For Quick Alerts
ALLOW NOTIFICATIONS  
For Daily Alerts

ನವರಾತ್ರಿಗೆ ಇರಲಿ ರಾಜ್ಮ ಮಸಾಲದ ಗಮ್ಮತ್ತು

By Staff
|

ನವರಾತ್ರಿ ಹಬ್ಬಕ್ಕೆ ಮನೆಯಲ್ಲಿ ಮಾಡುವ ರುಚಿರುಚಿಯಾದ ಅಮ್ಮ ಅಥವಾ ಅಜ್ಜಿ ಮಾಡುತ್ತಿದ್ದ ತಿಂಡಿ ನೆನೆಸಿಕೊಂಡರನೆ ಬಾಯಾಲಿ ನೀರೂರುತ್ತದೆ. ರಾಜ್ಮ ಮಸಾಲ ಕೂಡ ಅದರಲ್ಲೊಂದು. ಈ ರಾಜ್ಮ ಮಸಾಲ ಮಾಡುವ ವಿಧಾನ ಸುಲಭವಾಗಿದೆ.

ಬೇಕಾಗುವ ಸಾಮಾಗ್ರಿಗಳು

1. ರಾಜ್ಮ ಅಥವಾ ಕಿಡ್ನಿ ಬೀನ್ಸ್ (ನೀರಿನಲ್ಲಿ ನೆನೆ ಹಾಕಿದ್ದು)
2. ಕತ್ತರಿಸಿದ ಈರುಳ್ಳಿ 2
3.ಕತ್ತರಿಸಿದ ಟೊಮೆಟೋ 1
4. 5 ಎಸಳು ಬೆಳ್ಳುಳ್ಳಿ
5. ಶುಂಠಿ (ಒಂದು ಇಂಚಿನಷ್ಟು)
6. ಕತ್ತರಿಸಿದ ಹಸಿಮೆಣಸು 4
7. ಆಮ್ ಚೂರ್ ಅಥವಾ ಒಣಗಿದ ಮಾವಿನ ಹಣ್ಣಿನ ಪುಡಿ 2 ಚಮಚ
8. ಕೆಂಪು ಮೆಣಸಿನ ಪುಡಿ 1 ಚಮಚ
9. ಜೀರಿಗೆ 1 ಚಮಚ
10. ಧನಿಯಾ ಪುಡಿ ಚಮಚ
11. ಗರಂ ಮಸಾಲ ಪುಡಿ ( ಕರಿಮೆಣಸು, ಬೆಳ್ಳುಳ್ಳಿ, ಏಲಕ್ಕಿ, ಚಕ್ಕೆ, ಚಕ್ರಮೊಗ್ಗು)
12. ಜೀರಿಗೆ 1 ಚಮಚ
13 ಕೊತ್ತಂಬರಿ ಸೊಪ್ಪು
14 ಪಲಾವ್ ಎಲೆ
15 ಎಣ್ಣೆ 2 ಚಮಚ
16 ತುಪ್ಪ 1 ಚಮಚ
17 ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

1. ರಾಜ್ಮವನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಹಾಕಿ. ಏಕೆಂದರೆ ನೆನೆ ಹಾಕಿದ ನೀರನ್ನು ಅಡುಗೆಯಲ್ಲಿ ಬಳಸುವುದು.
2. ಈರುಳ್ಳಿ, ಶುಂಠಿ, ಟೊಮೆಟೋ, ಹಸಿಮೆಣಸುಗಳನ್ನು ಹೆಚ್ಚಿ ಇಟ್ಟುಕೊಳ್ಳಿ.
3. ಪ್ರೆಶರ್ ಕುಕ್ಕರಿನಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಪಲಾವ್ ಎಲೆ ಮತ್ತು ಜೀರಿಗೆ ಹಾಕಿ ಬಿಸಿ ಮಾಡಿ.
4. ಅದಕ್ಕೆ ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ಬರುವ ಹಾಗೆ ಹುರಿಯಿರಿ.ನಂತರ ಬೆಳ್ಳುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಸ್ವಲ್ಪ ಬೇಯಿಸಿ.
5. ಅದಕ್ಕೆ ಟೊಮೆಟೋ ಹಾಕಿ, ರುಚಿಗೆ ತಕ್ಕ ಉಪ್ಪು ಬೆರೆಸಿ ಹದವಾದ ಉರಿಯಲ್ಲಿ 2-3 ನಿಮಿಷ ಕಾಲ ಬೇಯಿಸಿ
6. ಈಗ ಕೆಂಪು ಮೆಣಸಿನ ಪುಡಿ, ಮಾವಿನ ಹಣ್ಣಿನ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಹಾಗೂ ಹಸಿಮೆಣಸನ್ನು ಹಾಕಿ 2-3 ನಿಮಿಷ ಕಾಲ ಸಣ್ಣ ಉರಿಯಲ್ಲಿ ಬಿಸಿ ಮಾಡಿ.
7. ಈಗ ರಾಜ್ಮ ಅಥವಾ ಕಿಡ್ನಿ ಬೀನ್ಸ್ ಹಾಕಿ 2 ಕಪ್ ರಾಜ್ಮ ಮುಳುಗಿಸಿಟ್ಟ ನೀರನ್ನು ಸೇರಿಸಿ.
8. ನಂತರ ಗರಂ ಮಸಾಲ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ, ಪ್ರೆಶರ್ ಕುಕ್ಕರಿನಲ್ಲಿ 3 ವಿಶಲ್ ಬಂದ ಮೇಲೆ ಅದನ್ನು ಇಳಿಸಿ.
9. ಅದನ್ನು ಬಡಿಸುವುದಕ್ಕೆ ಮೊದಲು ಬಿಸಿ ತುಪ್ಪ ಕಾಕಿ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ. ಈಗ ರಾಜ್ಮ ಮಸಾಲ ರೆಡಿ.

English summary

Recipe For Rajma Masala | Special Food For Navarathri | ರಾಜ್ಮ ಮಸಾಲ ರೆಸಿಪಿ | ನವರಾತ್ರಿಗೆ ವಿಶೇಷ ಅಡುಗೆ

Rajma masala is a special Navaratri recipe. This recipe is easy and quick to prepare.The ingredients are less complicated and the procedure simplified to make it quick. Here is the method to prepare Rajma masala.
X
Desktop Bottom Promotion