For Quick Alerts
ALLOW NOTIFICATIONS  
For Daily Alerts

ಬೇಬಿ ಆಲೂ ಫ್ರೈ -ಸ್ಪೆಷಲ್ ರೆಸಿಪಿ

|

ಚಿಕ್ಕ ಆಲೂಗಡ್ಡೆಯಿಂದ ಮಾಡುವ ಟ್ಯಾಂಗಿ ಟೇಸ್ಟ್ ನ ಈ ಆಲೂ ರೆಸಿಪಿಯನ್ನು ಸ್ಪೆಷಲ್ ಮಸಾಲ ಹಾಕಿ ತಯಾರಿಸಲಾಗುವುದು. ಸಾಮಾನ್ಯವಾಗಿ ಅಡುಗೆಗೆ ಬಳಸುವ ಮಸಾಲೆಯಿಂದಲೇ ಸ್ಪೆಷಲ್ ಮಸಾಲೆ ತಯಾರಿಸಬಹುದು. ಈ ಆಲೂ ಫ್ರೈಯನ್ನು ಸ್ಟಾಟರ್ಸ್ ರೀತಿ ತಿನ್ನಬಹುದು, ಚಪಾತಿ ಒಳಗೆ ಹಾಕಿ ರೋಲ್ ರೀತಿ ಮಾಡಿಯೂ ತಿನ್ನಬಹುದು.

ಇದರ ರುಚಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟವಾಗುವುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Baby Aloo Recipe

ಬೇಕಾಗುವ ಪದಾರ್ಥಗಳು

ಚಿಕ್ಕ ಗಾತ್ರದ ಆಲೂಗಡ್ಡೆ 10-15
ಚಿಲ್ಲಿ ಫ್ಲೇಕ್ಸ್ 2 ಚಮಚ
ಬೆಳ್ಳುಳ್ಳಿ ಎಸಳು 4-5
ರೋಸ್ಟ್ ಮಾಡಿದ ಜೀರಿಗೆ 2 ಚಮಚ
ಒಣ ಮಾವಿನಕಾಯಿ ಪುಡಿ 2 ಚಮಚ
ಸ್ವಲ್ಪ ಕರಿ ಮೆಣಸಿನ ಪುಡಿ
ಎಣ್ಣೆ 2 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
ನೀರು 1/4 ಕಪ್
ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ:

* ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದು ಇಡಿ.

* ಚಿಲ್ಲಿ ಫ್ಲೇಕ್ಸ್ , ರೋಸ್ಟ್ ಮಾಡಿದ ಜೀರಿಗೆ, ಕರಿ ಮೆಣಸಿನ ಪುಡಿ, ಬೆಳುಳ್ಳಿಗೆ ಸ್ವಲ್ಪ ನೀರು ಹಾಕಿ ಗ್ರೈಂಡ್ ಮಾಡಬೇಕು.

* ನಂತರ ಪ್ಯಾನ್ ಗೆ ಎಣ್ಣೆ ಹಾಕಿ ಅದರಲ್ಲಿ ಆಲೂಗಡ್ಡೆ ಹಾಕಿ 3-4 ನಿಮಿಷ ಫ್ರೈ ಮಾಡಿ, ನಂತರ ರುಬ್ಬಿದ ಪೇಸ್ಟ್ ಹಾಕಿ, ಒಣ ಮಾವಿನ ಪುಡ, ರುಚಿಗೆ ತಕ್ಕ ಉಪ್ಪು, ಒಣ ಮಾವಿನ ಕಾಯಿ ಪುಡಿ ಹಾಕಿ 3-4 ನಿಮಿಷ ಫ್ರೈ ಮಾಡಿ, ನಂತರ 1/4 ಕಪ್ ನೀರು ಹಾಕಿ 5 ನಿಮಿಷ ಸಾಧಾರಣ ಉರಿಯಲ್ಲಿ ಬೇಯಿಸಿ.

* ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬೇಬಿ ಆಲೂ ಫ್ರೈ ರೆಡಿ.
ಸೂಚನೆ: ಒಣ ಮಾವಿನ ಕಾಯಿ ಪುಡಿ ಇಲ್ಲದಿದ್ದರೆ ಹುಣಸೆ ಹಣ್ಣಿನ ರಸ ಸೇರಿಸಬಹುದು.

English summary

Baby Aloo Recipe

This recipe is prepared with a mix of various spices and the dash of dry mango powder which adds to the tangines taste.
X
Desktop Bottom Promotion