For Quick Alerts
ALLOW NOTIFICATIONS  
For Daily Alerts

ರುಚಿ ಹೆಚ್ಚಿಸುವ ಖಾರವಾದ ಚಿಕನ್ ಮಂಚೂರಿಯನ್ ರೆಸಿಪಿ

|

ಕೆಲವೊಂದು ಚೈನೀಸ್ ರೆಸಿಪಿಗಳು ಭಾರತೀಯ ಖಾದ್ಯಗಳ ಜೊತೆಯಲ್ಲಿ ಸೇರಿ ಅವುಗಳು ಸಹ ನಮ್ಮ ದೇಶದ ಖಾದ್ಯಗಳು ಎಂಬಂತಾಗಿ ಹೋಗಿವೆ. ಚಿಲ್ಲಿ ಚಿಕನ್ ಅಥವಾ ಚಿಕನ್ ಮಂಚೂರಿಯನ್ ಅನ್ನು ನೀವು ಚೈನೀಸ್ ಖಾದ್ಯ ಎಂದು ಕರೆಯಲು ಮನಸ್ಸು ಒಪ್ಪುವುದಿಲ್ಲ. ಈ ಖಾದ್ಯಗಳನ್ನು ಅವುಗಳ ಮೂಲ ಚೈನೀಸ್ ಆವೃತ್ತಿಯಿಂದ ಭಾರತೀಯ ಆವೃತ್ತಿಗೆ ಸ್ವಲ್ಪ ಬದಲಾವಣೆಯನ್ನು ಮಾಡಲಾಗಿರುತ್ತದೆ. ಹೀಗಾಗಿ ಇವು ಅಪ್ಪಟ ಭಾರತೀಯ ಖಾದ್ಯಗಳಾಗಿ ಹೋಗಿವೆ.

ಮಂಚೂರಿಯನ್ ಸಾಸ್‍ನಲ್ಲಿ ಚಿಕನ್ ಈಗ ನಮ್ಮ ಅಚ್ಚುಮೆಚ್ಚಿನ ಖಾದ್ಯಗಳಲ್ಲಿ ಒಂದಾಗಿ ಹೋಗಿದೆ. ಇದನ್ನು ನಾವು ಸ್ನ್ಯಾಕ್ಸ್ ಆಗಿ ಮತ್ತು ಚೈನೀಸ್ ಫ್ರೈಡ್ ರೈಸ್ ಜೊತೆಗೆ ಸಹ ಸೇವಿಸುತ್ತೇವೆ. ಕೆಲವೊಂದು ಚೈನೀಸ್ ರೆಸಿಪಿಗಳು ಭಾರತೀಯ ಖಾದ್ಯಗಳ ಜೊತೆಯಲ್ಲಿ ಸೇರಿ ಅವುಗಳು ಸಹ ನಮ್ಮ ದೇಶದ ಖಾದ್ಯಗಳು ಎಂಬಂತಾಗಿ ಹೋಗಿವೆ.

ಚಿಲ್ಲಿ ಚಿಕನ್ ಅಥವಾ ಚಿಕನ್ ಮಂಚೂರಿಯನ್ ಅನ್ನು ನಮಗೆ ಚೈನೀಸ್ ಖಾದ್ಯ ಎಂದು ಕರೆಯಲು ಮನಸ್ಸು ಒಪ್ಪುವುದಿಲ್ಲ. ಈ ಖಾದ್ಯಗಳನ್ನು ಅವುಗಳ ಮೂಲ ಚೈನೀಸ್ ಆವೃತ್ತಿಯಿಂದ ಭಾರತೀಯ ಆವೃತ್ತಿಗೆ ಸ್ವಲ್ಪ ಬದಲಾವಣೆಯನ್ನು ಮಾಡಲಾಗಿರುತ್ತದೆ. ಹೀಗಾಗಿ ಇವು ಅಪ್ಪಟ ಭಾರತೀಯ ಖಾದ್ಯಗಳಾಗಿ ಹೋಗಿವೆ. ಮಂಚೂರಿಯನ್ ಸಾಸ್‍ನಲ್ಲಿ ಚಿಕನ್ ಈಗ ನಮ್ಮ ಅಚ್ಚುಮೆಚ್ಚಿನ ಖಾದ್ಯಗಳಲ್ಲಿ ಒಂದಾಗಿ ಹೋಗಿದೆ. ಇದನ್ನು ನಾವು ಸ್ನ್ಯಾಕ್ಸ್ ಆಗಿ ಮತ್ತು ಚೈನೀಸ್ ಫ್ರೈಡ್ ರೈಸ್ ಜೊತೆಗೆ ಸಹ ಸೇವಿಸುತ್ತೇವೆ. ಕ್ಯಾರೆಟ್ ಮಂಚೂರಿಯನ್ ರುಚಿ ನೋಡಿದ್ದೀರಾ?

Spicy Chicken Manchurian Recipe

ಪ್ರಮಾಣ - 2 ಮಂದಿಗೆ ಸಾಕಾಗುವಷ್ಟು
*ತಯಾರಿಕೆಗೆ ಬೇಕಾಗುವ ಸಮಯ: 20 ನಿಮಿಷಗಳು
*ಅಡುಗೆ ಬೇಕಾಗುವ ಸಮಯ: 30 ನಿಮಿಷಗಳು

ಪದಾರ್ಥಗಳು
*ಕೋಳಿ ಮಾಂಸ (ಮೂಳೆ ಇಲ್ಲದ್ದು) - 1/2 ಕೆಜಿ
*ಕಾರ್ನ್ ಫ್ಲೋರ್ - 1 ಕಪ್
*ಮೊಟ್ಟೆಗಳು - 2 (ಒಡೆದು ಕಲಿಸಿದಂತಹವು)
*ಹಸಿ ಮೆಣಸಿನ ಕಾಯಿಗಳು - 6 (ಕತ್ತರಿಸಿದಂತಹವು)
*ಸೋಯಾ ಸಾಸ್ - 3 ಟೀ.ಚಮಚ
*ಟೊಮೇಟೊ ಸಾಸ್ - 2 ಟೀ. ಚಮಚ
*ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಟೀ. ಚಮಚ
*ಬೆಳ್ಳುಳ್ಳಿ - 4 ತುಂಡು (ಕತ್ತರಿಸಿದಂತಹವು)
*ಶುಂಠಿ - 1 ಇಂಚು (ಕತ್ತರಿಸಿದಂತದ್ದು)
*ದಪ್ಪ ಮೆಣಸಿನಕಾಯಿ - 1 (ದೊಡ್ಡ ತುಂಡಾಗಿ ಕತ್ತರಿಸಿಕೊಳ್ಳಿ)
*ಸೆಲೆರಿ - 2 ತೊಟ್ಟುಗಳು (ಕತ್ತರಿಸಿದಂತಹವು)
*ಎಣ್ಣೆ - 1 ಕಪ್
*ಉಪ್ಪು- ರುಚಿಗೆ ತಕ್ಕಷ್ಟು ರುಚಿರುಚಿಯಾದ ಖಾರ ಚಿಕನ್ ಪೆಪ್ಪರ್ ಫ್ರೈ

ತಯಾರಿಸುವ ವಿಧಾನ
*ಒಂದು ಬಟ್ಟಲು ತೆಗೆದುಕೊಂಡು ಅದರಲ್ಲಿ ಕಾರ್ನ್ ಫ್ಲೋರ್, ಮೊಟ್ಟೆ, ಕತ್ತರಿಸಿದ ಹಸಿ ಮೆಣಸಿನ ಕಾಯಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿಗಳ ಪೇಸ್ಟನ್ನು ಹಾಕಿ ಅದಕ್ಕೆ 1/2 ಲೋಟ ಬಿಸಿ ನೀರನ್ನು ಬೆರೆಸಿ ಚೆನ್ನಾಗಿ ಕಲೆಸಿಕೊಳ್ಳಿ.
*ಇನ್ನು ಆಳವಾದ ತಳ ಇರುವ ಪಾತ್ರೆಯ ಮೇಲೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಾಯಿಸಿ. ಇದು ಕಾದ ಮೇಲೆ, ಕೋಳಿ ಮಾಂಸದ ತುಂಡುಗಳನ್ನು ಹಿಟ್ಟಿನಲ್ಲಿ ಚೆನ್ನಾಗಿ ನೆನೆಸಿ ಮತ್ತು ಎಣ್ಣೆಯಲ್ಲಿ ಅವುಗಳನ್ನು ಬಿಡಿ.
*ಈಗ ಕೋಳಿ ಮಾಂಸದ ತುಂಡುಗಳನ್ನು 3-4 ನಿಮಿಷ ಡೀಪ್ ಫ್ರೈ ಮಾಡಿ. ನಂತರ ಅವುಗಳನ್ನು ಟಿಶ್ಯೂ ಪೇಪರ್ ಮೇಲೆ ಹಾಕಿ, ಎಣ್ಣೆ ಇಳಿಯಲು ಬಿಡಿ.
*ತದನಂತರ 2 ಟೀ.ಚಮಚ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಬಿಸಿಯಾಗಲು ಬಿಡಿ, ಇದರ ಮೇಲೆ ಶುಂಠಿ ಮತ್ತು ಬೆಳ್ಳುಳ್ಳಿಗಳನ್ನು ಹಾಕಿ. ನಂತರ ಇದಕ್ಕೆ ಹಸಿ ಮೆಣಸಿನ ಕಾಯಿಗಳನ್ನು ಹಾಕಿ ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ 2 ನಿಮಿಷಗಳ ಕಾಲ ಬೇಯಿಸಿ.
*ಇದಕ್ಕೆ ಸೋಯಾ ಸಾಸ್, ಟೊಮೇಟೊ ಕೆಚಪ್ ಹಾಕಿ. ಒಂದು ನಿಮಿಷಗಳ ಕಾಲ ಬೇಯಿಸಿ. ಈಗ ಪಾತ್ರೆಗೆ ಸೆಲೆರಿ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ. ನಂತರ 1/2 ಕಪ್ ನೀರು ಹಾಕಿ ಮತ್ತು ನಂತರ ಫ್ರೈ ಮಾಡಿದ ಕೋಳಿ ಮಾಂಸದ ತುಂಡುಗಳನ್ನು ಪಾತ್ರೆಗೆ ಹಾಕಿ.
*ನಂತರ 3-4 ನಿಮಿಷಗಳ ಕಾಲ ಸಿಮ್‍ನಲ್ಲಿ ಇದನ್ನು ಬೇಯಿಸಿ. ಒಂದು ವೇಳೆ ಈ ಗ್ರೇವಿಯು ತುಂಬಾ ನೀರು ನೀರಿನಂತೆ ಇದ್ದರೆ, ಅದಕ್ಕೆ ಸ್ವಲ್ಪ ಕಾರ್ನ್‍ಫ್ಲೋರ್ ಬೆರೆಸಿ. ರುಚಿ ರುಚಿಯಾದ ಚಿಕನ್ ಮಂಚೂರಿಯನ್ ರೆಡಿ!
ಈ ಚಿಕನ್ ಮಂಚೂರಿಯನ್ ಅನ್ನು ನೀವು ಸ್ನ್ಯಾಕ್ಸ್ ಆಗಿ ಸೇವಿಸಬಹುದು ಅಥವಾ ನೂಡಲ್ಸ್ ಜೊತೆಗೆ ಕೂಡ ಸೇವಿಸಬಹುದು.

English summary

Spicy Chicken Manchurian Recipe

Some Chinese recipes are so popular that they have become quintessentially Indian. You can hardly call chilli chicken or chicken manchurian a recipe that is Chinese. Chicken in manchurian sauce is a dish that is one of our favourites. We have this both as snacks and with Chinese fried rice.
X
Desktop Bottom Promotion