For Quick Alerts
ALLOW NOTIFICATIONS  
For Daily Alerts

ಆಲೂಗೋಬಿ ಡ್ರೈ ರೆಸಿಪಿ

|

ಆಲೂ ಗೋಬಿ ಡ್ರೈ ತುಂಬಾ ಸರಳವಾದ ರೆಸಿಪಿಯಾಗಿದೆ. ಈ ಆಲೂಗೋಬಿ ಡ್ರೈಯನ್ನು ಅನೇಕ ಬಗೆಯಲ್ಲಿ ತಯಾರಿಸಬಹುದು. ಮಾಡುವ ವಿಧಾನ ಬೇರೆ-ಬೇರೆಯಾಗಿದ್ದರೆ ರುಚಿಯೂ ಭಿನ್ನವಾಗಿರುತ್ತದೆ. ನೀವು ಮಾಡುತ್ತಿರುವ ಆಲೂ ಗೋಬಿ ಡ್ರೈಗಿಂತ ಭಿನ್ನ ರುಚಿಯ ಆಲೂಗೋಬಿ ಟೇಸ್ಟ್ ಮಾಡಲು ರೆಡಿನಾ?

ಹಾಗಾದರೆ ಈ ರೆಸಿಪಿಯನ್ನು ಟ್ರೈ ಮಾಡಿ:

Aloo Gobi Dry Recipe

ಬೇಕಾಗುವ ಸಾಮಾಗ್ರಿಗಳು
ಹೂಕೋಸು 1
ಆಲೂಗಡ್ಡೆ3
ಬಟಾಣಿ 1 ಕಪ್
ಈರುಳ್ಳಿ1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಟೊಮೆಟೊ 2(ಕತ್ತರಿಸಿದ್ದು)
ಜೀರಿಗೆ 1 ಚಮಚ
ಸ್ವಲ್ಪ ಕರಿಬೇವು
ಚಿಟಿಕೆಯಷ್ಟು ಇಂಗು
ಅರಿಶಿಣ ಪುಡಿ 1 ಚಮಚ
ಖಾರದ ಪುಡಿ 1 ಚಮಚ
ಕೊತ್ತಂಬರಿ ಪುಡಿ 2 ಚಮಚ
ಒಣ ಮಾವಿನಕಾಯಿ ಪುಡಿ 1 ಚಮಚ
ಗರಂ ಮಸಾಲ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ
ಕೊತ್ತಂಬರಿ ಸೊಪ್ಪು 2 ಚಮಚ
ನೀರು ಅರ್ಧ ಕಪ್

ಮಾಡುವ ವಿಧಾನ:

* ಹೂಕೋಸನ್ನು ಸ್ಚಚ್ಛ ಮಾಡಿ ಬಿಸಿ ನೀರಿನಲ್ಲಿ ಹಾಕಿ, ಆಲೂಗಡ್ಡೆಯನ್ನು ತೊಳೆದು ಕತ್ತರಿಸಿ ನೀರಿನಲ್ಲಿ ಹಾಕಿಡಿ.

* ಈಗ ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಅದರಲ್ಲಿ ಜೀರಿಗೆ ಹಾಕಿ, ನಂತರ ಕರಿಬೇವಿನ ಎಲೆ ಮತ್ತು ಇಂಗು ಒಂದು ನಿಮಿಷದ ಬಳಿಕ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಫ್ರೈ ಮಾಡಿ.

* ನಂತರ ಟೊಮೆಟೊ ಹಾಕಿ, ಅರಿಶಿಣ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಒಣ ಮಾವಿನ ಕಾಯಿ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ರುಚಿಗೆ ತಕ್ಕ ಉಪ್ಪು ಹಾಕಿ 2-3 ನಿಮಿಷ ಫ್ರೈ ಮಾಡಿ, ನಂತರ ಹೂಕೋಸು ಮತ್ತು ಆಲೂಗಡ್ಡೆ, ಬಟಾಣಿ ಹಾಕಿ ಮತ್ತೆ 5 ನಿಮಿಷ ಫ್ರೈ ಮಾಡಿ. ನಂತರ ಬೇಯಲು ತಕ್ಕ ನೀರು ಹಾಕಿ(ಒಂದು ಕಪ್ ಸಾಕು) ಪಾತ್ರೆಯ ಬಾಯಿ ಮುಚ್ಚಿ 10 ನಿಮಿಷ ಬೇಯಿಸಿ.

* ನಂತರ ಪಾತ್ರೆಯ ಮುಚ್ಚಳ ತೆಗೆದು ಮಿಶ್ರಣ ಡ್ರೈಯಾಗುವವರೆಗೆ ಫ್ರೈ ಮಾಡಬೇಕು. ನಂತರ ಅದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಆಲೂ ಗೋಬಿ ಡ್ರೈ ರೆಡಿ.

English summary

Aloo Gobi Dry Recipe

Here is a simple vegetarian recipe of aloo gobi masala. This recipe can be prepared in a variety of ways. The use of dry mango powder adds the tangy kick which makes this dish all the more delectable.
X
Desktop Bottom Promotion