For Quick Alerts
ALLOW NOTIFICATIONS  
For Daily Alerts

ರಂಜಾನ್‌ಗಾಗಿ ರುಚಿಯಾದ ಕೇರಳ ಶೈಲಿಯ ಬಿರಿಯಾನಿ ರೆಸಿಪಿ

|

ನಿಜವಾಗಿಯೂ ನೀವು ಆಹಾರ ಪ್ರಿಯರಾಗಿರದಿದ್ದಲ್ಲಿ ಎಲ್ಲಾ ಬಿರಿಯಾನಿಯೂ ನಿಮಗೇ ಒಂದೇ ರುಚಿಯನ್ನು ಹೊಂದಿದೆ ಎಂಬ ಭಾವನೆಯನ್ನು ಉಂಟುಮಾಡುತ್ತದೆ. ಇದು ಅನ್ನದೊಂದಿಗೆ ಬೇಯಿಸಿರುವ ಒಂದು ಮಾಂಸ ಖಾದ್ಯ ಎಂಬ ಅಸಡ್ಡೆ ಕೂಡ ನಿಮ್ಮಲ್ಲಿ ಮೂಡಬಹುದು.

ಆದರೆ ಬಿರಿಯಾನಿಯನ್ನು ಇಷ್ಟಪಡುವ ನಿಜವಾದ ಬಿರಿಯಾನಿ ಖಾದ್ಯ ಪ್ರಿಯರು ಬೇರೆ ಬೇರೆ ವಿಧಾನಗಳಲ್ಲಿ ಬೇರೆ ಸಾಮಾಗ್ರಿಗಳನ್ನು ಬಳಸಿ ತಯಾರಿಸುವ ಬಿರಿಯಾನಿಯನ್ನು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುವ ಕೇರಳದ ತಲಶ್ಶೇರಿ ಶೈಲಿಯ ಬಿರಿಯಾನಿ ರೆಸಿಪಿಯೊಂದಿಗೆ ನಾವು ಬಂದಿದ್ದೇವೆ.

Thalassery Biriyani Recipe For Ramzan

ಈ ಬಿರಿಯಾನಿ ಪಾಕ ವಿಧಾನ ಕೇರಳದ ತಲಶ್ಶೇರಿಯದಾಗಿದೆ. ಈ ಬಿರಿಯಾನಿಯ ವಿಶೇಷತೆಯೆಂದರೆ ಇದರಲ್ಲಿ ಚಿಕನ್ ಪದಾರ್ಥದ ಬದಲಿಗೆ ಹುರಿದ ಚಿಕನ್ ಮತ್ತು ಮೊಟ್ಟೆಯನ್ನು ಬಳಸಲಾಗುತ್ತದೆ. ಹುರಿದ ಚಿಕನ್, ಕಡಲೆಬೀಜ ಮತ್ತು ಕೇಸರಿಯ ಹದವಾದ ಸಮ್ಮಿಲನ ಈ ಖಾದ್ಯಕ್ಕೆ ವಿಶೇಷ ರುಚಿಯನ್ನು ನೀಡುತ್ತದೆ.

ರಂಜಾನ್‌ನ ವಿಶೇಷ ದಿನಕ್ಕಾಗಿ ತಯಾರಿಸಬಹುದಾದ ಖಾದ್ಯ ಇದಾಗಿದ್ದು ಖಂಡಿತ ನಿಮ್ಮ ಹಬ್ಬದ ದಿನವನ್ನು ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ಹಾಗಿದ್ದರೆ ಮತ್ತೇಕೆ ತಡ ಬಿರಿಯಾನಿ ರೆಸಿಪಿ ವಿಧಾವನ್ನು ಕೆಳಗೆ ನಾವು ನೀಡಿದ್ದು ಇನ್ನು ನಿಮ್ಮ ಪಾಕವನ್ನು ಆರಂಭಿಸಿ

ರಂಜಾನ್‌ ಹಬ್ಬಕ್ಕಾಗಿ ಗರಿಗರಿ ಮೀನು ಕಬಾಬ್ ಖಾದ್ಯ

ಪ್ರಮಾಣ: 4
ಸಿದ್ಧತಾ ಸಮಯ: 30 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 1 ಗಂಟೆ

ಸಾಮಾಗ್ರಿಗಳು
*ಚಿಕನ್ : 500 ಗ್ರಾಮ್‌ಗಳು
*ಬಿರಿಯಾನಿ ಅಕ್ಕಿ: 400 ಗ್ರಾಮ್‌ಗಳು
*ತುಪ್ಪ - 1 ಕಪ್
*ಕಡಲೆ ಬೀಜ 20
*ಈರುಳ್ಳಿ - 2+2 (ಕತ್ತರಿಸಿದ್ದು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
*ಅರಶಿನ - 1 ಚಮಚ
*ಮೆಣಸಿನ ಪುಡಿ - 2 ಚಮಚ
*ಲಿಂಬೆ ಹಣ್ಣು - 1
*ಹಸಿಮೆಣಸು - 8
* ಟೊಮೇಟೊ - 2
*ಕರಿಬೇವಿನ ಎಲೆ - 10 ಎಸಳು
*ಕೊತ್ತಂಬರಿ ಸೊಪ್ಪು - 2 ಕಟ್ಟು (ಕತ್ತರಿಸಿದ್ದು)
*ಎಣ್ಣೆ - 1 ಕಪ್
*ಉಪ್ಪು - ರುಚಿಗೆ ತಕ್ಕಷ್ಟು

ರಂಜಾನ್ ವಿಶೇಷ ಖಾದ್ಯ ಶಿರ್ಮಲ್ ಸಿಹಿ ಬ್ರೆಡ್ ತಿನಿಸು

ಮಾಡುವ ವಿಧಾನ
* ಮೊದಲಿಗೆ ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆಯಿರಿ ಹಾಗೂ ಅವುಗಳಲ್ಲಿ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ.
* ಇನ್ನು ಕೆಂಪು ಮೆಣಸಿನ ಪುಡಿ ಅರಶಿನ ಮತ್ತು ಉಪ್ಪಿನ ಮಿಶ್ರಣದೊಂದಿಗೆ ಚಿಕನ್ ತುಂಡುಗಳನ್ನು ಮುಳುಗಿಸಿಡಿ. ಇದನ್ನು 15 ನಿಮಿಷಗಳ ಕಾಲ ಹಾಗೆಯೇ ಇಡಿ.
* ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. 10 ನಿಮಿಷಗಳವರೆಗೆ ಚಿಕನ್ ತುಂಡುಗಳನ್ನು ಹುರಿದುಕೊಳ್ಳಿ.
* ತದನಂತರ ಚಿಕನ್ ತುಂಡುಗಳನ್ನು ಚೆನ್ನಾಗಿ ಬಸಿದು ಪಕ್ಕಕ್ಕಿಡಿ. ಬಿರಿಯಾನಿಗೆ ಸೇರಿಸಲು ನೀವು ಬಯಸಿದ್ದಲ್ಲಿ ಕೆಲವು ಬೇಯಿಸಿದ ಮೊಟ್ಟೆಗಳನ್ನು ಕೂಡ ನಿಮಗೆ ಇದರಲ್ಲಿ ಹುರಿದುಕೊಳ್ಳಬಹುದು.
* ಉಳಿದ ಎಣ್ಣೆಯಲ್ಲಿ, 2 ಕತ್ತರಿಸಿದ ಈರುಳ್ಳಿಗಳನ್ನು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ. ಕಡಿಮೆ ಉರಿಯಲ್ಲಿ 3-4 ನಿಮಿಷಗಳ ಕಾಲ ಬೇಯಿಸಿ.
* ಇದಕ್ಕೆ ಟೊಮೇಟೊ ಮತ್ತು ಹಸಿಮೆಣಸನ್ನು ಸೇರಿಸಿ; ಮೇಲ್ಭಾಗಕ್ಕೆ ಉಪ್ಪು ಚಿಮುಕಿಸಿ. ಮಧ್ಯಮ ಉರಿಯಲ್ಲಿ 2-3 ನಿಮಿಷಗಳ ಕಾಲ ಬೇಯಿಸಿ.
* ಮೆಣಸಿನ ಪೇಸ್ಟ್, ಅರಶಿನ, ಕರಿಬೇವಿನೆಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಪದಾರ್ಥಕ್ಕೆ ಹಾಕಿ. ಚೆನ್ನಾಗಿ ಮಿಶ್ರ ಮಾಡಿ 3-4 ನಿಮಿಷಗಳ ಕಾಲ ಬೇಯಿಸಿ.
* ಈ ಪದಾರ್ಥಕ್ಕೆ ಹುರಿದ ಚಿಕನ್ ಅನ್ನು ಸೇರಿಸಿ. 2 ಕಪ್ ನೀರು ಸೇರಿಸಿ; ಮಧ್ಯಮ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿ.
* ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಳ್ಳಿ. ಗರಿಗರಿಯಾಗುವರೆಗೆ 2 ನೀರುಳ್ಳಿಯನ್ನು ಹುರಿದುಕೊಳ್ಳಿ. ಈರುಳ್ಳಿಯನ್ನು ಬಸಿದು ಪಕ್ಕದಲ್ಲಿಡಿ.
* ಕಡಲೆ ಬೀಜವನ್ನು ತುಪ್ಪಕ್ಕೆ ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಹುರಿದುಕೊಳ್ಳಿ. ನಂತರ ಕಡಲೆ ಬೀಜವನ್ನು ಬಸಿದು ಪಕ್ಕದಲ್ಲಿಡಿ.
* ದೊಡ್ಡ ಪಾತ್ರೆಗೆ ಬಿರಿಯಾನಿ ಅಕ್ಕಿಯನ್ನು ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಹುರಿದುಕೊಳ್ಳಿ.
* 2-3 ಕಪ್ ನೀರನ್ನು ಸೇರಿಸಿ ಮತ್ತು 10 ನಿಮಿಷಗಳಿಗಾಗಿ ಬೇಯಿಸಿ.
* ಮೈಕ್ರೋವೇವ್ ಆಧಾರಿತ ಬೌಲ್‌ ಅನ್ನು ತೆಗೆದುಕೊಂಡು ಅನ್ನ ಮತ್ತು ಚಿಕನ್ ಪದಾರ್ಥದ ಪದರಗಳನ್ನು ಮಾಡಿಕೊಳ್ಳಿ. ಬೌಲ್‌ಗೆ ಮುಚ್ಚಿ ಮತ್ತು 80 ಶೇಕಡಾ ಉಷ್ಣಾಂಶತೆಯಲ್ಲಿ 8-10 ನಿಮಿಷಗಳ ಕಾಲ ಬೇಯಿಸಿ.

English summary

Thalassery Biriyani Recipe For Ramzan

If you are not a real foodie, all biryanis will taste the same to you. Thalassery biriyani is a recipe that hails from Kerala. This recipe for Kerala biriyani is different from all others because it uses fried chicken and eggs instead of curried chicken.
X
Desktop Bottom Promotion