For Quick Alerts
ALLOW NOTIFICATIONS  
For Daily Alerts

ಆಲೂ ಪೋಸ್ತೋ: ಬೆಂಗಾಳಿ ರೆಸಿಪಿ

|

ಇದೊಂದು ಅಪ್ಪಟ ಬೆಂಗಾಳಿ ರೆಸಿಪಿಯಾಗಿದ್ದು, ನಮ್ಮಲ್ಲಿ ಪಲ್ಯ ಮಾಡುವಂತೆ ಬೆಂಗಾಳಿಯರು ಆಹಾರದ ಸ್ವಾದ ಹೆಚ್ಚಿಸುವ ಸೈಡ್ ಐಟಂ ಅಡುಗೆಯಾಗಿ ಇದನ್ನು ಮಾಡುತ್ತಾರೆ. ಈ ಪೋಸ್ತೋ ರೆಸಿಪಿ ತಿನ್ನಲು ತುಂಬಾ ರುಚಿಕರವಾಗಿದ್ದು, ನೀವು ಬೇಕಾದರೂ ಟ್ರೈ ಮಾಡಬಹುದು.

ಇದನ್ನು ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ.

Aloo Posto: Easy Bengali Potato Recipe

ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ 4-5
ಈರುಳ್ಳಿ 2
ಹಸಿ ಮೆಣಸಿನಕಾಯಿ 4(ಪೇಸ್ಟ್ ಮಾಡಿ)
ಗಸೆಗಸೆ 2 ಚಮಚ
ಈರುಳ್ಳಿ ಬೀಜ(Kalounji) 1 ಚಮಚ(ಬೇಕಿದ್ದರೆ ಹಾಕಿ)
ಅರಿಶಿಣ ಪುಡಿ 1 ಚಮಚ
ಸಾಸಿವೆ ಎಣ್ಣೆ 1 ಚಮಚ(ಬೇರೆ ಎಣ್ಣೆ ಬೇಕಿದ್ದರೂ ಬಳಸಬಹುದು, ಇದರ ನಿಜವಾದ ಸ್ವಾದಕ್ಕೆ ಸಾಸಿವೆ ಎಣ್ಣೆ ಒಳ್ಳೆಯದು)
ಕರಿ ಬೇವಿನ ಎಲೆ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಗಸೆಗಸೆಯನ್ನು 2 ಗಂಟೆಗಳ ನೆನೆ ಹಾಕಿ, ನಂತರ ಗಸೆಗಸೆ ಮತ್ತು, ಈರುಳ್ಳಿ ಬೀಜ, ಹಸಿ ಮೆಣಸಿನಕಾಯಿಯನ್ನು ಹಾಕಿ ಗಟ್ಟಿಯಾದ ಪೇಸ್ಟ್ ಮಾಡಿ.

* ಆಲೂಗಡ್ಡೆಯನ್ನು ಕತ್ತರಿಸಿ, ತೊಳೆದು, ಅದಕ್ಕೆ ರುಚಿಗೆ ತಕ್ಕ ಉಪ್ಪು ಸೇರಿಸಿ ಹೆಚ್ಚು ನೀರು ಹಾಕದೆ ಬೇಯಿಸಿ.

* ಈಗ ಮತ್ತೊಂದು ಪಾತ್ರೆಯನ್ನು ಉರಿ ಮೇಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕರಿ ಬೇವಿನ ಎಲೆ ಹಾಕಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ-ಬಣ್ಣ ಬರುವವರೆಗೆ ಹುರಿಯಿರಿ. ಈಗ ಬೇಯಿಸಿದ ಆಲೂಗಡ್ಡೆ ಹಾಕಿ ಆಲೂಗಡ್ಡೆ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಈಗ ಗಸೆಗಸೆ ಮತ್ತು ಹಸಿ ಮೆಣಸಿನಕಾಯಿಂದ ಮಾಡಿದ ಪೇಸ್ಟ್ ಸೇರಿಸಿ, ಸ್ವಲ್ಪ ಉಪ್ಪನ್ನು ಉದುರಿಸಿ, ಅರಿಶಿಣ ಪುಡಿ ಹಾಕಿ ಸೌಟ್ ನಿಂದ ತಿರುಗಿಸಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ, ತುಂಬಾ ಡ್ರೈಯಾಗಿದ್ದರೆ ಮಾತ್ರ ಸ್ವಲ್ಪವೇ-ಸ್ವಲ್ಪ ನೀರು ಸೇರಿಸಿ ಬೇಯಿಸಿ. ಇಷ್ಟು ಮಾಡಿದರೆ ಆಲೂ ಪೋಸ್ತೋ ರೆಡಿ.

English summary

Aloo Posto: Easy Bengali Potato Recipe

This an quintessential Bengali recipe that you need to Learn from your mothers and grandmothers. Definitely not one of those fashionable recipes carried by cookery books or expert chiefs. This Indian potato recipe is traditional and very specific to its region.
X
Desktop Bottom Promotion