For Quick Alerts
ALLOW NOTIFICATIONS  
For Daily Alerts

ಹಾಗಾಲಕಾಯಿ ಗೊಜ್ಜನ್ನು ಮೊಸರನ್ನದ ಸವಿದು ನೋಡಿ

|

ಹಾಗಾಲಕಾಯಿಯ ಕಹಿ ತೆಗೆದು ಅದಕ್ಕೆ ಸ್ವಲ್ಪ ಸಕ್ಕರೆ ಅಥವಾ ಬೆಲ್ಲದ ಪಾಕ ಹಾಕಿ ತಯಾರಿಸಿದರೆ ಹಾಗಾಲಕಾಯಿ ಅಡುಗೆಯನ್ನು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇಲ್ಲಿ ನಾವು ಹಾಗಾಲಕಾಯಿ ಗೊಜ್ಜು ಮಾಡುವ ವಿಧಾನ ಹೇಳಿದ್ದೇವೆ.

ಇದನ್ನು ಮಾಡಿ ಮೊಸರನ್ನದ ಜೊತೆ ಒಮ್ಮೆ ತಿಂದರೆ ಮತ್ತೆ ಯಾವತ್ತೂ ಮೊಸರನ್ನವನ್ನು ಈ ಹಾಗಾಲಕಾಯಿ ಗೊಜ್ಜು ಇಲ್ಲದೆ ತಿನ್ನಲು ಇಷ್ಟಪಡುವುದಿಲ್ಲ, ಅಷ್ಟೊಂದು ರುಚಿಕರವಾಗಿರುತ್ತದೆ ಮೊಸರನ್ನ ಮತ್ತು ಹಾಗಾಲಕಾಯಿ ಗೊಜ್ಜಿನ ಕಾಂಬಿನೇಷನ್. ಇದನ್ನು ಅನ್ನದ ಜೊತೆಯಲ್ಲೂ ಸವಿಯಬಹುದು.

Bitter Guard Gojju Recipe

ಬೇಕಾಗುವ ಸಾಮಾಗ್ರಿಗಳು

ಹಾಗಲಕಾಯಿ 1 (ಚಿಕ್ಕ ಗಾತ್ರದಾದರೆ 2)
ಸಕ್ಕರೆ 2 -3ಚಮಚ
ಮೆಣಸಿನ ಪುಡಿ 1 ಚಮಚ
ಮೆಂತೆ ಪುಡಿ ¼ ಚಮಚ (ೆಣ್ಣೆ ಹಾಕದೆ ಹುರುದು ಪುಡಿ ಮಾಡಿದ ಮೆಂತೆ ಪುಡಿ)ಡಿ)
ಅರಿಶಿಣ ಪುಡಿ ¼ ಚಮಚ
ಎಣ್ಣೆ 4 ಚಮಚ
ಹುಣಸೆ ರಸ 4 ಚಮಚ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವಿನ ಎಲೆ
ಚಿಟಿಕೆಯಷ್ಟು ಇಂಗು
ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ:

* ಹಾಗಲಕಾಯಿಯನ್ನು ತೊಳೆದುಕೊಂಡು ಎರಡು ಭಾಗ ಮಾಡಿ, ಬೀಜವನ್ನು ತೆಗೆದು, ಹಾಗಲಕಾಯಿಯನ್ನು ಸಾಧ್ಯವಾದಷ್ಟು ಸಣ್ಣಗೆ ಹೆಚ್ಚಿಕೊಳ್ಳಬೇಕು. ಈ ತುಂಡುಗಳಿಗೆ ಉಪ್ಪು ಸೇರಿಸಿ ಒಂದು ಗಂಟೆ ಮುಚ್ಚಿಡಿ. ನಂತರ ಇದನ್ನು ಚೆನ್ನಾಗಿ ಹಿಂಡಿ ರಸವನ್ನೆಲ್ಲ ಬೇರ್ಪಡಿಸಿ ( ಈ ರೀತಿ ಮಾಡಿದರೆ ಹಾಗಾಲಕಾಯಿಯ ಕಹಿ ಕಡಿಮೆಯಾಗುತ್ತದೆ).

* ನಂತರ ದಪ್ಪ ತಳವಿರುವ ಪಾತ್ರೆಯಲ್ಲಿ 1 ಚಮಚ ಎಣ್ಣೆ ಹಾಕಿಕೊಂಡು ಹಾಗಲಕಾಯಿಯನ್ನು ಚೆನ್ನಾಗಿ ಮಗುಚುತ್ತಾ, ಅದು ಸ್ವಲ್ಪ ಗರಿಗರಿಯಾಗುವ ತನಕ ಹುರಿಯಬೇಕು.

* ಈಗ ಇನ್ನೊಂದು ಪಾತ್ರೆಯಲ್ಲಿ ಉಳಿದ ಎಣ್ಣೆಯನ್ನು ಹಾಕಿಕೊಂಡು ಒಗ್ಗರಣೆ ಮಾಡಿಕೊಂಡು, ಈರುಳ್ಳಿ ಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಂಡು, ಅರಿಶಿಣ ಪುಡಿ, ಮೆಂತ್ಯದ ಪುಡಿ, ಹಾಗೂ ಮೆಣಸಿನ ಪುಡಿ ಸೇರಿಸಿ ಒಂದು ನಿಮಿಷ ಹುರಿದುಕೊಳ್ಳಿ. ನಂತರ ಹುರಿದ ಹಾಗಲ ಕಾಯಿ, ಸಕ್ಕರೆ, ಹುಣಸೆ ರಸ ಹಾಕಿ 5-10 ನಿಮಿಷ ಸಣ್ಣ ಉರಿಯಲ್ಲಿ ನೀರಿನಂಶ ಇರುವ ತನಕ ಕುದಿಸಬೇಕು. ಈ ಗೊಜ್ಜನ್ನು ಉರಿಯಿಂದ ಇಳಿಸುವ ಮುನ್ನ ಉಪ್ಪು ಸರಿಯಿದೆಯೇ ಎಂದು ನೋಡಬೇಕು.

ಇದನ್ನು ಮೊಸರನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

English summary

Bitter Guard Gojju Recipe | variety Of Gojju Recipe | ಹಾಗಾಲಕಾಯಿ ಗೊಜ್ಜು ರೆಸಿಪಿ | ಅನೇಕ ಬಗೆಯ ಗೊಜ್ಜು ರೆಸಿಪಿ

Most of the people don't like bitter guard because of it bitter taste. The recipe will not have much bitter taste and it is best combination for curd rice. 
Story first published: Saturday, January 12, 2013, 9:40 [IST]
X
Desktop Bottom Promotion