For Quick Alerts
ALLOW NOTIFICATIONS  
For Daily Alerts

ಬೇಯಿಸಿದ ಬಾಳೆಕಾಯಿ ರಾಯತ

By * ನಿವೇದಿತಾ ಪ್ರಭಾಕರ್, ಬೆಂಗಳೂರು
|
Raw banana
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದ ಬಳಿ ಮಾಡುವ ಮೈದಾ ಹಿಟ್ಟಿನ ರಾಯತದಂತೆ ಬಿಸಿಬಿಸಿ ಅನ್ನ ಮತ್ತು ತುಪ್ಪದೊಡನೆ ಬೇಯಿಸಿದ ಬಾಳೆಕಾಯಿ ರಾಯತವನ್ನು ಬೆರೆಸಿ ತಿನ್ನಬಹುದು.

ಬೇಕಾಗುವ ಪದಾರ್ಥಗಳು

ಬಾಳೆಕಾಯಿ 4ರಿಂದ 5
ತೆಂಗಿನಕಾಯಿ ತುರಿ ಅರ್ಧ ಬಟ್ಟಲು
ಹಸಿ ಮೆಣಸಿನಕಾಯಿ 4
ಒಣ ಮೆಣಸಿನಕಾಯಿ 3
ಅರಿಷಿಣ
ಸಾಸಿವೆ
ಕಡಲೆಕಾಯಿ ಎಣ್ಣೆ ನಾಲ್ಕು ಚಮಚ
ಕರಿಬೇವು

ಮಾಡುವ ವಿಧಾನ

ಬಾಳೆಕಾಯಿ ಸಿಪ್ಪೆ ಸುಲಿದು ಕಾಯಿಯನ್ನು ಗಾಲಿಗಾಲಿಯಾಗಿ ಹೆಚ್ಚಿಟ್ಟುಕೊಳ್ಳಬೇಕು. ಅವುಗಳನ್ನು ಕುಕ್ಕರಿನಲ್ಲಿಟ್ಟು ನೀರು ಮತ್ತು ಚಿಟಿಕೆ ಉಪ್ಪು ಸೇರಿಸಿ ಒಂದು ಸೀಟಿ ಹೊಡೆಯುವರೆಗೆ ಬೇಯಿಸಿಟ್ಟುಕೊಳ್ಳಿ. ಬಾಳೆಕಾಯಿ ಸಿಕ್ಕಾಪ್ಟಟೆ ಮೆತ್ತಗೆ ರಾಡಿಯಾಗದಂತೆ ಬೇಯಿಸಿಕೊಳ್ಳಿ.

ನಂತರ ತುರಿದ ತೆಂಗಿನಕಾಯಿ, ಹಸಿಮೆಣಸಿನಕಾಯಿ, ಬೇಕಿದ್ದರೆ ಎರಡು ಬೇಳೆ ಬೆಳ್ಳುಳ್ಳಿಯನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ನೀರು ಹಾಕುವುದೇನೂ ಬೇಡ.

ಇದೆಲ್ಲ ಮುಗಿದ ನಂತರ ಒಂದು ಬಾಣಲೆಯಲ್ಲಿ ನಾಲ್ಕು ಚಮಚ ಕಡಲೆಕಾಯಿ ಎಣ್ಣೆ ಹಾಕಿ ತುಸುಬಿಸಿಯಾದ ಮೇಲೆ ಸಾಸಿವೆ, ಅರಿಷಿಣ, ಕರಿಬೇವು ಹಾಕಿ, ಅದಕ್ಕೆ ರುಬ್ಬಿಕೊಂಡ ತೆಂಗಿನತುರಿ ಮತ್ತು ಬೇಯಿಸಿಕೊಂಡ ಬಾಳೆಕಾಯಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಐದು ನಿಮಿಷ ಮತ್ತೆ ಕುದಿಸಿಕೊಳ್ಳಿ.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದ ಬಳಿ ಮಾಡುವ ಮೈದಾ ಹಿಟ್ಟಿನ ರಾಯತದಂತೆ ಬಿಸಿಬಿಸಿ ಅನ್ನ ಮತ್ತು ತುಪ್ಪದೊಡನೆ ಬೆರೆಸಿ ತಿನ್ನಬಹುದು.

Story first published: Wednesday, January 20, 2010, 16:05 [IST]
X
Desktop Bottom Promotion