For Quick Alerts
ALLOW NOTIFICATIONS  
For Daily Alerts

ಮನಸ್ಸಿಗೆ ಮುದವನ್ನು ನೀಡುವ ಸ್ವಾದಿಷ್ಟಕರ ಮೊಟ್ಟೆಯ ರೆಸಿಪಿ!

|

ದಿನದಲ್ಲಿ ಒಂದು ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರು, ಫಿಟ್‌ನೆಸ್ ಪರಿಣಿತರು ಹೇಳುತ್ತಾರೆ. ಅದೇ ಮೊಟ್ಟೆಯನ್ನು ಬೆಳಗಿನ ಉಪಹಾರಕ್ಕೆ ತಿಂದರಂತೂ ತುಂಬಾ ಒಳ್ಳೆಯದು. ಆದ್ದರಿಂದಲೇ ಅದನ್ನು ಬೆಳಗಿನ ಬ್ರೇಕ್‌ಫಾಸ್ಟ್‌ಗೆ ತಿನ್ನಲು ಸಲಹೆ ನೀಡುತ್ತಾರೆ.

ಮೊಟ್ಟೆಯು ಉತ್ತಮ ಗುಣಮಟ್ಟದ ಪ್ರೋಟೀನು, ಕೊಬ್ಬು, ವಿಟಮಿನ್‌ಗಳು ಮತ್ತು ಕೆಲವು ರೋಗನಿರೋಧಕ ಶಕ್ತಿಗಳನ್ನು ಹೊಂದಿದೆ. ಒಟ್ಟಾರೆ ವಿಟಮಿನ್ ‘ಸಿ' ಅನ್ನು ಹೊರತುಪಡಿಸಿ ಉಳಿದೆಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿರುವ ಏಕೈಕ ಆಹಾರವೆಂದರೆ ಮೊಟ್ಟೆ. ಹಾಗಾಗಿ ‘ದಿನಕ್ಕೊಂದು ಮೊಟ್ಟೆ, ತುಂಬುವುದು ಹೊಟ್ಟೆ' ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ. ಮೊಟ್ಟೆಯನ್ನು ಬಳಸಿ ಅನೇಕ ರುಚಿ ರುಚಿಯಾದ ರೆಸಿಪಿಯನ್ನು ತಯಾರಿಸಬಹುದು. ಇಲ್ಲಿ ಕೆಲವೊಂದು ಮೊಟ್ಟೆಯ ರೆಸಿಪಿಯನ್ನು ನೀಡಿದ್ದೇವೆ ನೋಡಿ:

ಎಗ್ ಬುರ್ಜಿ

ಎಗ್ ಬುರ್ಜಿ

ಎಗ್ ಬುರ್ಜಿಯನ್ನು ಅನೇಕ ರೀತಿಯಲ್ಲಿ ತಯಾರಿಸಬಹುದು. ಎಗ್ ಬುರ್ಜಿಯನ್ನು ಬರಿ ಮೊಟ್ಟೆಗೆ ಖಾರ ಹಾಗೂ ಉಪ್ಪು ಸೇರಿಸಿ ತಯಾರಿಸುವ ಬದಲು ಈ ರೀತಿಯಲ್ಲಿ ತಯಾರಿಸಿ. ಈ ಎಗ್ ಬುರ್ಜಿ ಮಾಮೂಲಿ ಬುರ್ಜಿಗಿಂತ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: ಎಗ್ ಬುರ್ಜಿ ಈ ರೀತಿ ಟ್ರೈ ಮಾಡಿದ್ದೀರಾ?

ಬ್ರೆಡ್ ಹಾಗೂ ಮೊಟ್ಟೆಯ ರೋಸ್ಟ್

ಬ್ರೆಡ್ ಹಾಗೂ ಮೊಟ್ಟೆಯ ರೋಸ್ಟ್

ಬ್ರೆಡ್ ಮತ್ತು ಮೊಟ್ಟೆಯನ್ನು ಸೇರಿಸಿ ಮಾಡುವ ಬ್ರೆಡ್ ರೋಸ್ಟ್ ಬಗ್ಗೆ ತಿಳಿದಿರಬಹುದು. ಆದರೆ ಮೊಟ್ಟೆಯನ್ನು ರೋಸ್ಟ್ ಮಾಡಿ ಬ್ರೆಡ್ ಜೊತೆ ಸವೆಯಲು ಮಾಡುವ ಸ್ಪೆಷೆಲ್ ಅಡುಗೆ ಗೊತ್ತಿದೆಯೇ? ಬ್ರೆಡ್ ರೋಸ್ಟ್ ಈ ಸ್ಪೆಷೆಲ್ ಎಗ್ ಫ್ರೈ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಫ್ರೈಯನ್ನು ಚಪಾತಿ ಜೊತೆ ಬೇಕಾದರೆ ತಿನ್ನಬಹುದು.ಬ್ರೆಡ್ ಜೊತೆ ಸವೆಯಲು ಸ್ಪೆಷೆಲ್ ಎಗ್ ಫ್ರೈ

ಚೀಸ್ ಆಮ್ಲೇಟ್

ಚೀಸ್ ಆಮ್ಲೇಟ್

ಆಮ್ಲೇಟ್ ಅನ್ನು ಅನೇಕ ರೀತಿಯಲ್ಲಿ ತಯಾರಿಸಬಹುದು. ಸಾಮಾನ್ಯವಾಗಿ ಮೊಟ್ಟೆಗೆ ಈರುಳ್ಳಿ ಹಾಕಿ ಆಮ್ಲೇಟ್ ತಯಾರಿಸುತ್ತೇವೆ. ಪ್ರತಿಬಾರಿಯೂ ಆಮ್ಲೇಟ್ ತಯಾರಿಸುವಾಗ ಒಂದೇ ರುಚಿಯಲ್ಲಿ ಮಾಡಿ ತಿನ್ನುವ ಬದಲು ಚೀಸ್ ಮತ್ತು ತರಕಾರಿ ಹಾಕಿ ಆಮ್ಲೇಟ್ ಪ್ರಯತ್ನಿಸಿ. ಇದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ.ವೆಜಿಟೇಬಲ್ ಚೀಸ್ ಆಮ್ಲೇಟ್

ಎಗ್ ಪೆಪ್ಪರ್ ಫ್ರೈ

ಎಗ್ ಪೆಪ್ಪರ್ ಫ್ರೈ

ಮೊಟ್ಟೆಯನ್ನು ಒಂದೊಂದು ವಿಧಾನದಲ್ಲಿ ಮಾಡಿದರೆ ಒಂದೊಂದು ರುಚಿಯಿರುತ್ತದೆ. ಬೇಯಿಸಿದರೆ ಒಂದು ರುಚಿ, ಆಮ್ಲೇಟ್ ಮಾಡಿದರೆ ಬೇರೆ ರುಚಿ, ಎಗ್ ಬುರ್ಜಿ ಮಾಡಿದರೆ ಬೇರೆಯದ್ದೇ ರುಚಿ ಹೀಗೇ ಮೊಟ್ಟೆಯನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಅಲ್ಲದೆ ಮೊಟ್ಟೆ ಅಡುಗೆ ರುಚಿಯ ಜೊತೆಗೆ ಮಾಡಲೂ ಸುಲಭ.ಎಗ್ ಪೆಪ್ಪರ್ ಫ್ರೈ ಮಾಡುವುದು ಬಲು ಸುಲಭ

ಎಗ್ ಖೀಮಾ

ಎಗ್ ಖೀಮಾ

ಎಗ್ ಖೀಮಾ ಅಡುಗೆಯ ರುಚಿ ಅಡಗಿರುವುದು ಅದಕ್ಕೆ ಹಾಕುವ ಮಸಾಲದಲ್ಲಿ. ಮಸಾಲವನ್ನು ಸರಿಯಾದ ಪ್ರಮಾಣದಲ್ಲಿ ಹಾಕಿ ತಯಾರಿಸಿದ್ದೇ ಆದರೆ ತುಂಬಾ ರುಚಿಕರವಾದ ಖೀಮಾವನ್ನು ತುಂಬಾ ಸರಳವಾಗಿ ತಯಾರಿಸಬಹುದು.ಮಸಾಲೆಯಲ್ಲಿ ಅಡಗಿದೆ ಎಗ್ ಖೀಮಾದ ರುಚಿ

ಎಗ್ ಪೋಚ್

ಎಗ್ ಪೋಚ್

ಮೊಟ್ಟೆಯನ್ನು ಫ್ರೈ ಮಾಡಿ ತಿನ್ನುವ ಬದಲು ಬೇಯಿಸಿ ತಿಂದರೆ ಹಚ್ಚು ಆರೋಗ್ಯಕರ. ಆದರೆ ಮೊಟ್ಟೆಯನ್ನು ಹಾಗೇ ಬೇಯಿಸಿ ತಿನ್ನುವ ಬದಲು ಅದರಿಂದ ಎಗ್ ಪೋಚ್ ತಯಾರಿಸಿ ತಿಂದರೆ ಹೆಚ್ಚು ರುಚಿಕರವಾಗಿರುತ್ತದೆ. ಈ ಎಗ್ ಪೋಚ್ ಗೆ ಚೀಸ್ ಹಾಕಿ ಮಾಡಿದರೆ ಮತ್ತಷ್ಟು ರುಚಿಕರವಾಗಿರುತ್ತದೆ. ವಾವ್ ಚೀಸ್ ಹಾಕಿದ ಎಗ್ ಪೋಚ್!

English summary

Variety Style of tasty Egg Recipe

Boldsky has put together a list of easy egg recipes that any homemaker should have in stock. Most of these are snacks recipes but you can also have them for maincourse.
X
Desktop Bottom Promotion