For Quick Alerts
ALLOW NOTIFICATIONS  
For Daily Alerts

ಮ್ಯಾಂಗೋ ಚಿಕನ್ ರೆಸಿಪಿಯ ಯಮ್ಮಿ ಕಾಂಬಿನೇಶನ್

|

ಹಣ್ಣುಗಳ ರಾಜನೆಂದೇ ಪ್ರಸಿದ್ಧಿಗೊಂಡಿರುವ ಮಾವು ಈಗ ಮಾರುಕಟ್ಟೆಯಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿವೆ. ಕಾಯಿಯಾಗಿರಲಿ ಅಥವಾ ಹಣ್ಣಾಗಿರಲಿ ಮಾವು ಮಾಡುವ ಮೋಡಿ ನಿಜಕ್ಕೂ ಅದ್ಭುತ. ಕಾಯಿ ಮಾವಿಗಿರುವ ರುಚಿ ಸುವಾಸನೆ ಭಿನ್ನವಾಗಿರುತ್ತದೆ. ದಾಲ್ ಹಾಗೂ ಬೇರೆ ಪದಾರ್ಥಗಳನ್ನು ಮಾವನ್ನು ಮುಖ್ಯ ಸಾಮಾಗ್ರಿಯನ್ನಾಗಿಸಿ ತಯಾರಿಸಬಹುದು.

ಇಂದಿನ ಲೇಖನದಲ್ಲಿ ಚಿಕನ್ ಹಾಗೂ ಮಾವು ಮಿಶ್ರಿತ ಕರಿಯನ್ನು ನಿಮಗೆ ಉಣಬಡಿಸಲಿದ್ದೇವೆ. ಸುವಾಸನೆಯುಕ್ತ ಮಸಾಲೆಗಳನ್ನು ಅರೆದು ತಯಾರಿಸುವ ಈ ಹುಳಿಯಾದ ಮತ್ತು ಬಾಯಲ್ಲಿ ನೀರೂರಿಸುವ ಚಿಕನ್ ಕರಿ ಖಂಡಿತ ನಿಮಗೆ ಸಂತೃಪ್ತಿಯನ್ನು ನೀಡುತ್ತದೆ.

ಹಾಗಿದ್ದರೆ ತಡ ಮಾಡದೇ ಚಿಕನ್ ಹಾಗೂ ಮಾವಿನ ಕರಿ ವಿಧಾನವನ್ನು ಬರೆದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸಮ್ಮರ್ ಸ್ಪೆಶಲ್ ರುಚಿಯಾದ ಮಾವಿನ ಕಾಯಿ ಚಟ್ನಿ

Tangy Mango Chicken Curry Recipe

ಪ್ರಮಾಣ: 4
ಸಿದ್ಧತಾ ಸಮಯ: 30 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಸಾಮಾಗ್ರಿಗಳು:

.ಬೋನ್‍ಲೆಸ್ ಚಿಕನ್ - 1ಕೆಜಿ (ಮಧ್ಯಮ ತುಂಡುಗಳನ್ನಾಗಿ ಮಾಡಿರುವುದು)

.ಲಿಂಬೆ ರಸ - 2 ಸ್ಪೂನ್
.ಮೊಸರು - 2 ಸ್ಪೂನ್
.ಮಾವಿನ ಕಾಯಿ - (ತುಂಡರಿಸಿದ್ದು)
.ಬೆಳ್ಳುಳ್ಳಿ - 5-6 ಎಸಳುಗಳು
.ಹಸಿಮೆಣಸು - 2
.ಉಪ್ಪು- ರುಚಿಗೆ ತಕ್ಕಂತೆ

ಪದಾರ್ಥಕ್ಕೆ:
.ಈರುಳ್ಳಿ 3 (ತುಂಡರಿಸಿದ್ದು)
.ಬೆಳ್ಳುಳ್ಳಿ - 4 ಎಸಳುಗಳು
.ಮಾವಿನ ಕಾಯಿ - 1 (ಹೆಚ್ಚಿದ್ದು)
.ಅರಶಿನ ಹುಡಿ - 1 ಸ್ಪೂನ್
.ಮೆಣಸಿನ ಹುಡಿ - 1/2 ಸ್ಪೂನ್
.ಜೀರಿಗೆ ಹುಡಿ - 1 ಸ್ಪೂನ್
.ಕೊತ್ತಂಬರಿ ಹುಡಿ - 2 ಸ್ಪೂನ್
.ಜೀರಿಗೆ ಬೀಜ - 1 ಸ್ಪೂನ್
.ಸಕ್ಕರೆ - 1/2 ಸ್ಪೂನ್
.ಉಪ್ಪು - ರುಚಿಗೆ ತಕ್ಕಷ್ಟು
.ಎಣ್ಣೆ - 4 ಸ್ಪೂನ್
.ಕೊತ್ತಂಬರಿ ಸೊಪ್ಪು - 2 ಸ್ಪೂನ್ (ಕತ್ತರಿಸಿದ್ದು)

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕುಡಿಯಲು ಬಲು ರುಚಿ ಈ ಮ್ಯಾಂಗೋ ಸ್ಮೂತಿ

ಮಾಡುವ ವಿಧಾನ:

1.ಮಾವಿನ ತುಂಡುಗಳು, ಬೆಳುಳ್ಳಿ, ಹಸಿಮೆಣಸನ್ನು ಜೊತೆಯಾಗಿ ಮಿಕ್ಸರ್‌ನಲ್ಲಿ ಸ್ವಲ್ಪ ನೀರು ಹಾಕಿ ಗ್ರೈಂಡ್ ಮಾಡಿಕೊಳ್ಳಿ.

2.ಈರುಳ್ಳಿಯನ್ನು ದಪ್ಪನೆಯ ಪೇಸ್ಟ್‌ನಂತೆ ರುಬ್ಬಿಕೊಳ್ಳಿ ಮತ್ತು ಅದನ್ನು ಪಕ್ಕದಲ್ಲಿಡಿ.

3. 30 ನಿಮಿಷಗಳ ನಂತರ, ಪ್ಯಾನ್‍ನಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ ಮತ್ತು ಚಿಕನ್ ತುಂಡುಗಳನ್ನು ಫ್ರೈ ಮಾಡಿ. ಉರಿಯನ್ನು ಮಂದಗತಿಯಲ್ಲಿ ಇರಿಸಿ.

4. ಚಿಕನ್ ಗೋಲ್ಡನ್ ಬಣ್ಣಕ್ಕೆ ಬರುವವರೆಗೆ ಎಣ್ಣೆಯಲ್ಲಿ ಹುರಿಯಿರಿ.

5. ಪೂರ್ತಿ ಆದ ನಂತರ ಉರಿಯನ್ನು ಆಫ್ ಮಾಡಿ ಮತ್ತು ಚಿಕನ್ ಅನ್ನು ಪಕ್ಕದಲ್ಲಿರಿಸಿ.

6. ಇನ್ನೊಂದು ಕಡಾಯಿಯಲ್ಲಿ ಎರಡು ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ.

7. ಜೀರಿಗೆಯನ್ನು ಬಿಸಿಯಾದ ಎಣ್ಣೆಗೆ ಹಾಕಿ ಸೌಟ್‍ನಲ್ಲಿ ಒಮ್ಮೆ ಫ್ರೈ ಮಾಡಿ.

8. ನಂತರ ಈರುಳ್ಳಿ ಪೇಸ್ಟ್ ಅನ್ನು ಹಾಕಿ ಹಾಗೂ 5-6 ನಿಮಿಷಗಳ ಕಾಲ ಮಂದ ಉರಿಯಲ್ಲಿ ಸೌಟಾಡಿಸಿ.

9. ಸಿದ್ಧಪಡಿಸಿದ ಮ್ಯಾಂಗೋ ಪೇಸ್ಟ್, ಅರಶಿನ, ಜೀರಿಗೆ ಹುಡಿ, ಕೊತ್ತಂಬರಿ ಹುಡಿ, ಮೆಣಸಿನ ಹುಡಿ, ಸಕ್ಕರೆ ಬೆರೆಸಿ ಸೌಟ್‍ನಲ್ಲಿ ತಿರುಗಿಸಿ.

10. ಈಗ ಫ್ರೈ ಮಾಡಿದ ಚಿಕನ್ ತುಂಡುಗಳನ್ನು ಅದಕ್ಕೆ ಸೇರಿಸಿ ಮತ್ತು ಉಪ್ಪು ಹಾಕಿ.

11. ಸ್ವಲ್ಪ ನೀರು ಹಾಕಿ ಮತ್ತು ಚೆನ್ನಾಗಿ ಮಿಶ್ರ ಮಾಡಿ.

12. ಕಡಾಯಿಗೆ ಮುಚ್ಚಳ ಮುಚ್ಚಿ 20 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಲು ಬಿಡಿ.

13. ಒಮ್ಮೆ ಚಿಕನ್ ಬೆಂದ ನಂತರ, ಮುಚ್ಚಳ ತೆಗೆಯಿರಿ ಮತ್ತು ಗ್ಯಾಸ್ ಆಫ್ ಮಾಡಿ.

14. ಕೊತ್ತಂಬರಿ ಸೊಪ್ಪಿನಿಂದ ಚಿಕನ್ ಕರಿಯನ್ನು ಅಲಂಕರಿಸಿ.

ರುಚಿಯಾದ ಮತ್ತು ಬಾಯಲ್ಲಿ ನೀರೂರಿಸುವ ಚಿಕನ್ ಮ್ಯಾಂಗೋ ರೆಸಿಪಿ ಸವಿಯಲು ಸಿದ್ಧವಾಗಿದೆ. ಇದನ್ನು ರೋಟಿ ಅಥವಾ ಅನ್ನದೊಂದಿಗೆ ಸೇವಿಸಿ.

X
Desktop Bottom Promotion