For Quick Alerts
ALLOW NOTIFICATIONS  
For Daily Alerts

ಮಸಾಲೆ ದೋಸೆಗಾಗಿ ರುಚಿ ರುಚಿಯಾದ ಬೇಯಿಸಿದ ಆಲೂಗಡ್ಡೆ ಪಲ್ಯ

|

ಭಾರತೀಯ ಮನೆಗಳಲ್ಲಿ ತಯಾರಾಗುವ ಜನಪ್ರಿಯ ತಿಂಡಿಯೆಂದರೆ ದೋಸೆಯಾಗಿದೆ. ಅದರಲ್ಲೂ ನೀವು ಮಸಾಲೆ ದೋಸೆಯನ್ನು ತಯಾರಿಸುವಾಗ, ದೋಸೆಯ ಒಳಗೆ ತುಂಬಿಸುವ ಮಸಾಲೆ ಇಲ್ಲಿ ಮುಖ್ಯವಾಗಿರುತ್ತದೆ. ದೋಸೆಗೆ ರುಚಿ ಬರುವುದೇ ಈ ಮಸಾಲೆಯಿಂದಾಗಿ. ಈ ಮಸಾಲೆ ತಯಾರಿಸಲು ಬೇಕಾಗಿರುವ ಮುಖ್ಯ ಸಾಮಾಗ್ರಿಯೆಂದರೆ ಆಲೂಗಡ್ಡೆಯಾಗಿದೆ.

ಹಾಗಾಗಿ ತೂಕ ಇಳಿಸಿಕೊಳ್ಳುವ ಆಲೋಚನೆಯಲ್ಲಿರುವವರಿಗಾಗಿ ಈ ಆಲೂಗಡ್ಡೆ ಪಲ್ಯ! ಅದಕ್ಕಾಗಿ ಹುರಿದ ಆಲೂಗಡ್ಡೆಯ ಬದಲಿಗೆ ಬೇಯಿಸಿದ ಆಲೂಗಡ್ಡೆಯನ್ನು ಬಳಸುವುದು ಉತ್ತಮವಾಗಿರುತ್ತದೆ.

Baked Potato Stuffing For Masala Dosa

ನಿಮ್ಮ ತೂಕ ಇಳಿಸುವಿಕೆಯ ವಿಧಾನಕ್ಕೂ ಇದು ಯಾವುದೇ ಅಡ್ಡಿಯನ್ನು ಉಂಟುಮಾಡುವುದಿಲ್ಲ. ಮಸಾಲೆ ದೋಸೆಗೆ ಬಳಸಲಾಗುವ ಈ ಬೇಯಿಸಿದ ಆಲೂಗಡ್ಡೆ ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತದೆ. ಆದ್ದರಿಂದ ನಿಮ್ಮ ಮುಖದಲ್ಲಿ ಈ ದೋಸೆಯನ್ನು ತಿನ್ನುವಾಗ ನೀವು ತೃಪ್ತಿಯ ನಗು ಸೂಸುವುದು ಖಂಡಿತ!

ಹಾಗಿದ್ದರೆ ಮಸಾಲೆ ದೋಸೆಗಾಗಿ ತಯಾರು ಮಾಡಲಾಗುವ ಈ ಖಾದ್ಯ ವಿಧಾನವನ್ನು ತಿಳಿದುಕೊಳ್ಳಿ.

ಪ್ರಮಾಣ: 4
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು
ಸಿದ್ಧತಾ ಸಮಯ: 20 ನಿಮಿಷಗಳು

ನಾಲಿಗೆಯ ರುಚಿ ತಣಿಸುವ ಪಾಲಕ್ ರೆಸಿಪಿ!

ಸಾಮಾಗ್ರಿಗಳು
*ಆಲೂಗಡ್ಡೆ - 1/2 ಕೆಜಿ
*ಜೀರಿಗೆ - 2 ಚಮಚ
*ಅರಶಿನ - 1 ಚಮಚ
*ಮೆಣಸಿನ ಹುಡಿ - 1/2 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 3 ಚಮಚ

ಮಾಡುವ ವಿಧಾನ
1. ನೀವು ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿಕೊಳ್ಳಬೇಕು, ಇದಾದ ನಂತರ ಪಕ್ಕದಲ್ಲಿರಿಸಿಕೊಳ್ಳಿ.
2. ಒಮ್ಮೆ ತಣ್ಣಗಾದ ನಂತರ ದೊಡ್ಡ ಚಮಚವನ್ನು ಬಳಸಿ ಆಲೂಗಡ್ಡೆಯನ್ನು ಹಿಸುಕಿ. ನಿಮ್ಮ ಕೈಗಳಿಂದಲೂ ಇದನ್ನು ನುಣ್ಣಗೆ ಹಿಸುಕಿಕೊಳ್ಳಬಹುದು.
3. ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ ಇದಕ್ಕೆ ಜೀರಿಗೆ ಸೇರಿಸಿ. ಉಪ್ಪು ಹಾಗೂ ಮೆಣಸಿನ ಹುಡಿ ಮಿಶ್ರ ಮಾಡಿಕೊಳ್ಳಿ. ಇದೆಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿಕೊಂಡು ಬೇಯಿಸಿದ ಆಲೂಗಡ್ಡೆ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ.
4. ಇನ್ನು ಇದಕ್ಕೆ ಅರಶಿನ, ಬೆಳ್ಳುಳ್ಳಿ ಹುಡಿ, ಮೆಣಸು ಮತ್ತು ಉಪ್ಪು ಚಿಮುಕಿಸಿ.
5. ಇದೆಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿಕೊಂಡು, ಎಣ್ಣೆ ಇಲ್ಲದೆ ನಿಮ್ಮ ದೋಸೆಯನ್ನು ಬೇಯಿಸಿಲು ಪ್ರಾರಂಭಿಸಿ. ಪ್ರತೀ ದೋಸೆ ತಯಾರಾದ ಕೂಡಲೇ ಇದರ ಮಧ್ಯಕ್ಕೆ ಪಲ್ಯವನ್ನು ಹಾಕಿಕೊಳ್ಳಿ.

ನಿಮ್ಮ ಎಣ್ಣೆ ರಹಿತ ದೋಸೆ ಸವಿಯಲು ಸಿದ್ಧವಾಗಿದೆ. ನಿಮ್ಮ ರುಚಿಯಾದ ಈ ಮಸಾಲೆ ದೋಸೆಯನ್ನು ಚಟ್ನಿ ಅಥವಾ ಸಾಂಬಾ‌ರ್‌ನೊಂದಿಗೆ ಸವಿಯಿರಿ.

English summary

Baked Potato Stuffing For Masala Dosa

Dosa is one of the main dishes prepared almost every day in an Indian home. When you prepare masala dosa, the main ingredient is the red striking masala. However, when you add an extra ingredient to the breakfast recipe, you only add in taste! Take a look at this Indian baked potato recipe for masala dosa:
X
Desktop Bottom Promotion