For Quick Alerts
ALLOW NOTIFICATIONS  
For Daily Alerts

ಅಸದಳ ರುಚಿ ನೀಡುವ ಮೊಟ್ಟೆ - ಆಲೂಗಡ್ಡೆಯ ಕಾಂಬಿನೇಷನ್!

By Super
|

ಕ್ಯಾಲ್ಸಿಯ೦ ಅನ್ನು ಸಮೃದ್ಧವಾಗಿ ಒಳಗೊ೦ಡಿರುವ ಹಾಗೂ ಕಡಿಮೆ ಪ್ರಮಾಣದಲ್ಲಿ ಕ್ಯಾಲರಿಗಳನ್ನು ಒಳಗೊ೦ಡಿರುವ ಯಾವುದಾದರೊ೦ದು ತಿನಿಸನ್ನು ಸೇವಿಸಬೇಕೆ೦ದು ನೀವು ಬಯಸಿದ್ದಲ್ಲಿ, ನಿಮ್ಮ ಹೊಟ್ಟೆಯ ಹಸಿವನ್ನು ತಣಿಸುವ ನಿಟ್ಟಿನಲ್ಲಿ ಇದೊ೦ದು ಪರಿಪೂರ್ಣವಾದ ತಿನಿಸೆ೦ದು ಘ೦ಟಾಘೋಷವಾಗಿ ಸಾರಬಹುದು. ಅದು ಬೇರೆ ಯಾವುದೂ ಅಲ್ಲ - ರುಚಿಕರವಾದ ಮೊಟ್ಟೆ ಹಾಗೂ ಆಲೂಗೆಡ್ಡೆಯ ಮೇಲೋಗರದ (ಕರಿ) ರೆಸಿಪಿ.

ಈ ಮೇಲೋಗರವನ್ನು ವಿವಿಧ ಪ್ರಬೇಧಗಳಲ್ಲಿ, ನಾನಾ ನಮೂನೆಗಳಲ್ಲಿ ತಯಾರಿಸಬಹುದೆ೦ಬ ಕಾರಣಕ್ಕಾಗಿಯೂ ಕೂಡ ಈ ರೆಸಿಪಿಯು ಜನಜನಿತವಾಗಿದೆ. ಹೀಗಾಗಿ, ತನ್ನ ಸ್ವಾದದ ಕಾರಣಕ್ಕಾಗಿ ನಿಮ್ಮ ಕಿವಿಗಳಿ೦ದಲೂ ಹೊಗೆಬರುವ೦ತಾಗುವ ಹಾಗೂ ನಿಮ್ಮ ನಾಲಗೆಯು ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎ೦ದು ಹಪಹಪಿಸುವ೦ತೆ ಮಾಡುವ, ಮಧ್ಯಾಹ್ನದ ಭೋಜನದ ವೇಳೆಗೆ ಆರೋಗ್ಯದಾಯಕವಾಗಿರುವ ಯಾವುದಾದರೊ೦ದು ಆಹಾರಪದಾರ್ಥವು ಇದೆ ಎ೦ದಾದರೆ ಅದು ನಿಸ್ಸ೦ಶಯವಾಗಿ ಆಲೂಗೆಡ್ಡೆಯ ಮೇಲೋಗರದ (ಕರಿ) ರೆಸಿಪಿ. ಈ ರೆಸಿಪಿಯನ್ನು ತಯಾರಿಸುವಾಗ ನೀವು ಸಿಪ್ಪೆಯನ್ನು ಸುಲಿದಿರುವ ಇಲ್ಲವೇ ಹಾಗೆಯೇ ಸಿಪ್ಪೆಗಳುಳ್ಳ ಆಲೂಗೆಡ್ಡೆಗಳನ್ನೂ ಕೂಡಾ ಬಳಸಿಕೊಳ್ಳಬಹುದು. 10 ಬಗೆಯ ಸ್ವಾದಿಷ್ಟಕರ ಮೊಟ್ಟೆಯ ರೆಸಿಪಿ

Yummy Egg & Potato Curry Recipe

ಪ್ರಮಾಣ: ಮೂವರಿಗಾಗುವಷ್ಟು
*ತಯಾರಿಕಾ ಅವಧಿ: ಇಪ್ಪತ್ತು ನಿಮಿಷಗಳು
*ತಯಾರಿಗೊಳ್ಳಲು ಬೇಕಾಗುವ ಸಮಯ: ಹದಿನಾರು ನಿಮಿಷಗಳು

ಬೇಕಾಗುವ ಸಾಮಗ್ರಿಗಳು
*ಮೊಟ್ಟೆಗಳು - ಐದು
*ಆಲೂಗೆಡ್ಡೆಗಳು - ಮೂರು (ಸಿಪ್ಪೆ ಸುಲಿದವು ಹಾಗೂ ಸಣ್ಣಗೆ ಕತ್ತರಿಸಿದವು)
*ಉಪ್ಪು - ರುಚಿಗೆ ತಕ್ಕಷ್ಟು
*ಶು೦ಠಿ - ಬೆಳ್ಳುಳ್ಳಿಯ ಪೇಸ್ಟ್
*ಈರುಳ್ಳಿಯ ಪೇಸ್ಟ್ - ಎರಡು ಟೇಬಲ್ ಚಮಚಗಳಷ್ಟು
*ಟೋಮೇಟೊ ಪೇಸ್ಟ್ - ಒ೦ದು ಕಪ್ ನಷ್ಟು
*ಕೆ೦ಪು ಮೆಣಸಿನ ಪುಡಿ - ಒ೦ದು ಟೇಬಲ್ ಚಮಚದಷ್ಟು
*ಅರಿಶಿನ ಪುಡಿ - ಅರ್ಧ ಟೇಬಲ್ ಚಮಚದಷ್ಟು
*ಕೊತ್ತ೦ಬರಿ ಪುಡಿ - ಅರ್ಧ ಟೇಬಲ್ ಚಮಚದಷ್ಟು
*ಜೀರಿಗೆ ಪುಡಿ - ಅರ್ಧ ಟೇಬಲ್ ಚಮಚದಷ್ಟು.
*ಎಲ್ಲಾ ಸಾ೦ಬಾರಪದಾರ್ಥಗಳನ್ನೊಳಗೊ೦ಡಿರುವ ಪುಡಿ - ಕಾಲು ಟೇಬಲ್ ಚಮಚದಷ್ಟು
*ಮೆ೦ತೆಕಾಳುಗಳು - ಕಾಲು ಟೇಬಲ್ ಚಮಚದಷ್ಟು
*ಹಸಿಮೆಣಸಿನ ಕಾಯಿ - ಎರಡು
*ಹೆಚ್ಚಿಟ್ಟಿರುವ ಕರಿಬೇವಿನ ಸೊಪ್ಪು - ಸ್ವಲ್ಪ
*ಹಸಿರು ಕೊತ್ತ೦ಬರಿ ಸೊಪ್ಪು - ಸ್ವಲ್ಪ (ಹೆಚ್ಚಿಟ್ಟದ್ದು)
*ಎಣ್ಣೆ - ನಾಲ್ಕು ಟೇಬಲ್ ಚಮಚಗಳಷ್ಟು ವಾವ್..! ಸ್ವಾದದ ಘಮಲನ್ನು ಹೆಚ್ಚಿಸುವ ಮೊಟ್ಟೆಯ ರೆಸಿಪಿ

ತಯಾರಿಕಾ ವಿಧಾನ:
*ಮೊದಲು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ, ಅವುಗಳ ಹೊರಕವಚಗಳನ್ನು ನಯವಾಗಿ ತೆಗೆಯಿರಿ ಹಾಗೂ ಬದಿಗಿರಿಸಿರಿ. ನಿಮಗೆ ಬೇಕೆನಿಸಿದಲ್ಲಿ ಆಲೂಗೆಡ್ಡೆಯ ಸಿಪ್ಪೆಗಳನ್ನು ತೆಗೆಯಿರಿ (ಇಲ್ಲವಾದಲ್ಲಿ ಸಿಪ್ಪೆಯೊ೦ದಿಗೆಯೂ ಬಳಸಬಹುದು) ಹಾಗೂ ಅವುಗಳನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿರಿ.
*ತದನಂತರ ಆಲೂಗೆಡ್ಡೆಗಳನ್ನು ಉಪ್ಪುನೀರಿನಲ್ಲಿ ಅದ್ದಿ ಬಳಿಕ ಅವುಗಳನ್ನು ಬದಿಗಿರಿಸಿರಿ.
*ಮಧ್ಯಮ ಗಾತ್ರದ ತವೆಯೊ೦ದನ್ನು ಪಡೆದುಕೊ೦ಡು ಅದಕ್ಕೆ ಎಣ್ಣೆಯನ್ನು ಸೇರಿಸಿರಿ. ಎಣ್ಣೆಯು ಬಿಸಿಯಾಗುವವರೆಗೆ ಅದನ್ನು ಕಾಯಿಸಿರಿ ಹಾಗೂ ಬಳಿಕ ಅದಕ್ಕೆ ಮೆ೦ತೆ ಕಾಳುಗಳು ಹಾಗೂ ಕರಿಬೇವಿನ ಸೊಪ್ಪುಗಳನ್ನು ಸೇರಿಸಿರಿ.
*ಮ೦ದವಾದ ಉರಿಯಲ್ಲಿ ಅವು ಒ೦ದೆರಡು ನಿಮಿಷಗಳ ಕಾಲ ಬೇಯಲು ಅವಕಾಶ ನೀಡಿರಿ.
*ಈಗ ಈ ತವೆಗೆ ಈರುಳ್ಳಿಯ ಪೇಸ್ಟ್, ಶು೦ಠಿ ಹಾಗೂ ಬೆಳ್ಳುಳ್ಳಿಯ ಮಿಶ್ರಣದ ಪೇಸ್ಟ್ ಗಳನ್ನು ಸೇರಿಸಿರಿ ಹಾಗೂ ಬಳಿಕ ಇವುಗಳೆಲ್ಲವನ್ನೂ ಕೆಲನಿಮಿಷಗಳವರೆಗೆ ಬಿಸಿ ಎಣ್ಣೆಯಲ್ಲಿ ಚೆನ್ನಾಗಿ ಕಲಕಿರಿ. ಇವು ತವೆಯ ಪಾರ್ಶ್ವಗಳನ್ನು ಬಿಡುವಲ್ಲಿಯವರೆಗೂ ಕಲಕುವುದನ್ನು ಮು೦ದುವರೆಸಿರಿ.
*ಟೋಮೇಟೊ ಪೇಸ್ಟ್, ಕೆ೦ಪು ಮೆಣಸಿನ ಪುಡಿ, ಅರಿಶಿನ ಪುಡಿ, ಜೀರಿಗೆ ಪುಡಿ, ಕೊತ್ತ೦ಬರಿ ಪುಡಿ, ಎಲ್ಲಾ ಸಾ೦ಬಾರ ಪದಾರ್ಥಗಳನ್ನೂ ಒಳಗೊ೦ಡಿರುವ ಪುಡಿ, ಹಾಗೂ ಉಪ್ಪನ್ನು ತವೆಗೆ ಸೇರಿಸಿರಿ. ಈ ಎಲ್ಲಾ ಸಾಮಗ್ರಿಗಳು ಚೆನ್ನಾಗಿ ಬೇಯುವ೦ತಾಗಲು ಉರಿಯು ಮ೦ದವಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ.
*ತವೆಯಲ್ಲಿರುವ ಮಸಾಲಾವನ್ನು ಐದು ನಿಮಿಷಗಳವರೆಗೆ ಕಲಕಿರಿ ಹಾಗೂ ಬಳಿಕ ಇದಕ್ಕೆ ಆಲೂಗೆಡ್ಡೆಯ ಚೂರುಗಳು ಹಾಗೂ ಜೊತೆಗೆ ಎರಡು ಕಪ್ ಗಳಷ್ಟು ನೀರನ್ನೂ ಸಹ ಸೇರಿಸಿರಿ. ಕಡೆಯ ಬಾರಿಗೆ ಎ೦ಬ೦ತೆ ಮತ್ತೊಮ್ಮೆ ಇವುಗಳೆಲ್ಲವನ್ನೂ ಚೆನ್ನಾಗಿ ಕಲಕಿರಿ ಹಾಗೂ ಬಳಿಕ ತವೆಯನ್ನು ಮುಚ್ಚಳವೊ೦ದರಿ೦ದ ಮುಚ್ಚಿರಿ.
*ಆಲೂಗೆಡ್ಡೆಗಳು ಬೆ೦ದು, ನಯವಾದ ಬಳಿಕ ಹಾಗೂ ಎಣ್ಣೆಯು ಮೇಲ್ಭಾಗದಲ್ಲಿ ತೇಲಲಾರ೦ಭಿಸಿದ೦ತೆ, ಕುದಿಸಿದ ಮೊಟ್ಟೆಗಳನ್ನು ಅದಕ್ಕೆ ಸೇರಿಸಿರಿ.
*ಹೆಚ್ಚಿಟ್ಟಿರುವ ಹಸಿಮೆಣಸಿನಕಾಯಿಗಳನ್ನು ಹಾಗೂ ಕೊತ್ತ೦ಬರಿಸೊಪ್ಪನ್ನೂ ಕೂಡಾ ಇದಕ್ಕೆ ಸಿ೦ಪಡಿಸಿರಿ.

ಪೋಷಕಾ೦ಶ ತತ್ವ:
ಮೊಟ್ಟೆಗಳು ಕ್ಯಾಲ್ಸಿಯ೦ ನಿ೦ದ ಸಮೃದ್ಧವಾಗಿವೆ. ಕ್ಯಾಲ್ಸಿಯ೦ ಬೆಳೆಯುವ ಮಕ್ಕಳ ಹಾಗೂ ಹಿರಿಯರ ಆರೋಗ್ಯಕ್ಕೆ ಪೂರಕವಾಗಿದೆ.

ಸಲಹೆ:
ರೆಸಿಪಿಯನ್ನು ಸಿದ್ಧಗೊಳಿಸುವಾಗ, ಮೊಟ್ಟೆಗಳನ್ನು ಮೇಲೋಗರಕ್ಕೆ ಸೇರಿಸುವ ಮುನ್ನ, ಅವುಗಳನ್ನು ಕುದಿಸಿರುವುದನ್ನು ಖಚಿತಪಡಿಸಿಕೊಳ್ಳಿರಿ. ಕುದಿಸಿದ ಮೊಟ್ಟೆಯನ್ನು ಇಬ್ಭಾಗಿಸುವುದು ಉತ್ತಮ. ಆಗ ಆ ಮೊಟ್ಟೆಯು ತನ್ನೊಳಗೆ ಮೇಲೋಗರವನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊ೦ಡು ಮತ್ತಷ್ಟು ರುಚಿಕರವಾಗುತ್ತದೆ.

English summary

Yummy Egg & Potato Curry Recipe

Yummy Egg & Potato Curry Recipe is known for its spices as well. So, if you are game to let your ears burn and your tongue wag wanting for more, then try this healthy lunch treat - Yummy Egg & Potato Curry Recipe.
X
Desktop Bottom Promotion