For Quick Alerts
ALLOW NOTIFICATIONS  
For Daily Alerts

ಆಹಾ, ತೆಂಗಿನ ಹಾಲು ಬೆರೆಸಿ ಮಾಡಿದ ಚಿಕನ್ ಕರಿ ರೆಸಿಪಿ

By Super
|

ಪ್ರೋಟೀನ್ ಅಧಿಕವಾಗಿರುವ ಆಹಾರ ಪದಾರ್ಥಗಳಲ್ಲಿ ಕೋಳಿ ಮಾಂಸ ಸಹ ಒಂದು. ಒಂದು ವೇಳೆ ನಿಮ್ಮ ತೂಕ ಕಡಿಮೆಯಿದ್ದಲ್ಲಿ, ಈ ಮೆದುವಾದ ಮಾಂಸವನ್ನು ಸೇವಿಸುವುದರ ಮೂಲಕ ನೀವು ಪ್ರೋಟೀನ್ ಅನ್ನು ಪಡೆಯಬಹುದು. ಕೋಳಿ ಮಾಂಸದಲ್ಲಿ ಇನ್ನಿತರ ಪ್ರಯೋಜನಗಳು ಸಹ ಇವೆ. ಇದು ದೇಹದ ಉಷ್ಣತೆಯನ್ನು ಸಹ ಅಧಿಕಗೊಳಿಸುತ್ತದೆ. ತೆಂಗಿನ ಹಾಲಿನ ಜೊತೆಗೆ ತಯಾರಿಸಿದ ಕೋಳಿ ಮಾಂಸವು ಸ್ವಲ್ಪ ವಿಭಿನ್ನವಾಗಿ ಏನಾದರು ಮಾಡಿಕೊಳ್ಳಬೇಕು ಎಂದು ಇಚ್ಛಿಸುವವರಿಗೆ, ಹೇಳಿ ಮಾಡಿಸಿದ ಖಾದ್ಯವಾಗಿರುತ್ತದೆ.

ಈ ಮಧ್ಯಾಹ್ನ ನೀವು ನಿಮ್ಮ ಮನೆಯಲ್ಲಿ ರುಚಿಕರವಾದ ಈ ಖಾದ್ಯವನ್ನು ಮಾಡಿಕೊಂಡು ತಿನ್ನಬಹುದು. ಇದರ ಜೊತೆಗೆ ಬಟಾಣಿಗಳಿಂದ ಕೂಡಿದ ಪಲಾವ್ ಇದ್ದಲ್ಲಿ ಈ ಚಿಕನ್ ಕರಿಯ ರುಚಿಗೆ ಮತ್ತಷ್ಟು ರುಚಿ ಸಿಗುತ್ತದೆ. ಇದರ ಜೊತೆಗೆ ಇದನ್ನು ತಯಾರಿಸುವಾಗ ಇದಕ್ಕೆ ಸ್ವಲ್ಪ ಹೆಚ್ಚಿನ ಮಸಾಲೆಯನ್ನು ಬೆರೆಸುವುದನ್ನು ಮರೆಯಬೇಡಿ. ನಮ್ಮ ಭಾರತೀಯ ಮಸಾಲೆಗಳು ಹೆಚ್ಚಾದಷ್ಟು ರುಚಿಯು ಸಹ ಹೆಚ್ಚಾಗುತ್ತದೆ. ಅದನ್ನು ವರ್ಣಿಸುವುದು ಅಸಾಧ್ಯ ಬಿಡಿ. ಬನ್ನಿ ಹಾಗಾದರೆ ತೆಂಗಿನ ಹಾಲಿನ ಜೊತೆಗೆ ಚಿಕನ್ ಕರಿ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿದುಕೊಳ್ಳೋಣ. ಕೋರಿ ರೊಟ್ಟಿ-ಮಂಗಳೂರಿನ ಶೈಲಿಯ ಅಡುಗೆ

Yummy Chicken Curry With Coconut Milk Recipe

ಪ್ರಮಾಣ: ಇಬ್ಬರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ : 15 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 25 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಕೋಳಿ ಮಾಂಸ - ½ ಕೆ.ಜಿ ( ಕತ್ತರಿಸಿದಂತಹುದು)


*ಈರುಳ್ಳಿ- 1 (ಕತ್ತರಿಸಿದಂತಹುದು)
*ಕರಿ ಬೇವು ಸೊಪ್ಪು- 4
*ಹಸಿ ಮೆಣಸಿನಕಾಯಿ - 2 (ಕತ್ತರಿಸಿದಂತಹುದು)
*ಶುಂಠಿ - 1 ಟೀ.ಚಮಚ (ತುರಿದಂತಹುದು)
*ಅರಿಶಿನ - 1 ಟೀ.ಚಮಚ
*ಕೊತ್ತೊಂಬರಿ ಪುಡಿ - 1 ಟೀ.ಚಮಚ
*ಮೆಣಸಿನಕಾಯಿ ಪುಡಿ - 1 ಟೀ.ಚಮಚ
*ಮೆಣಸು ಪುಡಿ - 1 ಟೀ.ಚಮಚ
*ಗರಂ ಮಸಾಲ - 1 ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ತೆಂಗಿನ ಹಾಲು - ½ ಕಪ್
*ಟೊಮೇಟೊ - 2 ಟೀ.ಚಮಚ
*ಸಾಸಿವೆ ಕಾಳು - 1 ಟೀ.ಚಮಚ ಕೇರಳದ ಮಲಬಾರ್ ಶೈಲಿಯ ಚಿಕನ್ ಕರಿ ರೆಸಿಪಿ

ತಯಾರಿಸುವ ವಿಧಾನ
*ಒಂದು ವೃತ್ತಾಕಾರದ ತಳವಿರುವ ಬಾಣಲೆಯನ್ನು ತೆಗೆದುಕೊಳ್ಳಿ, ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ. ಯಾವಾಗ ಎಣ್ಣೆಯು ಕಾಯುತ್ತದೆಯೋ, ಆಗ ಅದರಲ್ಲಿ ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿ ಬೇವು ಸೊಪ್ಪು, ತುರಿದ ಶುಂಠಿಗಳನ್ನು ಹಾಕಿ. ಇವುಗಳು ಹೊಂಬಣ್ಣಕ್ಕೆ ತಿರುಗುವವರೆಗು ಎಣ್ಣೆಯಲ್ಲಿ ಉರಿಯಿರಿ. ಈ ಪದಾರ್ಥಗಳ ಮೇಲೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ಉದುರಿಸಿ.
*ಇನ್ನು ಇದನ್ನು ಬಾಣಲೆಯಲ್ಲಿರುವ ಈರುಳ್ಳಿಗಳ ಜೊತೆಗೆ ಚೆನ್ನಾಗಿ ಮಿಶ್ರಣ ಮಾಡಿ ಹುರಿದುಕೊಳ್ಳಿ. ಈಗ ಇದಕ್ಕೆ ಕೊತ್ತೊಂಬರಿ ಪುಡಿಯನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ಅದರ ಮೇಲೆ ಖಾರದ ಪುಡಿ ಹಾಗು ಮೆಣಸು ಪುಡಿಯನ್ನು ಹಾಕಿ, ಈ ಮಿಶ್ರಣವನ್ನು ಚೆನ್ನಾಗಿ ಹುರಿದುಕೊಳ್ಳಿ.
*ತದನಂತರ ಅದರ ಮೇಲೆ ತಾಜಾ ಕೋಳಿ ಮಾಂಸವನ್ನು ಹಾಕಿ. ಒಂದು ಚಪವಪಟೆಯಾಗಿರುವ ಚಮಚದ ಸಹಾಯದಿಂದ ಇವುಗಳನ್ನೆಲ್ಲ ಚೆನ್ನಾಗಿ ಮಿಶ್ರಣ ಮಾಡಿ, ಅಲ್ಲದೆ ಬಾಣಲೆಯಲ್ಲಿರುವ ಮಸಾಲೆಯು ಕೋಳಿ ಮಾಂಸದ ಜೊತೆಗೆ ಚೆನ್ನಾಗಿ ಬೆರೆಯಲು ಬಾಣಲೆಯ ಮುಚ್ಚಳವನ್ನು ಮುಚ್ಚಿ.
*ಚೆನ್ನಾಗಿ ಕಲೆಸಿ ಕೊಟ್ಟ ಮೇಲೆ ಇದಕ್ಕೆ ಗರಂ ಮಸಾಲವನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ಕೋಳಿ ಮಾಂಸದ ಮೇಲೆ ಉಪ್ಪನ್ನು ಚಿಮುಕಿಸಿ. ಮಧ್ಯಮ ಗಾತ್ರದ ಹುರಿಯನ್ನು ಇರಿಸಿಕೊಳ್ಳಿ. ಆಗ ಕೋಳಿ ಮಾಂಸ ಚೆನ್ನಾಗಿ ಬೇಯುತ್ತದೆ.


*ಇನ್ನು ಕೊನೆಯ ಬಾರಿಗೆ ಒಮ್ಮೆ ಮಾಂಸವನ್ನು ಕಲೆಸಿಕೊಡಿ. ಪಾತ್ರೆಯ ಮುಚ್ಚಳವನ್ನು 10 ನಿಮಿಷದ ಕಾಲ ಮುಚ್ಚಿ. ನಂತರ ಮುಚ್ಚಳವನ್ನು ತೆಗೆದು ಮತ್ತೊಮ್ಮೆ ಚೆನ್ನಾಗಿ ಕಲೆಸಿಕೊಡಿ. ಇದೆಲ್ಲ ಮುಗಿದ ಮೇಲೆ ಮುಚ್ಚಳವನ್ನು ತೆಗೆಯಿರಿ. ಅದಕ್ಕೆ ತೆಂಗಿನಹಾಲನ್ನು ಬೆರೆಸಿ.
*ಮತ್ತೆ ಬಾಣಲೆಯ ಮುಚ್ಚಳವನ್ನು ಮುಚ್ಚಿ ಮತ್ತು 6 ನಿಮಿಷಗಳ ಕಾಲ ಕಡಿಮೆ ಹುರಿಯಲ್ಲಿ ಬೇಯಿಸಿ. ಈಗ ಇದರ ಮೇಲೆ ಟೊಮೇಟೊವನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ನಿಮಗೆ ಅಗತ್ಯವಿದ್ದಲ್ಲಿ, ಮತ್ತಷ್ಟು ಗರಂ ಮಸಾಲವನ್ನು ಬೆರೆಸಿ. ಮತ್ತೆ ಪಾತ್ರೆಯನ್ನು ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ. *ಮತ್ತೊಂದು ಪಾತ್ರೆಯಲ್ಲಿ ಸಣ್ಣ ಪ್ರಮಾಣದಲ್ಲಿ ಎಣ್ಣೆಯನ್ನು ಕಾಯಿಸಿಕೊಳ್ಳಿ, ಅದಕ್ಕೆ ಸಾಸಿವೆ ಬೀಜಗಳನ್ನು ಹಾಕಿ. ಜೊತೆಗೆ ಅದರ ಮೇಲೆ ಸ್ವಲ್ಪ ಈರುಳ್ಳಿ ಮತ್ತು ಕರಿ ಬೇವು ಸೊಪ್ಪನ್ನು ಹಾಕಿ. ಇದೆಲ್ಲ ಆದ ಮೇಲೆ ಈ ಬಾಣಲೆಗೆ ಮುಖ್ಯ ಬಾಣಲೆಯಲ್ಲಿ ತಯಾರಿಸಿಕೊಂಡಿರುವ ತೆಂಗಿನ ಹಾಲಿನ ಜೊತೆಗೆ ಕೋಳಿ ಕರಿಯನ್ನು ಬೆರೆಸಿ.
ಪೋಷಕಾಂಶದ ಸಲಹೆ
ಕೋಳಿ ಮಾಂಸವು ತೂಕ ಕಳೆದುಕೊಳ್ಳಲು ಯೋಚಿಸುತ್ತಿರುವವರಿಗು ಸಹ ಒಳ್ಳೆಯದು. ಇದರಲ್ಲಿ ಕ್ಯಾಲೊರಿಗಳ ಪ್ರಮಾಣ ಕಡಿಮೆಯಿರುತ್ತದೆ.
ಸಲಹೆ
ನಿಮ್ಮ ರುಚಿಗೆ ತಕ್ಕಂತೆ ಮಸಾಲೆಯನ್ನು ಸೇರಿಸಿ, ಏಕೆಂದರೆ ಇದು ಮಸಾಲೆಭರಿತ ರೆಸಿಪಿಯಾಗಿರುತ್ತದೆ.
English summary

Yummy Chicken Curry With Coconut Milk Recipe

Chicken is one of the foods which is highest in protein. If you are on a weight loss, then you should add this lean meat to your diet. Chicken has a lot of other benefits too, although it induces heat in the body. Here is how you prepare this delectable chicken curry with coconut milk. Take a look at this simple non-vegetarian recipe.
X
Desktop Bottom Promotion