For Quick Alerts
ALLOW NOTIFICATIONS  
For Daily Alerts

ಆಲೂ ಪಾಲಾಕ್ ಪಲ್ಯದ ರೆಸಿಪಿ

|

ಬರೀ ಪಾಲಾಕ್ ಸೊಪ್ಪನ್ನು ಹಾಕಿ ಪಲ್ಯ ಮಾಡಿ ತಿನ್ನುವ ಬದಲು ಅದಕ್ಕೆ ಆಲೂಗಡ್ಡೆ ಹಾಗೂ ಟೊಮೆಟೊ ಹಾಕಿ ಮಾಡಿದರೆ ಪಲ್ಯ ಹೆಚ್ಚು ರುಚಿಕರವಾಗಿರುತ್ತದೆ. ಈ ಪಲ್ಯವನ್ನು ಅನ್ನ , ರೊಟ್ಟಿ, ಚಪಾತಿ ಜೊತೆ ತಿನ್ನಬಹುದು.

ಆಲೂ ಪಾಲಾಕ್ ಪಲ್ಯ ಮಾಡುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ ನೋಡಿ:

Aloo Palak: Desi Recipe

ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ 3
ಪಾಲಾಕ್ 2 ಕಟ್ಟು
ಈರುಳ್ಳಿ 1
ಹಸಿ ಮೆಣಸಿನಕಾಯಿ 3
ಬೆಳ್ಳುಳ್ಳಿ ಎಸಳು 4-5
ಟೊಮೆಟೊ 1
ಅರಿಶಿಣ ಪುಡಿ 1/4 ಚಮಚ
ಖಾರಕ್ಕೆ ತಕ್ಕ ಖಾರದ ಪುಡಿ
ಸ್ವಲ್ಪ ಕೊತ್ತಂಬರಿ ಪುಡಿ
ಆಮ್ ಚೂರ್ 1/4 ಚಮಚ(ಹುಳಿಗೆ)
ಸ್ವಲ್ಪ ಕರಿ ಬೇವಿನ ಎಲೆ
ರುಚಿಗೆ ತಕ್ಕ ಉಪ್ಪು
ಜೀರಿಗೆ ಅರ್ಧ ಚಮಚ
ಎಣ್ಣೆ
ನೀರು

ತಯಾರಿಸುವ ವಿಧಾನ:

* ಪಾಲಾಕ್ ಸೊಪ್ಪನ್ನು ಸ್ವಚ್ಛ ಮಾಡಿ ಕತ್ತರಿಸಿಡಿ.

* ಆಲೂಗಡ್ಡೆ , ಈರುಳ್ಳಿ, ಟೊಮೆಟೊವನ್ನು ಚಿಕ್ಕದಾಗಿ ಕತ್ತರಿಸಿಡಿ.

* ಈಗ ಪಾತ್ರೆಯನ್ನು ಬಿಸಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ ನಂತರ ಬೆಳ್ಳುಳ್ಳಿ, ಕರಿ ಬೇವಿನ ಎಲೆ ಹಾಕಿ .

* ನಂತರ ಈರುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಟೊಮೆಟೊವನ್ನು ಹಾಕಿ, ಆಮ್ ಚೂರ್ ಹಾಕಿ. ಈಗ ಆಲೂಗಡ್ಡೆ ಮತ್ತು ಸೊಪ್ಪನ್ನು ಹಾಕಿ ಇದಕ್ಕೆ ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ರುಚಿಗೆ ತಕ್ಕ ಉಪ್ಪು ಹಾಕಿ ಫ್ರೈ ಮಾಡಿ.

* ಆಲೂಗಡ್ಡೆ ಬೆಂದ ಮೇಲೆ ಉಪ್ಪು ನೋಡಿ ಉರಿಯಿಂದ ಇಳಿಸಿದರೆ ಆಲೂ ಪಾಲಾಕ್ ಪಲ್ಯ ಮಾಡಿ.

X
Desktop Bottom Promotion