For Quick Alerts
ALLOW NOTIFICATIONS  
For Daily Alerts

ಹೊಸ ರುಚಿಯಲ್ಲಿ 6 ಬಗೆಯ ಮೊಟ್ಟೆಯ ರೆಸಿಪಿ

|

ಮೊಟ್ಟೆಯಿಂದ ನಾನಾ ರುಚಿಯಲ್ಲಿ ಅಡುಗೆಗಳನ್ನು ಮಾಡಬಹುದು. ಮೊಟ್ಟೆ ಖಾದ್ಯಕ್ಕೆ ಬಳಸುವ ಸಾಮಾಗ್ರಿಗಳು ಮತ್ತು ಅದನ್ನು ಮಾಡುವ ವಿಧಾನ ಅನುಸರಿಸಿ, ಮೊಟ್ಟೆ ಖಾದ್ಯಗಳ ರುಚಿಯೂ ಭಿನ್ನವಾಗಿರುತ್ತದೆ. ಈ ವೀಕೆಂಡ್ ನಲ್ಲಿ ಹೊಸ ರುಚಿಯಲ್ಲಿ ಎಗ್ ರೆಸಿಪಿ ಮಾಡಬಯಸುವುದಾದರೆ ಇಲ್ಲಿ ನೀಡಿರುವ ರೆಸಿಪಿಗಳು ತುಂಬಾ ಸರಳವಾಗಿದ್ದು, ಇದರಲ್ಲಿ ನಿಮಗಿಷ್ಟವಾದ ಅಡುಗೆಯನ್ನು ಟ್ರೈ ಮಾಡಬಹುದು.

ಇಲ್ಲಿ ನಾವು ಮಶ್ರೂಮ್ ಆಮ್ಲೆಟ್, ಆಮ್ಲೆಟ್ ಗ್ರೇವಿ, ಪುದೀನಾ ಮೊಟ್ಟೆ ಸಾರು, ಭಿನ್ನ ರುಚಿಯ ಎಗ್ ಫ್ರೈ ಹೀಗೆ 6 ಬಗೆಯ ರೆಸಿಪಿ ನೀಡಿದ್ದೇವೆ ನೋಡಿ:

ಮಶ್ರೂಮ್ ಆಮ್ಲೆಟ್

ಮಶ್ರೂಮ್ ಆಮ್ಲೆಟ್

ಒಂದೇ ರುಚಿಯಲ್ಲಿ ಆಮ್ಲೆಟ್ ಮಾಡಿ ತಿನ್ನುವುದಕ್ಕಿಂತ ಅದನ್ನು ಆರೋಗ್ಯಕರವಾಗಿ ಅನೇಕ ರುಚಿಯಲ್ಲಿ ತಯಾರಿಸಬಹುದು. ಇಲ್ಲಿ ನಾವು ಅಣಬೆ ಹಾಕಿ ಮಾಡುವ ಆಮ್ಲೆಟ್ ರೆಸಿಪಿ ನೀಡಿದ್ದೇವೆ ನೋಡಿ:

. ಆಮ್ಲೆಟ್ ಗ್ರೇವಿ

. ಆಮ್ಲೆಟ್ ಗ್ರೇವಿ

ಆಮ್ಲೆಟ್ ಗ್ರೇವಿಯ ರುಚಿ ನೋಡಿದ್ದೀರಾ? ಬರೀ ಆಮ್ಲೆಟ್ ಮಾಡಿ ತಿನ್ನುವ ಬದಲು ಅದರಿಂದ ಗಟ್ಟಿಯಾದ ಗ್ರೇವಿ ತಯಾರಿಸಿದರೆ ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಆಮ್ಲೆಟ್ ಗ್ರೇವಿಯ ರುಚಿ ನೋಡಲು ನೀವು ರೆಡಿನಾ? ಹಾಗಾದರೆ ರೆಸಿಪಿ ನೋಡಿ ಇಲ್ಲಿದೆ:

ಕೊತ್ತಂಬರಿ ಸೊಪ್ಪಿನ ಮೊಟ್ಟೆ ಸಾರು

ಕೊತ್ತಂಬರಿ ಸೊಪ್ಪಿನ ಮೊಟ್ಟೆ ಸಾರು

ಮೊಟ್ಟೆ ಸಾರನ್ನು ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ರುಬ್ಬಿ ಮಾಡುವ ಮೊಟ್ಟೆ ಸಾರು ಘಮ್ಮೆನ್ನುವ ಪರಿಮಳದಿಂದ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು ಮಾಡುವ ವಿಧಾನ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಡಾನ್ ಡಾನ್ ಮೊಟ್ಟೆ ಫ್ರೈ

ಡಾನ್ ಡಾನ್ ಮೊಟ್ಟೆ ಫ್ರೈ

ಮೊನ್ನೆ ನಾನು ಹೊಸ ಬಗೆಯಲ್ಲಿ ಮೊಟ್ಟೆ ಫ್ರೈ ಮಾಡಿದ್ದೆ, ಟೇಸ್ಟ್ ಸೂಪರ್ ಆಗಿ ಬಂದ ಕಾರಣ ಆ ರೆಸಿಪಿಯನ್ನು ನಿಮ್ಮೊಂದಿಗೂ ಹಂಚಿಕೊಳ್ಳಬೇಕೆನ್ನಿಸಿತ್ತು, ತುಂಬಾ ಸರಳವಾದ ಈ ಅಡುಗೆಗೆ ಡಾನ್ ಡಾನ್ ಮೊಟ್ಟೆ ಫ್ರೈ ಅಂತಲೂ ಹೆಸರಿಟ್ಟಿದ್ದೇನೆ. ಹೆಸರು ಇಷ್ಟವಾಗಲಿಲ್ಲವೆಂದರೆ ಬದಲಾಯಿಸಿಕೊಳ್ಳಿ, ಆದರೆ ರೆಸಿಪಿ ಟ್ರೈ ಮಾಡಿ ಖಂಡಿತ ನಿಮಗೆ ಇಷ್ಟವಾಗುವುದು.

ಎಗ್ ಆಲೂ ಆಮ್ಲೇಟ್

ಎಗ್ ಆಲೂ ಆಮ್ಲೇಟ್

ಸಂಜೆ ಹೊತ್ತಿನಲ್ಲಿ ಟೀ ಜೊತೆಯಲ್ಲಿ ಏನಾದರೂ ಸ್ನ್ಯಾಕ್ಸ್ ತಿನ್ನಲು ಇಷ್ಟ ಪಡುವುದಾದರೆ ಈ ಎಗ್ ಆಲೂ ಆಮ್ಲೇಟ್ ಟ್ರೈ ಮಾಡಬಹುದು. ಈ ಆಮ್ಲೇಟ್ ರುಚಿ ಒಮ್ಮೆ ನೋಡಿದರೆ ಮತ್ತೆ-ಮತ್ತೆ ತಿನ್ನಬೇಕೆನಿಸುತ್ತದೆ. ಇದನ್ನು ಮಾಡುವ ವಿಧಾನ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಡೆವಿಲ್ ಎಗ್

ಡೆವಿಲ್ ಎಗ್

ಡೆವಿಲ್ ಎಗ್ ಎಂದಾದರೂ ಟೇಸ್ಟ್ ಮಾಡಿದ್ದೀರಾ? ಇದನ್ನು ಕನ್ನಡದಲ್ಲಿ ಬೇಯಿಸಿದ ಮಸಾಲೆ ಮೊಟ್ಟೆ ಎಂದು ಕೂಡ ಕರೆಯಬಹುದು. ಈ ಮಸಾಲೆ ಮೊಟ್ಟೆ ಮಾಡುವಾಗ ಮೊಟ್ಟೆಯನ್ನು ಬೇಯಿಸಿ, ಅದರ ಹಳದಿ ಭಾಗವನ್ನು ತೆಗೆದು ಅದಕ್ಕೆ ಮಸಾಲೆ ಸಾಮಾಗ್ರಿಗಳನ್ನು ಹಾಕಿ ನಂತರ ಅದನ್ನು ಮೊಟ್ಟೆಯ ಬಿಳಿಗೆ ತುಂಬಲಾಗುವುದು. ಈ ರೀತಿ ಮಾಡಿದ ಮೊಟ್ಟೆಯ ರುಚಿಯನ್ನು ಒಮ್ಮೆ ಸವಿದರೆ ಮತ್ತೆ-ಮತ್ತೆ ತಿನ್ನಬೇಕೆನಿಸುವಷ್ಟು ರುಚಿಕರವಾಗಿರುತ್ತದೆ.

English summary

Varieties Of Egg Recipe

Kannada Boldsky has put together a list of easy egg recipes that any homemaker should have in stock. Here are some of the egg recipes to make this weekend even more special.
Story first published: Saturday, October 19, 2013, 18:43 [IST]
X
Desktop Bottom Promotion