For Quick Alerts
ALLOW NOTIFICATIONS  
For Daily Alerts

ಒಮ್ಮೆ ಸವಿದು ನೋಡಿ: ಆಲೂ- ದೊಣ್ಣೆಮೆಣಸಿನ ರೆಸಿಪಿ

By Super
|

ಆಲೂಗಡ್ಡೆಗಳು ಭಾರತದಲ್ಲಿ ಅತ್ಯಂತ ಜನಪ್ರಿಯವಾದ ತರಕಾರಿಗಳಲ್ಲಿ ಒಂದಾಗಿದೆ. ಬಹುತೇಕ ಎಲ್ಲಾ ಬಗೆಯ ಅಡುಗೆಗಳಲ್ಲಿ ಇದನ್ನು ಸಾಮಾನ್ಯವಾಗಿ ಬಳಸುತ್ತಾರೆ, ಇದರಲ್ಲಿರುವ ಪ್ರೋಟೀನ್ ಮತ್ತು ವಿಟಮಿನ್‌ಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ರೋಗಗಳ ವಿರುದ್ಧ ಕೂಡ ಹೋರಾಡುತ್ತವೆ. ಅಲ್ಲದೆ ಇದು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ಆದರೆ ಆಲೂಗಡ್ಡೆಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ ಎಂದು ಕೆಲವರು ನಂಬಿದ್ದಾರೆ. ಆದರೆ ಇದನ್ನು ಗ್ರಿಲ್ ಅಥವಾ ಉಗಿಯಲ್ಲಿ ಬೇಯಿಸಿದರೆ, ಆಗ ಇದು ಖಂಡಿತ ತೂಕ ಇಳಿಸಿಕೊಳ್ಳಲು ನೆರವು ನೀಡುತ್ತದೆ. ಮತ್ತೊಂದು ವಿಚಾರವೇನೆಂದರೆ, ಇದಕ್ಕೆ ಹೆಚ್ಚಿನ ಎಣ್ಣೆಯ ಅವಶ್ಯಕತೆ ಇರುವುದಿಲ್ಲ. ಆದರೂ ಸುರಕ್ಷತೆಯ ದೃಷ್ಟಿಯಿಂದ ಇದಕ್ಕೆ ಆಲೀವ್ ಎಣ್ಣೆಯನ್ನು ಬಳಸಿದಷ್ಟು ಉತ್ತಮ. ಬನ್ನಿ ಇಂದು ಮಧ್ಯಾಹ್ನ ಈ ಆಲೂಗಡ್ಡೆಗಳನ್ನು ಬಳಸಿಕೊಂಡು ಆಲೂ - ದೊಣ್ಣೆಮೆಣಸಿನ ರೆಸಿಪಿ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ. ವಾವ್! ನಾಲಿಗೆಯ ರುಚಿ ತಣಿಸುವ ಆಲೂಗಡ್ಡೆ ಪಲ್ಯ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಐದು ಜನರಿಗೆ ಬಡಿಸಬಹುದು

ತಯಾರಿಕೆಗೆ ತಗುಲುವ ಸಮಯ: 30 ನಿಮಿಷಗಳು

ಅಡುಗೆಗೆ ತಗುಲುವ ಸಮಯ: 20 ನಿಮಿಷಗಳು

ಅಗತ್ಯವಾಗಿರುವ ಪದಾರ್ಥಗಳು

ಅಗತ್ಯವಾಗಿರುವ ಪದಾರ್ಥಗಳು

ಹಸಿರು ದೊಡ್ಡ ಮೆಣಸಿನಕಾಯಿ (ಕ್ಯಾಪ್ಸಿಕಂ) - 5 (ಕ್ಯಾಪ್ಸಿಕಂ ಒಳಗಿರುವ ತಿರುಳನ್ನು ತೆಗೆದು ಆಲೂಗಡ್ಡೆ ಒಳಗೆ ಸೇರಿಸಲು ಬೇಕಾದ ಹಾಗೆ ತಯಾರಿಸಿಕೊಳ್ಳಿ)

ಆಲೂಗಡ್ಡೆ - 5 (ಬೇಯಿಸಿದ, ಸಿಪ್ಪೆ ಸುಲಿದ ಮತ್ತು ಜಜ್ಜಿರುವಂತಹುದು)

ಬಟಾಣಿಗಳು - 1 ಕಪ್ (ಬೇಯಿಸಿದ)

ಎಣ್ಣೆ - 4 ಟೀ.ಚಮಚ

ಅಗತ್ಯವಾಗಿರುವ ಪದಾರ್ಥಗಳು

ಅಗತ್ಯವಾಗಿರುವ ಪದಾರ್ಥಗಳು

*ಸಾಸಿವೆ ಬೀಜಗಳು- ½ ಟೀ.ಚಮಚ

*ಈರುಳ್ಳಿ - 1 (ಕತ್ತರಿಸಿದಂತಹುದು)

*ಹಸಿ ಮೆಣಸಿನಕಾಯಿ - 2 (ಸಣ್ಣದಾಗಿ ಕತ್ತರಿಸಿದಂತಹುದು)

ಅಗತ್ಯವಾಗಿರುವ ಪದಾರ್ಥಗಳು

ಅಗತ್ಯವಾಗಿರುವ ಪದಾರ್ಥಗಳು

ಜೀರಿಗೆ ಪುಡಿ - 1 ಟೀ.ಚಮಚ

*ಕೊತ್ತೊಂಬರಿ ಪುಡಿ - 1 ಟೀ.ಚಮಚ

*ಅರಿಶಿನ ಪುಡಿ - ½ ಟೀ.ಚಮಚ

*ಖಾರದಪುಡಿ - 1 ಟೀ.ಚಮಚ

*ರುಚಿಗೆ ತಕ್ಕಷ್ಟು ಉಪ್ಪು

ಹೂರಣವನ್ನು ತುಂಬುವ ವಿಧಾನ: ಹಂತ 1

ಹೂರಣವನ್ನು ತುಂಬುವ ವಿಧಾನ: ಹಂತ 1

ಒಂದು ಟೇಬಲ್ ಚಮಚ ಎಣ್ಣೆಯನ್ನು ಬಾಣಲೆಯ ಮೇಲೆ ಹಾಕಿ. ಇದು ಬಿಸಿಯಾದ ಮೇಲೆ, ಅದಕ್ಕೆ ಸಾಸಿವೆ ಮತ್ತು ಜೀರಿಗೆಯನ್ನು ಹಾಕಿ. ಅವುಗಳು ಬೇಯುವುವವರೆಗೆ ಕಾಯಿರಿ.

ಹಂತ 2

ಹಂತ 2

ಈಗ ಎರಡು ಈರುಳ್ಳಿಗಳನ್ನು ತೆಗೆದುಕೊಂಡು, ಅದನ್ನು ಹೊಂಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.

ಹಂತ 3

ಹಂತ 3

ಇನ್ನು ಬಾಣಲೆಗೆ ಕತ್ತರಿಸಿದ ಹಸಿ ಮೆಣಸಿನ ಕಾಯಿಗಳನ್ನು ಹಾಕಿ ಮತ್ತು ಕಡಿಮೆ ಉರಿಯಲ್ಲಿ ಒಂದು ನಿಮಿಷದವರೆಗೆ ಅದನ್ನು ಚೆನ್ನಾಗಿ ಕಲೆಸಿಕೊಡಿ.

ಹಂತ 4

ಹಂತ 4

ಬಾಣಲೆಗೆ ಜಜ್ಜಿದ ಆಲೂಗಡ್ಡೆಗಳನ್ನು ಹಾಕಿ. ಇದರೆ ಮೇಲೆ ಜೀರಿಗೆ ಪುಡಿ, ಕೊತ್ತೊಂಬರಿ ಪುಡಿ ಮತ್ತು ಉಪ್ಪನ್ನು ಹಾಕಿ.

ಹಂತ 5

ಹಂತ 5

ಈ ಪದಾರ್ಥಗಳನ್ನು ಚೆನ್ನಾಗಿ ಕಲೆಸಿಕೊಡಿ.

ಸ್ಟಪ್ಫ್ ಮಾಡುವ ವಿಧಾನ: ಹಂತ 1

ಸ್ಟಪ್ಫ್ ಮಾಡುವ ವಿಧಾನ: ಹಂತ 1

ಆಲೂಗಡ್ಡೆ ತಣ್ಣಗಾದ ಮೇಲೆ, ಅದನ್ನು ಕ್ಯಾಪ್ಸಿಕಂ (ದೊಣ್ಣೆ ಮೆಣಸು) ಒಳಗೆ ಒಂದು ಸಣ್ಣ ಚಮಚದ ಸಹಾಯದಿಂದ ಅಥವಾ ಬೆರಳಿನ ಸಹಾಯದಿಂದ ಸೇರಿಸಿ. ನಂತರ ಅದನ್ನು ಪಕ್ಕದಲ್ಲಿಡಿ. ಈಗ ಉಳಿದ ಎಣ್ಣೆಯನ್ನು ಅದರ ಮೇಲೆ ಹಾಕಿ. ಬಿಸಿಯಾದ ಮೇಲೆ, ಈ ಕ್ಯಾಪ್ಸಿಕಂಗಳನ್ನು ಒಂದರ ಪಕ್ಕ ಒಂದನ್ನು ಬಾಣಲೆಯ ಮೇಲೆ ಹಿಡಿ

ಹಂತ 2

ಹಂತ 2

ಈ ದೊಣ್ಣೆಮೆಣಸುಗಳನ್ನು ಕಡಿಮೆ ಉರಿಯಲ್ಲಿ ಚೆನ್ನಾಗಿ ಬೇಯಲು ಬಿಡಿ, ಅಲ್ಲದೆ ಈ ಪಾತ್ರೆಯನ್ನು ಸಂಪೂರ್ಣವಾಗಿ ಮುಚ್ಚಿ.

ಹಂತ 3

ಹಂತ 3

ಪ್ರತಿ- 4-5 ನಿಮಿಷಕ್ಕೆ ಒಮ್ಮೆ ಇದನ್ನು ತಿರುವಿಕೊಡಿ. ಹೊಂಬಣ್ಣಕ್ಕೆ ಬರುವವರೆಗೆ ಇದನ್ನು ಬೇಯಿಸುವುದನ್ನು ಮುಂದುವರಿಸಿ.

ಹಂತ-4

ಹಂತ-4

ಯಾವಾಗ ಇದರ ಬಣ್ಣವು ಹೊಂಬಣ್ಣಕ್ಕೆ ತಿರುಗುತ್ತದೆಯೋ, ಆಗ ಬಾಣಲೆಗೆ ಉಳಿದ ಆಲೂಗಡ್ಡೆಗಳನ್ನು ಸಹ ಹಾಕಿ. ನಂತರ ಮತ್ತೆ ಒಂದು ನಿಮಿಷ ಬೇಯಿಸಿ, ನಂತರ ತೆಗೆಯಿರಿ. ಇದನ್ನು ರೋಟಿ ಅಥವಾ ಪರೋಟಾಗಳ ಜೊತೆಗೆ ಬಡಿಸಿ.

ಪೋಷಕಾಂಶದ ಸಲಹೆ

ಪೋಷಕಾಂಶದ ಸಲಹೆ

ದೊಣ್ಣೆಮೆಣಸು ಒಂದು ಕಡಿಮೆ ಕ್ಯಾಲೋರಿ ಇರುವ ತರಕಾರಿಯಾಗಿದ್ದು, ಇದರಲ್ಲಿ 0 ಗ್ರಾಂ ಕೊಬ್ಬು ಇರುತ್ತದೆ. ಇಂತಹ ತರಕಾರಿಗಳನ್ನು ನಮ್ಮ ಡಯಟ್‌ನಲ್ಲಿ ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ, ಅಂದರೆ ಮೆಣಸುಗಳು ಅಥವಾ ಕ್ಯಾಪ್ಸಿಕಂಗಳನ್ನು ಸೇವಿಸುವುದರಿಂದ ನೀವು ಕಾಯಿಲೆ ಬೀಳುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ.

ಸಲಹೆ

ಸಲಹೆ

ಒಮ್ಮೆ ನೀವು ಕ್ಯಾಪ್ಸಿಕಂನ ಒಳ ತಿರುಳನ್ನು ತೆಗೆದ ಮೇಲೆ, ಅದನ್ನು ನೀರಿನಲ್ಲಿ ತೊಳೆದು ಸ್ವಲ್ಪ ಸಮಯ ಒಣಗಲು ಬಿಡಿ. ಅದಕ್ಕಾಗಿ ಒಂದು ಪೇಪರ್ ಟವೆಲ್ ಮೇಲೆ ಇದನ್ನು ತಲೆಕೆಳಗಾಗಿ ಇಡಿ. ದೊಣ್ಣೆ ಮೆಣಸಿಗೆ ಆಲೂಗಡ್ಡೆಯನ್ನು ಸೇರಿಸುವಾಗ ಬೆರಳನ್ನು ಬಳಸಿ. ಇದರಿಂದ ಸ್ಟಫ್ಫ್ ಪ್ರಕ್ರಿಯೆ ಚೆನ್ನಾಗಿ ಪೂರ್ಣಗೊಳ್ಳುತ್ತದೆ.

English summary

Aloo Stuffed Capsicum Recipe: Step By Step

Aloo is one of the most loved vegetable in India. In every household, aloo is added to almost all dishes. The proteins and vitamins present in potato helps to boost immunity, fight against diseases and it also helps in weight loss. Though many consider this vegetable to be the worst for weight loss, experts state that when you steam or grill potatoes it is safe to consume.
Story first published: Monday, June 1, 2015, 19:56 [IST]
X
Desktop Bottom Promotion