For Quick Alerts
ALLOW NOTIFICATIONS  
For Daily Alerts

ಆಲೂ ಕೋಫ್ತಾ ಸೈಡ್ ಡಿಶ್ ರೆಸಿಪಿ

|

ಭಾರತೀಯ ಪಾಕದಲ್ಲಿ ಆಲೂಗಡ್ಡೆಯನ್ನು ಹೆಚ್ಚಾಗಿ ಬಳಸುತ್ತಾರೆ. ಆಲೂಗಡ್ಡೆಯನ್ನು ಬಳಸಿಕೊಂಡು ವಿಧ ವಿಧದ ಸೈಡ್ ಡಿಶ್ ಅನ್ನು ತಯಾರಿಸಲಾಗುತ್ತದೆ. ಹಲವಾರು ಮನೆಗಳಲ್ಲಿ ಆಲೂಗಡ್ಡೆ ಹಾಕಿದರೆ ಮಾತ್ರ ಆ ಖಾದ್ಯ ಪರಿಪೂರ್ಣವಾಗುತ್ತದೆ ಎಂಬ ರೂಢಿ ಇದೆ. ಆಲೂ ಭಿಂಡಿ ಆಗಿರಲಿ ಅಥವಾ ಆಲೂ ಚಾಟ್ ಇರಲಿ ಮೇನ್ ಡಿಶ್ ಅಥವಾ ಸ್ನಾಕ್ಸ್‌ಗಳು ಆಲೂ ಇಲ್ಲದೆ ಅಸಂಪೂರ್ಣವಾಗುತ್ತದೆ.

ಆಲೂಗಡ್ಡೆ ಪ್ರೇಮಿಗಳಿಗೆ ಪ್ರಿಯವಾಗುವ ಸೈಡ್ ಡಿಶ್ ರೆಸಿಪಿಯನ್ನು ಇಂದು ಬೋಲ್ಡ್ ಸ್ಕೈ ನಿಮಗಾಗಿ ಉಣಬಡಿಸುತ್ತಿದೆ. ಸಸ್ಯಾಹಾರಿಗಳು ಬಾಯಲ್ಲಿ ನೀರೂರಿಸುವ ಈ ರೆಸಿಪಿಯಾದ ಕೋಫ್ತಾ ಮತ್ತು ಆಲೂ ಬೆರೆತ ಡಿಶ್ ಅನ್ನು ಸವಿಯಬಹುದು. ನಿಮ್ಮ ನಾಲಿಗೆಗೆ ರುಚಿಯ ಮತ್ತನ್ನು ಹಿಡಿಸುವ ಮತ್ತು ಇನ್ನಷ್ಟು ಬೇಕೆಂದು ಬಯಕೆ ಮೂಡಿಸುವ ಆಲೂ ಕೋಫ್ತಾ ರೆಸಿಪಿ ತಯಾರಿ ವಿಧಾನವಾಗಿ ಇಂದಿನ ಲೇಖನ. ಬನ್ನಿ ಮಾಡಲು ಸರಳವಾಗಿರುವ ಆಲೂ ಕೋಫ್ತಾ ರೆಸಿಪಿ ಸಾಮಾಗ್ರಿಗಳನ್ನು ಬರೆದುಕೊಂಡು ಒಂದು ಕೈ ನೋಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಕ್ಕಳ ವಿಶೇಷ ರೆಸಿಪಿ ಆಲೂ ಪೂರಿ!

Aloo Kofta: Side Dish Recipe

ಪ್ರಮಾಣ: 3
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 - 35 ನಿಮಿಷಗಳು

ಸಾಮಾಗ್ರಿಗಳು:

1. ಆಲೂಗಡ್ಡೆ - 6-7 (ಬೇಯಿಸಿದ್ದು ಮತ್ತು ಸಿಪ್ಪೆ ತೆಗೆದದ್ದು)
2.ಹಸಿಮೆಣಸು - 2-3 (ತುಂಡರಿಸಿದ್ದು)
3.ಶುಂಠಿ - 1 ಇಂಚು (ತುಂಡರಿಸಿದ್ದು)
4.ಟೊಮೇಟೋ - 2 (ಕತ್ತರಿಸಿದ್ದು)
5.ಅರಶಿನ ಹುಡಿ - 1 ಸ್ಪೂನ್
6.ಜೀರಿಗೆ ಹುಡಿ - 2 ಸ್ಪೂನ್
7.ಕೊತ್ತಂಬರಿ ಹುಡಿ - 2 ಸ್ಪೂನ್
8.ಮೆಣಸಿನ ಹುಡಿ - 2 ಸ್ಪೂನ್
9.ಕಾರ್ನ್‌ಫ್ಲೋರ್ - 2 ಸ್ಪೂನ್
10.ಸಕ್ಕರೆ - 1/2 ಕಪ್
11.ಗೇರುಬೀಜ ಪೇಸ್ಟ್ - 1 ಸ್ಪೂನ್
12.ದಾಲ್ಚಿನಿ - 1 ಸಣ್ಣ ಕಡ್ಡಿ
13.ಲವಂಗ - 2
14.ಉಪ್ಪು - ರುಚಿಗೆ ತಕ್ಕಷ್ಟು
15.ಎಣ್ಣೆ - 2 ಸ್ಪೂನ್
16.ನೀರು - 2 ಕಪ್‌ಗಳು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರುಚಿಯಾಗಿರುತ್ತೆ ಈ ಮೂಲಂಗಿ ಪಾಲಾಕ್ ಪಲ್ಯ

ಮಾಡುವ ವಿಧಾನ:

1.ಪಾತ್ರೆಯಲ್ಲಿ, ಬೇಯಿಸಿದ ಆಲೂಗಡ್ಡೆಯನ್ನು ಹಿಸುಕಿ. ಕಾರ್ನ್‌ಪ್ಲೋರ್, 1 ಸ್ಪೂನ್ ಮೆಣಸಿನ ಹುಡಿ, ಜೀರಿಗೆ ಹುಡಿ, ಕೊತ್ತಂಬರಿ ಹುಡಿಯನ್ನು ಮತ್ತು ಉಪ್ಪು ಸೇರಿಸಿ.

2.ನಿಮ್ಮ ಕೈಗಳನ್ನು ಒದ್ದೆ ಮಾಡಿಕೊಳ್ಳಿ ಮತ್ತು ಈ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಿಮಗೆ ಬೇಕಾದಲ್ಲಿ ಸ್ವಲ್ಪ ಕತ್ತರಿಸಿದ ಗೇರುಬೀಜ ಮತ್ತು ರೈಸಿನ್ಸ್ ಅನ್ನು ಸೇರಿಸಿ ಉಂಡೆಗಳನ್ನು ಸಿದ್ಧಪಡಿಸಬಹುದು.

3.ಇದೇ ಸಮಯದಲ್ಲಿ, ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಆಲೂ ಕೋಫ್ತಾ ಉಂಡೆಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ ಅವು ಸ್ವಲ್ಪ ಕಂದು ಬಣ್ಣಕ್ಕೆ ಬರಲಿ ಹಾಗೂ ಕ್ರಿಸ್ಪಿಯಾಗಿರಲಿ. ನೀವು ಹುರಿಯುವಾಗ ಆದಷ್ಟು ಉಂಡೆಗಳು ಹುಡಿಯಾಗದಂತೆ ನೋಡಿಕೊಳ್ಳಿ.

4.ಒಮ್ಮೆ ಕೋಫ್ತಾ ಬಾಲ್‌ಗಳನ್ನು ಹುರಿದ ನಂತರ ಕೋಫ್ತಾದಲ್ಲಿದ್ದ ಎಣ್ಣೆಯನ್ನು ಬಸಿದು ಪಕ್ಕಕ್ಕಿಡಿ.

5.ಫ್ಲೇಮ್ ಅನ್ನು ಕಡಿಮೆ ಮಾಡಿ ಮತ್ತು ದಾಲ್ಚಿನಿ, ಶುಂಠಿ, ಟೊಮೇಟೋ, ಗೇರು ಬೀಜ ಪೇಸ್ಟ್, ಲವಂಗ ಮತ್ತು ಸ್ವಲ್ಪ ಹೊತ್ತು ಹುರಿಯಿರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರುಚಿಯಾದ ಮಸಾಲೆ ಆಲೂ ರೆಸಿಪಿ

6.ಒಂದು ಸ್ಪೂನ್‌ನಷ್ಟು ಮೆಣಸಿನ ಹುಡಿಯನ್ನು, ಅರಶಿನ ಪುಡಿ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಸಕ್ಕರೆ ಸೇರಿಸಿ ಮಿಶ್ರ ಮಾಡಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಎಣ್ಣೆ ಬೇರ್ಪಡುವವರೆಗೆ ಹುರಿಯಿರಿ.

7.ಈಗ ನೀರನ್ನು ಹಾಕಿ 10 ನಿಮಿಷಗಳಿಗಾಗಿ ಗ್ಯಾಸ್ ಸಣ್ಣದು ಮಾಡಿ. ಕೋಫ್ತಾವನ್ನು ಸೇರಿಸಿ ಕುದಿಸಿಕೊಳ್ಳಿ. 5 ನಿಮಿಷದಷ್ಟು ಕಾಲ ಬೇಯಿಸಿ ಹಾಗೂ ಗ್ಯಾಸ್ ಆಫ್ ಮಾಡಿ.

ಆಲೂ ಕೋಫ್ತಾ ಸವಿಯಲು ಸಿದ್ಧಗೊಂಡಿದೆ. ಕ್ರೀಂನೊಂದಿಗೆ ಅಲಂಕರಿಸಿ ಬಿಸಿಯಾಗಿ ಬಡಿಸಿ.

English summary

Aloo Kofta: Side Dish Recipe

Aloo or potato is one of the most widely used vegetables in the Indian cuisine. A lot of side dishes are prepared using potatoes. In many households, a dish is incomplete without adding some potato.
Story first published: Friday, March 14, 2014, 16:01 [IST]
X
Desktop Bottom Promotion