For Quick Alerts
ALLOW NOTIFICATIONS  
For Daily Alerts

ಫಿಶ್ ಪ್ರಿಯರಿಗಾಗಿ ಈ ಫಿಶ್ ಟಿಕ್ಕಾ

|

ಫಿಶ್ ಪ್ರಿಯರಾಗಿದ್ದರೆ ಈ ಫಿಶ್ ಟಿಕ್ಕಾ ಟ್ರೈ ಮಾಡಬಹುದು. ಇದು ಮೈಕ್ರೋವೇವ್ ರೆಸಿಪಿಯಾದರೂ ಗ್ಯಾಸ್ ಅಥವಾ ಕೆಂಡದಲ್ಲಿಯೂ ಮಾಡಬಹುದು. ಈ ಫಿಶ್ ಟಿಕ್ಕಾ ತಯಾರಿಸಲು ಮುಳ್ಳು ಕಮ್ಮಿಯಿರುವ ಮೀನನ್ನು ಬಳಸಬೇಕಾಗುತ್ತದೆ. ಇದನ್ನು ಮಾಡುವ ವಿಧಾನ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಫಿಶ್ ಟಿಕ್ಕಾ ರೆಸಿಪಿ

 Tandoori Fish Tikka Recipe

ಬೇಕಾಗುವ ಸಾಮಾಗ್ರಿಗಳು
* ಮುಳ್ಳಿಲ್ಲದ ಮೀನು ಅರ್ಧ ಕೆಜಿ
* ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 2 ಚಮಚ
* ಅರಿಶಿಣ ಪುಡಿ 1 ಚಮಚ
* ಕೊತ್ತಂಬರಿ ಪುಡಿ 1 ಚಮಚ
* ಖಾರದ ಪುಡಿ 1 ಚಮಚ
* ತಂದೂರಿ ಪುಡಿ 1 ಚಮಚ
* ಮೊಸರು 2 ಚಮಚ
* ನಿಂಬೆರ ರಸ 2 ಚಮಚ
* ಕಡಲೆ ಹಿಟ್ಟು 1 ಚಮಚ
* ಎಣ್ಣೆ 2 ಚಮಚ
* ಎಣ್ಣೆ 2 ಚಮಚ
* ರುಚಿಗೆ ತಕ್ಕ ಉಪ್ಪು
* ಹಸಿ ಮೆಣಸಿನ ಕಾಯಿ 4
* ಈರುಳ್ಳಿ 1
(ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಪೇಸ್ಟ್ ಮಾಡಿ)

ತಯಾರಿಸುವ ವಿಧಾನ:

* ಮೀನನ್ನು ಸ್ವಚ್ಛ ಮಾಡಿ ಅದಕ್ಕೆ ಉಪ್ಪು, ಅರಿಶಿಣ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ.

* ನಂತರ ಮೊಸರಿಗೆ ಕೊತ್ತಂಬರಿ ಪುಡಿ, ಖಾರದ ಪುಡಿ, ತಂದೂರಿ ಪುಡಿ, ಕಡಲೆ ಹಿಟ್ಟು, ನಿಂಬೆ ರಸ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ ಇಡಿ.

* ಈಗ ಮೈಕ್ರೋವೇವ್ ಅನ್ನು 300 ಡಿಗ್ರಿಗೆ ಪ್ರೀ ಹೀಟ್ ಮಾಡಿ, ನಂತರ ಮೀನನ್ನು ಮೊಸರಿನ ಮಿಶ್ರಣದಲ್ಲಿ ಅದ್ದಿ ಗ್ರಿಲ್ ಗೆ ಚುಚ್ಚಿ, ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯ ಪೇಸ್ಟ್ ಸವರಿ, ನಂತರ ಎಣ್ಣೆ ಸವರಿ, 15 ನಿಮಿಷ ಬೇಯಿಸಿದರೆ ಫಿಶ್ ಟಿಕ್ಕಾ ರೆಡಿ.

ಗ್ಯಾಸ್ ನಲ್ಲಿ ಮಾಡುವುದಾದರೆ ಈ ರೀತಿ ಮಾಡಿ

ಉದ್ದದ ತಂತಿಗೆ ಮೊಸರಿನಲ್ಲಿ ಅದ್ದಿ ತೆಗೆದ ಫಿಶ್ ತುಂಡುಗಳನ್ನು ಚುಚ್ಚಿ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯ ಪೇಸ್ಟ್ ಸವರಿ, ನಂತರ ಎಣ್ಣೆ ಸವರಿ, ಗ್ಯಾಸ್ ನಲ್ಲಿ ರೊಟೇಟ್ ಮಾಡುತ್ತಾ 20-25 ನಿಮಿಷ ಸಾಧಾರಣ ಉರಿಯಲ್ಲಿ ಬೇಯಿಸಿದರೆ ಫಿಶ್ ಟಿಕ್ಕಾ ರೆಡಿ.

English summary

Spicy Tandoori Fish Tikka Recipe

Tandoori fish tikka is basically a Punjabi recipe. This fish tikka recipe is also called Amritsari fish tikka sometimes. This fish kebab comprises of chewy pieces of fish soaked in tandoori masala and then grilled in the tandoor.
X
Desktop Bottom Promotion