚಿ ಮತ್ತು ಸಣ್ಣ ಉರಿಯಲ್ಲಿ 8 ನಿಮಿಷಗಳವರೆಗೆ ಬೇಯಲು ಬಿಡಿ.

7.ಸಂಪೂರ್ಣ ಬೆಂದ ಒಡನೆಯೇ, ಪ್ಯಾನ್‌ಗೆ ಅಕ್ಕಿ, ಪಾಲಾಕ್, ಬೇ ಲೀಫ್, ಮತ್ತು ಕ್ಯಾಪ್ಸಿಕಂ ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಪ್ಯಾನ್ ಮುಚ್ಚಿ ಸಣ್ಣ ಉರಿಯಲ್ಲಿ 12-15 ನಿಮಿಷಗಳವರೆಗೆ ಬೇಯಿಸಿ.

8.ಪ್ಯಾನ್‌ನಲ್ಲಿ ಅಕ್ಕಿಯನ್ನು ನಿಧಾನವಾಗಿ ತಿರುಗಿಸಿ ಮತ್ತು ಬೇಯಲು ಬಿಡಿ.

9.ಕಡಲೆಕಾಳು ಪುಲಾವ್ ಸಿದ್ಧಗೊಂಡಾಗ, ಅಮೆಚೂರ್ ಹುಡಿಯನ್ನು ಚಿಮುಕಿಸಿ ಮತ್ತು ಗರಂ ಮಸಾಲಾ ಹಾಕಿ ಪ್ಯಾನ್‌ನಲ್ಲಿರುವ ಉಳಿದ ಸಾಮಾಗ್ರಿಯೊಂದಿಗೆ ಚೆನ್ನಾಗಿ ಕಲಸಿ.

10.ಮೊಸರು ಅಥವಾ ಖಾರ ಇನ್ನಷ್ಟು ಬೇಕೆಂದರೆ ನಿಮ್ಮ ಮೆಚ್ಚಿನ ಉಪ್ಪಿನಕಾಯಿಯೊಂದಿಗೆ ಕಡಲೆಕಾಳು ಪುಲಾವ್ ಅನ್ನು ಸವಿಯಿರಿ.

ಬಿಸಿ ಬಿಸಿ ಕಡಲೆಕಾಳು ಪುಲಾವ್ ರೆಸಿಪಿ ಸವಿಯಲು ಸಿದ್ಧಗೊಂಡಿದೆ. ರೈತಾದೊಂದಿಗೆ ಇದನ್ನು ಸವಿದು ಮನೆಯವರ ಮೆಚ್ಚುಗೆಗಳಿಸಿರಿ.

Read more about: cookery ಅಡುಗೆ
English summary

Colourful Chickpeas Pulav Recipe

One of the most loved ingredients in many parts of India is chickpeas. Being an important ingredient in Northern parts of India, chickpeas has also become a common ingredient in South India too.
Story first published: Tuesday, February 11, 2014, 14:30 [IST]
X
Desktop Bottom Promotion