For Quick Alerts
ALLOW NOTIFICATIONS  
For Daily Alerts

ವಾರಂತ್ಯದ ಸ್ಪೆಷಲ್: ಹೊಸ ರುಚಿಯ ಮೀನಿನ ಫ್ರೈಡ್ ರೈಸ್!

By Arshad
|

ಮಾಂಸಾಹಾರಗಳಲ್ಲಿಯೇ ಅತಿ ಸುರಕ್ಷಿತವಾದ, ಕೊಲೆಸ್ಟ್ರಾಲ್ ಇಲ್ಲದ ಮತ್ತು ಪೌಷ್ಟಿಕವಾದ ಆಹಾರವೆಂದರೆ ಮೀನು. ಮಧ್ಯಾಹ್ನದ ಊಟ ಕೊಂಚ ವಿಶೇಷವಾಗಿರಲು ಎಗ್ ಫ್ರೈಡ್ ರೈಸ್, ಚಿಕನ್ ಫ್ರೈಡ್ ರೈಸ್ ಈಗ ಹಳೆಯದಾಯಿತು, ಅಷ್ಟೇ ಏಕೆ ತೂಕ ಏರುತ್ತದೆಂಬ ಭಯದಿಂದ ಕೆಲವರು ತಿನ್ನುವುದೂ ಇಲ್ಲ. ಹಾಗಾಗಿ ಮಕ್ಕಳಿಗೂ ಹಿರಿಯರಿಗೂ ಹಿಡಿಸುವ, ಶೀಘ್ರವಾಗಿಯೇ ತಯಾರಿಸಬಹುದಾದ ಮೀನಿನ ಫ್ರೈಡ್ ರೈಸ್ ಮಾಡುವ ವಿಧಾನ ಇಲ್ಲಿದೆ.

ಇದಕ್ಕಾಗಿ ಅಗತ್ಯವಾಗಿ ಬೇಕಾಗಿರುವುದು ಮುಳ್ಳಿಲ್ಲದ ಮೀನು. ಇತ್ತೀಚೆಗೆ ಈ ಪರಿಯ ಮೀನು ಪ್ಯಾಕೆಟ್ಟುಗಳಲ್ಲಿ ದೊರಕುತ್ತಿದೆ. (fish fillet ಎಂಬು ಬರೆದಿರುವ ಪ್ಯಾಕೆಟ್ಟುಗಳನ್ನು ಹುಡುಕಿ).

ಇಲ್ಲದಿದ್ದರೆ ನಿಮ್ಮ ನೆಚ್ಚಿನ ಮೀನನ್ನು ಬರೆಯ ನೀರಿನಲ್ಲಿ ಬೇಯಿಸಿ ಬಸಿದು ಮುಳ್ಳನ್ನು ನಾಜೂಕಿನಿಂದ ನಿವಾರಿಸಿದರೂ ಸರಿ. ಅನ್ನವನ್ನೂ ಮೊದಲೇ ಮಾಡಿಟ್ಟುಕೊಂಡಿರಬೇಕು. ಇವೆರಡೂ ತಯಾರಿದ್ದರೆ ಉಳಿದ ಕೆಲಸ ಕೆಲವೇ ನಿಮಿಷಗಳದ್ದು ಮಾತ್ರ...! ಆಂಧ್ರಶೈಲಿಯ ಮೀನಿನ ಫ್ರೈ ರೆಸಿಪಿ

Tasty Fish Fried Rice Recipe

ಅಗತ್ಯವಿರುವ ಸಾಮಾಗ್ರಿಗಳು
*ಮುಳ್ಳಿಲ್ಲದ ಮೀನು: ಅರ್ಧ ಕೇಜಿ
*ಬೇಯಿಸಿದ ಅಕ್ಕಿ: ಮೂರು ಕಪ್
*ದೊಣ್ಣೆಮೆಣಸು: ಎರಡು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಈರುಳ್ಳಿ: ಮೂರು (ಮಧ್ಯಮ ಗಾತ್ರದ್ದು, ಚಿಕ್ಕದಾಗಿ ಹೆಚ್ಚಿದ್ದು)
*ಸೆಲೆರಿ ದಂಟುಗಳು: ಅರ್ಧ ಕಪ್ (ಇದು ಲಭ್ಯವಿಲ್ಲದಿದ್ದರೆ ಸಿಹಿಯಾಗಿರುವ ಎಲೆಕೋಸು ಸಹಾ ನಡೆಯುತ್ತದೆ)
*ಮೀನಿನ ಸಾಸ್: ಒಂದು ದೊಡ್ಡ ಚಮಚ
*ಚಿಲ್ಲಿ ಸಾಸ್: 2 ದೊಡ್ಡ ಚಮಚ
*ಬೆಳ್ಳುಳ್ಳಿ: 3-4 ಎಸಳುಗಳು
*ಸೋಯಾ ಸಾಸ್: 3 ಚಿಕ್ಕ ಚಮಚ
*ಕ್ಯಾರೆಟ್ : 2 ಚಿಕ್ಕದ್ದು (ಹೆಚ್ಚಿದ್ದು)
*ಕಾಳುಮೆಣಸಿನ ಪುಡಿ- 1 ಚಿಕ್ಕ ಚಮಚ
*ಮೆಕ್ಕೆ ಜೋಳದ ಹಿಟ್ಟು (ಕಾರ್ನ್ ಸ್ಟಾರ್ಚ್)- 1 ದೊಡ್ಡ ಚಮಚ
*ಎಣ್ಣೆ : ಕರಿಯಲು ಅಗತ್ಯವಿದ್ದಷ್ಟು
*ಉಪ್ಪು ರುಚಿಗನುಸಾರ:

ವಿಧಾನ:
1) ಮೀನಿನ ತುಂಡುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಸೋಯಾ ಸಾಸ್, ಫಿಷ್ ಸಾಸ್, ಚಿಲ್ಲಿ ಸಾಸ್ ಮತ್ತು ಕಾಳುಮೆಣಸಿನ ಪುಡಿಗಳೊಂದಿಗೆ ಬೆರೆಸಿ ಹೀರಿಕೊಳ್ಳಲು ಸಾಧ್ಯವಾಗುವಂತೆ ಸುಮಾರು ಹದಿನೈದು ನಿಮಿಷ ತೆಗೆದಿಡಿ.
3) ಕರಿಯುವ ಎಣ್ಣೆಯನ್ನು ಬಿಸಿಮಾಡಿ. ಕರಿಯುವಷ್ಟು ಬಿಸಿಯಾಗಿದೆ ಎಂದ ಬಳಿಕ ಮೀನಿಗೆ ಕಾರ್ನ್ ಸ್ಟಾರ್ಚ್ ಹಾಕಿ ಮಿಶ್ರಣ ಮಾಡಿ ಹಾಗೂ ಕೂಡಲೇ ಕರಿಯುವ ಎಣ್ಣೆಗೆ ಬಿಡಿ
4) ಸುಮಾರು ನಸುಗಂದು ಬರುವಷ್ಟು ಮಾತ್ರ ಕರಿದು ಹೊರತೆಗೆಯಿರಿ.
5) ಬೆಳ್ಳುಳ್ಳಿ ಎಸಳುಗಳನ್ನೂ ಕರಿಯುವ ಎಣ್ಣೆಯಲ್ಲಿ ಕೊಂಚ ಕೆಂಪಗಾಗುವವರೆಗೆ ಹುರುಯಿರಿ.
6) ಈಗ ಎಣ್ಣೆಯಲ್ಲಿ ನೀರುಳ್ಳಿ, ಸೆಲೆರಿ, ದೊಣ್ಣೆಮೆಣಸು ಮತ್ತು ಕ್ಯಾರೆಟ್ಟುಗಳನ್ನು ಸುಮಾರು ಹತ್ತು ನಿಮಿಷಗಳವರೆಗೆ ಅಥವಾ ಎಲ್ಲವೂ ಕೆಂಪಗಾಗುವವರೆಗೆ ಹುರಿಯಿರಿ.
7) ಕರಿದ ಎಲ್ಲವನ್ನೂ ಮೀನಿನ ತುಂಡುಗಳೊಡನೆ ಚೆನ್ನಾಗಿ ಮಿಶ್ರಣ ಮಾಡಿ
8) ಈಗ ಬೆಂದ ಅನ್ನವನ್ನು ಈ ಮಿಶ್ರಣಕ್ಕೆ ಹಾಕಿ ಕಲಸಿ
9) ಬಿಸಿಬಿಸಿಯಿರುವಂತೆಯೇ ಅತಿಥಿಗಳಿಗೆ, ಮಕ್ಕಳಿಗೆ ಬಡಿಸಿ. ಜೊತೆಗೆ ಹಸಿತರಕಾರಿಗಳ ಸಾಲಾಡ್ ಇದ್ದರೆ ರುಚಿ ಇನ್ನಷ್ಟು ಹೆಚ್ಚುವುದು. ಕೆಲವರಿಗೆ ಇದು ಟೊಮೇಟೊ ಸಾಸ್ ನೊಂದಿಗೂ ರುಚಿಸುತ್ತದೆ. ಈ ಪರಿಯನ್ನೂ ಪ್ರಯತ್ನಿಸಿ.

English summary

Tasty Fish Fried Rice Recipe

You have tried chicken fried rice, now this time try out this yummy fish fried rice. It is easy to prepare and gives a unique taste of fish. This way you can make your kids also to eat fish, as most kids don't like to eat this nutritious food.
X
Desktop Bottom Promotion