For Quick Alerts
ALLOW NOTIFICATIONS  
For Daily Alerts

ಸಂಜೆಯ ತಾಜಾ ಸ್ನ್ಯಾಕ್ಸ್ ಮಸಾಲಾ ಚಿಕನ್ ಲೆಗ್!

|

ನಿಮ್ಮ ಸಂಜೆಯ ವಾತಾವರಣವನ್ನು ಸ್ಪೈಸಿಯಾಗಿರಿಸಲು ಈ ಮಸಾಲೆಯುಕ್ತ ಚಿಕನ್ ಲೆಗ್ ಖಂಡಿತ ಸಹಾಯ ಮಾಡುತ್ತದೆ. ಸಂಜೆಯ ಸ್ನ್ಯಾಕ್ಸ್ ಆಗಿ ಇದನ್ನು ನಿಮಗೆ ಸುಲಭವಾಗಿ ತಯಾರಿಸಬಹುದು. ಸಂಜೆಯ ತಿಂಡಿ ಯಾವಾಗಲೂ ಲೈಟ್ ಆಗಿರಬೇಕೆಂದು ಹೇಳುತ್ತಾರೆ.

ಬಾಯಲ್ಲಿ ನೀರೂರಿಸುವ ಚಿಕನ್ ಚಾಟ್ ರೆಸಿಪಿ

ಈ ಮಸಾಲೆಯುಕ್ತ ಚಿಕನ್ ಲೆಗ್ ಕೂಡ ನಿಮಗೆ ಸಂಜೆಯ ತಿಂಡಿಯನ್ನು ಸ್ಪೈಸಿ ಹಾಗೂ ಸೊಗಸಾಗಿಸುತ್ತದೆ. ಇಲ್ಲಿ ನಾವು ನೀಡಿರುವ ಸ್ಪೈಸಿ ಚಿಕನ್ ಲೆಗ್ ತಯಾರಿ ವಿಧಾನವು ನಿಮಗೆ ಸುಲಬವಾಗಿ ಈ ರೆಸಿಪಿಯನ್ನು ಕಲಿಸಲು ಸಹಾಯ ಮಾಡುತ್ತದೆ.

Spicy Fried Chicken Legs Recipe: Video

ಇದು ಅಷ್ಟೊಂದು ಆರೋಗ್ಯಕರವಾಗಿಲ್ಲದಿದ್ದರೂ ಅಪರೂಪಕ್ಕೆ ಸೇವಿಸಲು ತುಂಬಾ ಉತ್ತಮ. ಸಂಜೆಯ ತಿಂಡಿ ರುಚಿಯನ್ನು ಹೆಚ್ಚಿಸಲು ಈ ಚಿಕನ್ ಲೆಗ್ ನಿಮಗೆ ಸಹಾಯಕ.

ಬೆಳಗ್ಗಿನ ಉಪಹಾರಕ್ಕಾಗಿ ರುಚಿಕರವಾದ ಆಮ್ಲೇಟ್ ರೆಸಿಪಿ!

ಪ್ರಮಾಣ: 1
*ಸಿದ್ಧತಾ ಸಮಯ: 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು

ಸಾಮಾಗ್ರಿಗಳು:
*ಚಿಕನ್ ಲೆಗ್ಸ್ - 2
*ಪೆಪ್ಪರ್ ಕಾರ್ನ್ಸ್ - 1 ಸ್ಪೂನ್
*ಶುಂಠಿ - 2 ಇಂಚುಗಳು
*ಬೆಳ್ಳುಳ್ಳಿ - 6-8 ಎಸಳು
*ಮೆಣಸಿನ ಹುಡಿ - 1 ಸ್ಪೂನ್
*ಚಿಕನ್ ಮಸಾಲಾ - 2 ಸ್ಪೂನ್
*ಗೋಧಿ ಹುಡಿ - 1/2 ಕಪ್
*ಎಣ್ಣೆ - 2 ಕಪ್‌ಗಳು
*ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
1. ಎರಡು ಚಿಕನ್ ಲೆಗ್‌ಗಳನ್ನು ತೆಗೆದುಕೊಂಡು ಚಾಕುವಿನಿಂದ ಅದನ್ನು ಎರಡು ಭಾಗಗಳನ್ನಾಗಿ ಮಾಡಿ ಇದರಿಂದ ಮಸಾಲೆ ಆಳಕ್ಕೆ ಇಳಿಯುತ್ತದೆ.
2. ಪೆಪ್ಪರ್ ಕಾರ್ನ್ಸ್, ಶುಂಠಿ ಹಾಗೂ ಬೆಳ್ಳುಳ್ಳಿಯ ಮಿಶ್ರಣವನ್ನು ಮಾಡಿ. ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
3. ಮೆಣಸಿನ ಹುಡಿ ಮತ್ತು ಚಿಕನ್ ಮಸಾಲಾವನ್ನು ಈ ಮಿಶ್ರಣಕ್ಕೆ ಸೇರಿಸಿ ಹಾಗೂ ಚೆನ್ನಾಗಿ ಕಲೆಸಿ.
4. ಚಿಕನ್ ಕಾಲುಗಳಿಗೆ ಈ ಮಸಾಲಾ ಮಿಶ್ರಣವನ್ನು ಸವರಿ ಹಾಗೂ 30 ನಿಮಿಷಗಳ ಕಾಲ ಇದನ್ನು ಹಾಗೆಯೆ ಬಿಡಿ.
5. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಲು ಇಡಿ. ಅದು ಕಾಯುತ್ತಿದ್ದಂತೆ, ಗೋಧಿ ಹುಡಿಯಲ್ಲಿ ಚಿಕನ್ ಕಾಲುಗಳನ್ನು ಉರುಳಿಸಿ ಇದರಿಂದ ಕಾಲುಗಳಿಗೆ ಸವರಿರಿವ ಮಸಾಲೆ ಬೇರ್ಪಡುವುದಿಲ್ಲ.
6. ಇದನ್ನು ಕಾದಿರುವ ಎಣ್ಣೆಗೆ ಹಾಕಿ ಮತ್ತು ಚೆನ್ನಾಗಿ ಹುರಿಯಿರಿ.
7. ಮುಚ್ಚಳವನ್ನು ಮುಚ್ಚಿ ಇದರಿಂದ ಚಿಕನ್ ಲೆಗ್ ಇನ್ನಷ್ಟು ಹೊತ್ತು ಬೆಂದು ಗರಿಗರಿಯಾಗುತ್ತದೆ.

ಹೀಗೆ ತಯಾರಿಸಿದ ಚಿಕನ್ ಲೆಗ್ ಫ್ರೈಯನ್ನು ಟೀ ಅಥವಾ ಕಾಫಿಯೊಂದಿಗೆ ಬಿಸಿಬಿಸಿಯಾಗಿ ಸೇವಿಸಿ.
<center><iframe width="100%" height="417" src="//www.youtube.com/embed/44XbT7iDQcY" frameborder="0" allowfullscreen></iframe></center>

English summary

Spicy Fried Chicken Legs Recipe: Video

Spicy fried chicken legs are a great way to celebrate your evenings. Usually, we keep evening snacks simple at home. However, to make your evening special, you can spice it up with some homemade fried chicken legs.&#13;
Story first published: Thursday, May 15, 2014, 11:54 [IST]
X
Desktop Bottom Promotion