For Quick Alerts
ALLOW NOTIFICATIONS  
For Daily Alerts

ಆಲೂ ಜೀರಾ ಪಲ್ಯ-ವ್ರತ ಸ್ಪೆಷಲ್ ರೆಸಿಪಿ

|

ಸಂಕಷ್ಟಿ, ಕೃಷ್ಣ ಜನ್ಮಾಷ್ಟಮಿ ಹಾಗೂ ಇನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಉಪವಾಸ ಮಾಡುವವರು ಆ ದಿನ ಪ್ರತ್ಯೇಕವಾದ ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಕೆಲವರು ರಾತ್ರಿಯವರೆಗೆ ಏನೂ ಮುಟ್ಟುವುದಿಲ್ಲ, ಮತ್ತೆ ಕೆಲವರು ಹಾಲು, ಹಣ್ಣು ಮಾತ್ರ ಆ ದಿನ ತಿನ್ನುತ್ತಾರೆ. ಇನ್ನು ಕೆಲವರು ಅಕ್ಕಿಯಿಂದ ಮಾಡಿದ ಪದಾರ್ಥಗಳು ಮತ್ತು ಈರುಳ್ಳಿ - ಬೆಳ್ಳುಳ್ಳಿ ಹಾಕಿದ ಪದಾರ್ಥಗಳನ್ನು ಬಿಟ್ಟು ಉಪವಾಸದ ದಿನದ ವ್ರತ ಸ್ಪೆಷಲ್ ಆಹಾರ ಮಾಡಿ ತಿನ್ನುತ್ತಾರೆ.

ಹೀಗೆ ವ್ರತ ಮಾಡುವವರು ತಿನ್ನ ಬಹುದಾದ ಆಹಾರಗಳಲ್ಲಿ ಆಲೂ ಜೀರಾ ಪಲ್ಯ ಕೂಡ ಒಂದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Aloo Jeera Recipe- Vrata Special

ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ 5
ಜೀರಿಗೆ ಒಂದೂವರೆ ಚಮಚ
ಚಿಟಿಕೆಯಷ್ಟು ಇಂಗು
ಜಜ್ಜಿದ ಶುಂಠಿ 1 ಚಮಚ
ಹಸಿ ಮೆಣಸಿನಕಾಯಿ 2
ಕೊತ್ತಂಬರಿ ಪುಡಿ ಒಂದೂವರೆ ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಖಾರದ ಪುಡಿ 1 ಚಮಚ
ಒಣ ಮಾವಿನಕಾಯಿ ಪುಡಿ 1 ಚಮಚ(dry mango powder)
ಎಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ ಕತ್ತರಿಸಿಡಿ.

* ಈಗ ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಜೀರಿಗೆ ಹಾಕಿ, ಅದು ಚಟಾಪಟಾ ಶಬ್ದ ಮಾಡುವಾಗ ಅದರಲ್ಲಿ ಇಂಗು ಹಾಕಿ ಹಾಕಿ, ನಂತರ ಶುಂಠಿ ಮತ್ತು ಹಸಿ ಮೆಣಸಿನಕಾಯಿ 2-3 ನಿಮಿಷ ಫ್ರೈ ಮಾಡಿ.

* ನಂತರ ಉರಿಯನ್ನು ಕಮ್ಮಿ ಮಾಡಿ ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಒಣ ಮಾವಿನ ಪುಡಿ, ಖಾರದ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ, ನಂತರ ಕತ್ತರಿಸಿದ ಆಲೂಗಡ್ಡೆ ಹಾಕಿ 5 ನಿಮಿಷ ಫ್ರೈ ಮಾಡಿ ಉರಿಯಿಂದ ಇಳಿಸಿದರೆ ಆಲೂ ಜೀರಾ ಪಲ್ಯ ರೆಡಿ.

English summary

Aloo Jeera Recipe- Vrata Special

This aloo jeera recipe is easy to make and not time consuming. The aloo jeera is a side dish which can be combined with any main course. It will only add more variety to your meals.Let see how to make this vrata recipe.
X
Desktop Bottom Promotion