For Quick Alerts
ALLOW NOTIFICATIONS  
For Daily Alerts

ಅಮ್ಮನ ಕೈರುಚಿಯ ವಿಶೇಷ ಖಾದ್ಯ ಆಲೂಗಡ್ಡೆ ಪಲ್ಯ

|

ಅಮ್ಮ ಮಾಡುವ ಪ್ರತಿಯೊಂದು ಖಾದ್ಯವೂ ರುಚಿಯಾಗಿರುತ್ತದೆ ಎಂಬುದನ್ನು ನೀವು ಗಮನಿಸಿದ್ದೀರಾ? ಆಕೆಯ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾದೀತೇ? ಅಮ್ಮನ ಕೈ ರುಚಿಯ ಅಡುಗೆ ವಿಶೇಷ ಸ್ವಾದವನ್ನು ಒಳಗೊಂಡಿರುತ್ತದೆ. ಆ ರುಚಿ ಯಾವುದೇ ಪಂಚತಾರಾ ಹೋಟೆಲ್‌ನ ಭವ್ಯ ತಿನಿಸಿಗೂ ಸಮನಾಗಿರುವುದಿಲ್ಲ ಎಂಬುದು ನಿಮ್ಮ ಗಮನಕ್ಕೆ ಬಂದಿದೆ ಅಲ್ಲವೇ?

ಆಕೆ ಮಾಡಿದ ಖಾದ್ಯದ ಸವಿ ನಮ್ಮ ಬಾಯಲ್ಲಿ ಹಾಗೆಯೇ ಇರುತ್ತದೆ ಎಂಬುದನ್ನು ನೀವು ಗಮನಿಸಿದ್ದೀರಾ? ಮಳೆಗಾಲದ ದಿನದಲ್ಲಿ ಅಮ್ಮ ಮಾಡುವ ಖಾದ್ಯಗಳು ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಅದರಲ್ಲೂ ಆಲೂಗಡ್ಡೆಯಿಂದ ಮಾಡುವ ಪಲ್ಯ ಎಂಬ ಖಾದ್ಯವಂತೂ ಪೂರಿಗೆ ಸಖತ್ ಸ್ವಾದವನ್ನು ನೀಡುತ್ತದೆ.

Aloo Kali Mirch Ka Chokha: Mom's Special Recipe

ಇಂದಿನ ಲೇಖನದಲ್ಲಿ ಅಮ್ಮ ಮಾಡಿಷ್ಟು ಸೊಗಸು ವಾತ್ಸಲ್ಯದ ಸವಿ ನಿಮಗೆ ಉಣಬಡಿಸುವ ಇದೇ ಖಾದ್ಯದಲ್ಲಿ ಇಲ್ಲದೇ ಹೋದರೂ ನಿಮಗೆ ತಯಾರಿ ವಿಧಾನವನ್ನು ನಾವಿಲ್ಲಿ ಹೇಳಿಕೊಡುತ್ತಿದ್ದೇವೆ. ಇಲ್ಲಿ ನಾವು ಆಲೂಗಡ್ಡೆ ಪಲ್ಯ ಮಾಡುವ ವಿಧಾನವನ್ನು ನೀಡಿದ್ದು ಸರಳವಾಗಿದೆ ಮತ್ತು ನಿಮ್ಮ ನಾಲಗೆಯ ಹಸಿವನ್ನು ಈ ಖಾದ್ಯ ತಣಿಸುವುದಂತೂ ಗ್ಯಾರಂಟಿ.

ಹಾಗಿದ್ದರೆ ಇಲ್ಲಿ ನಾವು ನೀಡಿರುವ ತಯಾರಿ ವಿಧಾನವನ್ನು ಬರೆದುಕೊಳ್ಳಿ ಮತ್ತು ಮಾಡುವ ಸರಳ ವಿಧಾನವನ್ನು ಅನುಸರಿಸಿ ಖಂಡಿತ ನಳ ಮಹಾರಾಜನೂ ಭೇಷ್ ಎನ್ನುವಂತಹ ಬಾಣಸಿಗರು ನೀವಾಗುತ್ತೀರಿ.

ಆಲೂ ಪಾಲಾಕ್ ಪಲ್ಯದ ರೆಸಿಪಿ

ಪ್ರಮಾಣ: 2
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು
1.ಆಲೂಗಡ್ಡೆ - 4
2.ಕಾಳುಮೆಣಸು - ಸ್ವಲ್ಪ (ಜಜ್ಜಿದ್ದು)
3.ಹಸಿಮೆಣಸು - 2 (ಕತ್ತರಿಸಿದ್ದು)
4.ಮೆಂತೆ ಬೀಜಗಳು - 1/2 ಚಮಚ
5.ಅರಶಿನ - 1/2 ಚಮಚ
6.ತುಪ್ಪ - 2 ಚಮಚ
7.ಉಪ್ಪು - ರುಚಿಗೆ ತಕ್ಕಷ್ಟು
8. ಸಕ್ಕರೆ - 1/2 ಚಮಚ

ತೂಕ ಇಳಿಕೆಗಾಗಿ ಆಲೂಗಡ್ಡೆ ಮತ್ತು ಬೆಳ್ಳುಳ್ಳಿ ಸಲಾಡ್

ಮಾಡುವ ವಿಧಾನ
*ಮೊದಲಿಗೆ ಆಲೂಗಡ್ಡೆಯನ್ನು ಕುಕ್ಕರ್‌ನಲ್ಲಿ 2 ವಿಶಲ್‌ ಬರುವವರೆಗೆ ಬೇಯಿಸಿಕೊಳ್ಳಿ.
*ಸಿಪ್ಪೆಯನ್ನು ತೆಗೆದು ಇದನ್ನು ಚೆನ್ನಾಗಿ ಹಿಸುಕಿ.
*ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಳ್ಳಿ ಇದಕ್ಕೆ ಮೆಂತೆ, ಹುಡಿಮಾಡಿದ ಕಾಳುಮೆಣಸು ಮತ್ತು ಹಸಿಮೆಣಸನ್ನು ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ.
*ಇನ್ನು ಬೇಯಿಸಿದ ಆಲೂಗಡ್ಡೆಯನ್ನು ಇದಕ್ಕೆ ಸೇರಿಸಿ, ಮತ್ತು 2 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಇದನ್ನು ಬೇಯಿಸಿಕೊಳ್ಳಿ.
*ತದನಂತರ ಹುಡಿಮಾಡಿದ ಕಾಳುಮೆಣಸನ್ನು ಇದರ ಮೇಲೆ ಚಿಮುಕಿಸಿ ಹಾಗೂ ಇದಕ್ಕೆ ಉಪ್ಪು ಮತ್ತು ಅರಶಿನ ಹಾಕಿ.
*ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಮತ್ತು ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ರುಚಿಯನ್ನು ನಿಯಂತ್ರಿಸಿಕೊಳ್ಳಲು ಸ್ವಲ್ಪ ಸಕ್ಕರೆಯನ್ನು ಇದಕ್ಕೆ ಸೇರಿಸಿ.

ಬಿಸಿಯಾದ ಪೂರಿಯೊಂದಿಗೆ ಈ ಆಲೂಗಡ್ಡೆ ಪಲ್ಯ ಸವಿಯಲು ನಿಮ್ಮ ನಾಲಿಗೆ ಬಯಸುವುದು ಖಂಡಿತ.

English summary

Aloo Kali Mirch Ka Chokha: Mom's Special Recipe

Most of the dishes that were cooked in our mom's kitchen were not complicated. But you can still feel the taste of these quintessential recipes in your mouth. If you are getting nostalgic about home, then we have something to tickle your taste buds.
Story first published: Tuesday, July 15, 2014, 12:55 [IST]
X
Desktop Bottom Promotion